ಪೆರುಮಾಳನ ಕೆಂದಾವರೆ ಅರಳಿದೆ ನಸುನಕ್ಕೆ! ಹರಿನೀಲದ ಬಾನೊಳಗಿನ ಸಿಂಧೂರದ ಚುಕ್ಕೆ. ನಲಿವಿನ ನಲಿನವು ತಾನೇ ತಾನಾಗಿಯೆ ಬಿಚ್ಚೆ ಏಳ್ಮಡಿ ಧಾಳಾಧೂಳಿಯ ಏಳ್ಳಣ್ಣದ ಕಿಚ್ಚೇ ಕಾರಣತನುವಿನ ಕೃತಿಯೇ ಸವಿಯೇ ಹರಿವರಿಯೇ ಮನುಹೃದಯದಿ ಚಿಗಿ ನಿಗಿನಿಗಿ ಜಿಗಿ ಮೇ...

ಮಧುಮಧುರವಾದ ಹಿರಿಹಗಲು ಒಂದು ಬೆಳಗಿತ್ತು ಅವನ ಸುತ್ತು. ಹರ್ಷಾವತರಣ ಆನಂತ್ಯದಿಂದ ಪ್ರಭೆ ಬೀರಿದಂತೆ ಇತ್ತು. ಬಂಗಾರನಗೆಯ ಹೊಂಗಾವಲಲ್ಲಿ ಮೆರೆದಿಹವು ಸುಖದ ಬೀಡು, ಬಿಡುಗಡೆಯ ಪಡೆದ ಒಳಗಡೆಯ ಎದೆಯ ಹದಹದುಳವುಳ್ಳ ನಾಡು. ಆದೇವದೇವನಾ ಸೋಮರಸವು ಮೈಗಿಳ...

೧ ಮೌನ ಮೌನಾ, ಮೌನಾ, ಮೌನಾ ಮೌನ-ವಿಮಾನಾರೂಢಾ ಅಮೃತಾತ್ಮಾ, ತರ! ಉತ್ತರ! ಭೋ ಉಧ್ವ್ರೋಧ್ವ್ರೋ, ಭೋ ಈ ಮಾಯಾಮಂಡಲ ಮುರಿಯೋ, ದಾಟೈ ಆ ತಿರ್ರನ ಚಕ್ರ ಏರೈ, ಏಕಾ, ಏಕೈಕಾ ಮರಣೋತ್ತೀರ್ಣಾ ಫೂಃ! ಪಿಸುಪಿಸು ಮಾತೋ ಮಾತು, ಇರುಳಿರುಳಿನ ಭುಂಭೋದ್ಗಾರಾ ಕರೆ,...

(ಕೆಲವು ಸಾಲುಗಳು) ಕಾಂಬನೊಬ್ಬ ಒಳಗಿಹನು ಬಲ್ಲನೋರಣದ ಹಂಚು-ಸಂಚು. ಅದು ಕಾಣದಣ್ಣ ಕಾಲಲ್ಲೆ ಇದು ಅಡಿಗಡಿಗು ಅದರ ಅಂಚು. ಊದಿ ಉಸಿರನುಬ್ಬಿಸುವನೆಮ್ಮ ಕಣ್ಣಾಚೆ ಶಿಖರಗಳಿಗೆ ಹುಟ್ಟು-ಬಾಳುಗಳ ದರಿಗೆ ನೂಗಿದೊಲು ಹಿಂದೆ ಒಮ್ಮೆ ನಮಗೆ ಕಾಲಪಥಿಕನಾ ಕಿವಿಗ...

ಅಧಃಪತಿತ ನಿಃಸೀಮ ಆತ್ಮದೆಚ್ಚತ್ತ ಶಕ್ತಿ ಒಂದು ಇಲ್ಲತನದ ಕೊನೆ-ಮೊದಲುಗಳಲಿ ಅರೆಅರವು ಮರವುಗೊಂಡು ಇದು ಬಿಡಿಸಬರದ ಕಗ್ಗಂಟು ಕೂಟ ಜನ್ಮದ ರಹಸ್ಯವೆಂದು ಅತಿಸಾವಕಾಶಗತಿಯಲ್ಲಿ ನಡೆದ ಮೃತರೀತಿ ಮನಕೆ ತಂದು ತಾನು ಬಂದ ಘನ ಅಂಧಗರ್ಭವಾಸವನೆ ಮರಳಿ ನೆನಿಸಿ...

ಹೊಕ್ಕೆ ನಾನು ಅಚಲಪ್ರಸನ್ನ ಪ್ರಾಸಾದಸೌಧ ಒಂದು. ಸ್ಪಟಿಕಮುಕುರ ಪ್ರತಿಬಿಂಬ ಎಂಬ ತೆರ ಕಂಡೆ ದಿನ್ಯ ಅಂದು. ನಾಗಮೋಡಿಯಲಿ ಏರುತಿತ್ತು ಏನೋ ಪುರಾಣಶಕ್ತಿ, ಯುಗದಜುಗದ ತಿರುಪಣಿಯ ದಾರಿಯನು ಸಾವಕಾಶ ಹತ್ತಿ. ಜನ್ಮಮರಣದಜ್ಞಾನಬಂಧ ಬೆಳಕಾಗಿ ಬಿಡಿಸಿಕೊಂಡು...

ಎಲ್ಲ ನಾದದಲಿ ಎಲ್ಲ ದನಿಗಳಲಿ ದೇವವಾಣಿ ಜಾಗು ಹಾಡು-ಪಾಡು ಗುಡುಗಾಟ ಮತ್ತೆ ಕುಹುಕಾಟ ಕೇಕ ಕೂಗು. ಹರ್ಷಶೋಕದಲಿ ಮಿಕ್ಕಿಬರುವ ಜೀವನದ ತೊದಲು ಬದಲು ವೈಖರಿಯ ಗಮಕ, ಗುಂಗುಣಿಸಿ ಬರುವ ಸವಿನುಡಿಯ ಯಮಕಗಳಲು. ಕಡಲ ಮೊರೆತ ಕುಣಿಕುಣಿದು ನೊರೆಯ ತೆರೆತೆರೆಯ...

ಆನಂದ ತನುಜೆ, ಅನುಭೂತಿಯನುಜೆ, ಅದ್ಭುತ ಪವಾಡದಂತೆ ಓ ಜಾತಿವಂತೆ ನನ್ನಿದಿರು ಧ್ಯಾನದಲಿ ಮಗ್ನಳಾಗಿ ನಿಂತೆ ದಿಗ್ದಂತಿದಂತ ಚಾಚಿರುವನಂತದಾಚೆಯಲಿ ನಿನ್ನ ಚೂಚು ಏನು ಹಾರಿಕೆಯ ದೌಡು ಇಡುವೆ ಆ ಚಿರಂತನದ ಕೂಚು. ಗಗನ ಶಿಖರಕೇರುತ್ತ ನಡೆದೆ ಹೇ ಗಗನ ದೇಹ ...

ಕಮಲವನ ಸಂಚಾರಿಣಿಯೆ ಮಹಾಲಕ್ಷ್ಮೀ ಬೇಕೇ ಆಸನ ಅರುಣಚರಣೇ ಮಾಡು ನನ್ನೀ ಹೃದಯವನೆ ಸಿಂಹಾಸನ ವಿಶ್ವಸುಂದರಿ ನಿಖಿಲಜಗದಾನಂದಕರಿ ಹೇ ಯೋಗಿನೀ ವಿರಸ ಹೃದಯತ್ಯಾಗಿ ನೀರಸ ಭಕ್ತಿ ಬಂಧನ ಭೋಗಿನೀ ವಾಪದೂರೇ ಮಾಡು ನನ್ನನು ನಿನ್ನನುಗ್ರಹದಾಗರಾ ಮಧುರ ಕೌಶಲ ಮಾಯ...

ನಿದ್ದೆಯಲ್ಲಿ ಬಿದ್ದೇಕೆ ಆತ್ಮನೇ ಏಳು ಆಳದಿಂದ ಏಳು ಏಳು ಜಗದಗ್ನಿಲಿಂಗವೇ ದೇವಕಿರಣದಂದ ಎತ್ತು ನಿನ್ನ ಮನ, ಎತ್ತು ಹೃದಯಧನ, ಏರು ಯಶದ ತೆಂಗು ತಿಮಿರ-ಗರ್ಭದರ್ಭಕನೆ ಸೂರ್ಯನೇ `ತತ್ತ್ವಮಸಿ’ಯ ನುಂಗು ಏಕ ವಿಶ್ವ, ಸರ್ವಾತ್ಮಸೃಷ್ಟಿಯೇ ಏಳು ಯೋ...

1...1011121314...16