
ಬುದ್ಧ ಹೇಳುತ್ತಿದ್ದ “ಆಶೆಯೇ ದುಃಖದ ಮೂಲ” ಹೊರಗಿನಿಂದ ಬಂದ ವ್ಯಾಪಾರಿ ಮಾಯಾಜಾಲ ಡಾಲರ್ ಲೆಕ್ಕಾಚಾರ ಇಂದ್ರ ಸಭೆಯಲ್ಲಿ ಸ್ವರ್‍ಗಸುಖ ದೇವಲೋಕವೆಲ್ಲ ಖಾಲಿಖಾಲಿ ಮೋಕ್ಷ ಮರೀಚಿಕೆ ಕಂಪನಿಗಳದೇ ಕಾರುಭಾರು ಇಂದ್ರ ಸಭೆಯ ರಿಮೋಟು ಕುಬೇರರಾ...
ಗುತ್ತಿಗೆದಾರರ ದೇವಸ್ಥಾನದಲ್ಲಿ ಜೀತಕ್ಕಿರುವ ದೇವರುಗಳೇ ಹೇಳಿ ಈ ಎಂಜಲೆಲೆ ಎತ್ತುತ್ತ ತುತ್ತು ಕೂಳಿಗಾಗಿ ಎಸೆದ ಎಲೆಗಳ ಸುತ್ತ ನಿಂತವರು ಬೀದಿ ಮಕ್ಕಳು ತಾನೆ? ದೇವರೇ ನೋಡಲ್ಲಿ ಹೆಕ್ಕುತ್ತಿರುವ ತುತ್ತನ್ನು ಮಕ್ಕಳ ಕೈಯಿಂದ ಕಿತ್ತು ತಿನ್ನುತ್ತಿರು...
ಬಿರುಗಾಳಿಯ ಎದುರು ಉರೀದಿತು ಯಾವ ದೀಪ? ಸಮುದ್ರದಲೆಗಳ ಎದುರಿಸಿ ಯಾವ ಗೋಡೆ ತಾನೆ ನಿಂತೀತು? ಭಯಂಕರ ಅಲೆ ಬಿರುಗಾಳಿಗೆ ಬೆದರದೇ ಬೆಚ್ಚದ ಉರಿಯುತ್ತಿದೆ ನೋಡು ಪ್ರೀತಿಯ ದೀಪ. ತೇಲಿ ಹೋದಳು ನೋಡು ಕನಸುಗಾತಿ ನೀರಮೋಡಗಳ ರಥವನ್ನೇರಿ ಕಳೆದು ಹೋದಳು ಹುಡ...
ಸೂರ್‍ಯ ಹುಟ್ಟುವ ಮುನ್ನ ಆ ಪುಟ್ಟ ಹುಡುಗಿಯ ಬರಿಗಾಲಿನ ನಡೆಗೆ ಆರಂಭ ಹರಡಿದ್ದ ತಲೆಗೂದಲು ಬಾಚಿಕೊಳ್ಳುವ ಗೊಡವೆಯಿಲ್ಲ ತಡವಾದರೆ ಚಿಂದಿ, ಪ್ಲಾಸ್ಟಿಕ್ ಬೇರೆಯವರು ಆಯ್ದುಕೊಂಡಾರು ಕಣ್ಣುಜ್ಜಿಕೊಳ್ಳುತ್ತಲೇ ಎದ್ದು ಕೊಳಕು ಚೀಲವೊಂದು ಹೆಗಲಿಗೇರಿಸಿ ಹ...
ಭಾಗ ೧ ಕೂಗಬೇಕೆಂದರೆ ಹಾಳಾದ್ದು ಧ್ವನಿಯೇ ಹೊರಡುತ್ತಲಿಲ್ಲ ಧ್ವನಿಪೆಟ್ಟಿಗೆ ಸ್ಟ್ರಕ್ ಆಯಿತೇ? ಒಡಲಾಳದಲ್ಲಿ ಹುಗಿದಿಟ್ಟ ಅದೆಷ್ಟೋ ಇತಿಹಾಸದ ಪುಟಗಳು ತೊಟ್ಟ ದಾಗೀನ ಆಭರಣ ಸಹಿತ ಸಂಸ್ಕೃತಿಯ ಗೋರಿಯೊಳಕ್ಕೆ ತನ್ನ ತಾನೇ ಹುಗಿದುಕೊಂಡು ಮುಳ್ಳುಬೇಲಿಯ ...
ಮುರಿದ ಮೀನಾರುಗಳು, ಕಡಿದ ಮಂದಿರಗಳು ಹಾಳು ಗೋಡೆ ಅವಶೇಷ ಕೋಟೆ ಕೊತ್ತಳಗಳು ಗತ ಮರೆತ ಇತಿಹಾಸದ ಪುಟಗಳು ಸರಸ ಜನನ, ವಿರಸಮರಣವೆಂದೆ ಸಮರಸವೇ ನಿನ್ನ ಬದುಕಾಯ್ತು ಗೆಳೆಯಾ! ಲವಲವಿಕೆಯ ನಗುವಿನ ಒಡೆಯ ನೀನು ಸುನೀಲಾಳ ಬದುಕಿಗೆ ಪ್ರೀತಿ ಸುರಿದಾತ ಸಮನ್ವ...
ಆಗಸದ ಝಗಝಗಿಸುವ ನಕ್ಷತ್ರಗಳು ಸಾಮೂಹಿಕ ರಜೆ ಹಾಕಿ ಹೋಗಿದ್ದವು. ವಸುಂಧರೆಯ ಮೇಲೆ ಚಿಗರೆಯಂತೆ ಪಟಪಟನೆ ಪುಟಿನಗೆಯುವ ಒಂದೇ ಒಂದು ನಕ್ಷತ್ರ ಮಿನುಗುತ್ತಿತ್ತು. ಪ್ರಖರವಾಗಿ ಹೊಳೆಯುತ್ತಿತ್ತು ಮೂಗುತಿ ಸುಂದರಿ ಆ ಚೆಲುವೆಯ ಆಟಕ್ಕೆ ಮನಸೋತು ತಲೆದೂಗಿ ...
ಬುದ್ಧನ ಹುಡುಕಿದೆ. ಉಸಿರುಗಟ್ಟಿಸುವ ನಾಗರೀಕ ತಾಣಗಳಲ್ಲಿ ಚಿತ್ರಹಿಂಸೆಯ ಗ್ಯಾಸ್ ಛೇಂಬರ್‌ಗಳಲ್ಲಿ ತೊಟ್ಟಿಲಲ್ಲಿ ಮಲಗಿದ ಮುದ್ದು ಕಂದನ ಮುಗ್ಧ ಮುಗುಳು ನಗೆಯ ಬೆಳಕಲ್ಲಿ ದ್ವೇಷವಿಲ್ಲ, ಮಗುವಿನ ಮುಗ್ಧತೆಯಲ್ಲಿ. ಬುದ್ಧನ ಹುಡುಕಿದೆ. ಬೆಳಗು ಮುಂಜಾವ...
ಬಿಸಿಲ ಸೂರ್‍ಯನ ಕಾವು ತಟ್ಟಿ ಕರುಳ ಬಳ್ಳಿಯ ಹೂವು ಬಾಡಿ ಶಂಕೆಯಿದ್ದರೆ ಶೋಧಿಸಿ ನೋಡಿರಿ ನನ್ನ ಮನೆ, ಮಾಡು, ಮೂಲೆ, ಗೂಡು ಬೇಕಿದ್ದರೆ ನನ್ನ ರಕ್ತದ ಕಣಕಣದಲ್ಲಿ ಕೋಟಿಕೋಟಿ ಜೀವಂತ ಸಾಕ್ಷಿಗಳಿವೆ. ಹೆಕ್ಕಿ ನೋಡಿರಿ ಮುಕ್ಕಾದರೂ ಸರಿಯೇ ಅಲ್ಲಿ ಪೂರ್...







