
ಗವ್ವೆನುವ ಗೂಢದಲಿ ಕತ್ತಲೆಯ ಮುಸುಕಿನಲಿ ಭಾರವಾದ ಎಣ್ಣೆಗಟ್ಟಿದ ಮಸುಕಾದ ಮೂಗುತಿ ತಲೆ ತು೦ಬ ಮುಸುಕು ಹೊದ್ದು ಮೊಳಕಾಲುಗಳ ಮಧ್ಯೆ ತಲೆ ತೂರಿಸಿ- ಮುಳುಮುಳು ಅತ್ತು ತಲೆ ತಗ್ಗಿಸಿ ಕೂಡದೇ, ವಿಷ ಜಂತುಗಳ ಎದೆಗೆ ಒದ್ದು – ತಲೆಯೆತ್ತಿ ನಡೆದರೆ,...
ಶತಮಾನಗಳ ಹಿಂದೆ ಲಜ್ಜೆಯ ಮುದ್ದೆಯಾಗಿ ಸಹನೆಗೆ ಸಾಗರವಾಗಿ, ಕ್ಷಮೆಗೆ ಭೂಮಿಯಾಗಿ, ತಾಳ್ಮೆಯ ಕೊಳ ತೊಟ್ಟು ದೇವಿಯ ಪಟ್ಟ ಪಡೆದು, ದಿನದಿನವೂ ಕತ್ತಲೆಯಲಿ ಅಸ್ತಿತ್ವ ಅಳಿಸಿಕೊಂಡು ಕನಸುಗಳ ಶೂಲಕ್ಕೇರಿಸಿ ಹೊಟ್ಟೆಯಲ್ಲಿ ಕೆಂಡದುಂಡೆಗಳ ಗಟ್ಟಿಯಾಗಿ ಕಟ್ಟ...
ಉಕ್ಕಿ ಹೊರ ಬರಲು ಯತ್ನಿಸುವ ಕಣ್ಣೀರಿಗೆ ಅಡ್ಡಗಟ್ಟಿ ಅಣೆಕಟ್ಟು ಕಟ್ಟಿ, ನಿಟ್ಟುಸಿರುಗಳ ನುಂಗಿ, ಹಸಿರಿನುಸಿರಿಗೆ ಹಂಬಲಿಸಿ, ಹಳದಿ ಕಾಯಿಲೆ ಓಡಿಸಿದ ಜೀವ ಸೂತ್ರ ಸ್ವತಂತ್ರ. ಮುಚ್ಚಿರುವ ಮುಸುಕಿನ ಅಡಿಯಲಿ ಹಿಡಿದಿಟ್ಟ ಬಿಗಿಯುಸಿರು ಸ್ವತಂತ್ರ ಕೋಗ...
ಕಡೆದು ನಿಲ್ಲಿಸಲಿಲ್ಲ ನಾನು ಗಾಳಿ ಗೋಪುರದ ಗೋಡೆ, ಕಂಬಗಳ ನೆಲ ಮುಗಿಲ ಗಾಳಿಯಲ್ಲಿ ಕಟ್ಟಲಿಲ್ಲ ನಾನು ತಾಜಮಹಲುಗಳ.. ಕನಸಿನ ಬುತ್ತಿ ಬಿಚ್ಚಲಿಲ್ಲ. ಸಾಮ್ರಾಜ್ಯಗಳ ನಾನು ಉರುಳಿಸಲಿಲ್ಲ. ಮತ್ತೆ ಎತ್ತರಕೆ ನಿಲ್ಲಿಸಲಿಲ್ಲ. ಮಹಲುಗಳ ಮಜಲುಗಳ ರಾಜರುಗಳ ...
ಜನಜಂಗುಳಿಯಲ್ಲಿ ಕಳೆದಿರುವ ಬದುಕಿನ ಜೊತೆಗಾರನಿಗೆ ಮತ್ತೆ ಮತ್ತೆ ಹುಡುಕುತ್ತೇನೆ, ಕೀವು ಸೋರುವ ಗಾಯಗಳಿಗೆ ಮತ್ತೆ ಮತ್ತೆ ತೊಳೆಯುತ್ತೇನೆ, ಮುಲಾಮು ಸವರುತ್ತೇನೆ, ಎಂದಿಗೂ ಒಂದಾಗದ ರೈಲು ಹಳಿಗಳಂತೆ ಕ್ಷಿತಿಜದಲ್ಲಿ ಎಂದಿಗೂ ಸೇರದ ನದಿಯ ಎರಡು ದಡಗಳ...
ನಾನು ಮನೆಯ ಕಸವೆಲ್ಲ ಗುಡಿಸಿ ಮೂಲೆಗೆ ಕೂಡುವ ಕಸಪರಿಕೆಯೇ? ಎಲ್ಲರೂ ದಾಟುತ್ತ ಇಲ್ಲ, ಕಾಲಿನಿಂದ ಹೊಸಕುತ್ತ ಮುಂದೆ ಸಾಗುವ ಮನೆಯ ಹೊಸ್ತಿಲೆ? ಒಡೆಯನ ಮರ್ಜಿಯಂತೆ ಬೆಳಕು ಬೇಕೆಂದಾಗ ಮನೆಗೆ ಬೆಳಕು ಕೊಡುವ ಬಲ್ಬು ಆಗಿರುವೆನೆ? ಕತ್ತಲೆ ಹಿನ್ನೆಲೆಯಾಗಿ...







