
ಹಸಿರು ಬಳ್ಳಿ ಛಪ್ಪರ ಕಂಡಾಗ ನೆನಪಗುತ್ತಾಳೆ ನನಗೆ ಅಮ್ಮ ಅವಳೇ ಕಟ್ಟಿದ್ದ ಛಪ್ಪರದ ಮೇಲೆ ಹಾಗಲ, ಹೀರೇ, ಪಡುವಲ ಬಳ್ಳಿ ಕುಂಬಳಕಾಯಿ ಚಳ್ಳವರೆಯ ಹಸಿರು ಮನೆಮುಂದೆ ದಟ್ಟ ಹಸಿರು ಹಂದರ ನೆರಳಿತ್ತು ಮನೆಯ ಹಿಂದೆ ಮುಂದೆ ಬರೀ ಹಸಿರೇ ಹಸಿರಿತ್ತು. ಅಮ್ಮನ...
ನನ್ನ ಹರಿದ ಅಂಗಿಯ ಮಧ್ಯದ ತುಂಡು ಬಟ್ಟೆಯನ್ನೇ ತೆಗೆದು ಅವ್ವ ಹೊಲಿದಳು ನನಗೊಂದು ನಮಾಜಿನ ಟೋಪಿ ನನ್ನ ಬಣ್ಣಗೆಟ್ಟ ಟೊಪ್ಪಿಗೆ ನೋಡಿ ಚಂದದ ಕಸೂತಿ ಹೆಣೆದ ಟೊಪ್ಪಿಗೆ ಜಂಭದಿಂದ ಭಿಮ್ಮನೆ ಬೀಗುತ್ತ ಅಹಮ್ಮಿನ ನೋಟ ಬೀರಿ ನನ್ನವ್ವನ ಬಡತನವನು ಅಣಕಿಸಿ ನ...
ಕಣ್ಣು ಮುಚ್ಚಿ ದೀರ್ಘ ಪ್ರಾರ್ಥನೆ ಸಲ್ಲಿಸಿ, ತಲೆ ತುಂಬ ಎಳೆದ ಮುಸುಕಿನಡಿಯಲ್ಲಿ ಕಣ್ಣ ಮುತ್ತುಗಳ ಬಳಬಳನೆ ಉದುರಿಸಿ, ಕರುಳಿಗೆ ಹೊತ್ತಿಕೊಂಡ ಬೆಂಕಿಯ ಜ್ವಾಲೆ- ಹೊರ ಚಾಚದಂತೆ ನಂದಿಸಿ ಮೇಲೇಳುವ ಹೊಗೆಯ ನೋಡುತ್ತ ನಿಟ್ಟುಸಿರು ಬಿಡುತ್ತ ಗೆದ್ದು ಬರ...
ಕೆಂಡ ಕಾರುತ ಸೂರ್ಯ ಹುಟ್ಟಿ ಬರುವುದನ್ನೆ ತವಕದಿಂದ ನೋಡುತ್ತಿದ್ದೆ. ಸೂರ್ಯಕಾಂತೆಯರ ದಂಡು ನಿಗಿನಿಗಿ ಕೆಂಡ ಸೂರ್ಯನ ಬಿಗಿದಪ್ಪಲು ಕಾದಿರುವ, ತಪ್ತ ಕಾಂತೆಯರು- ಆಕಾಶ ನೋಡುತ್ತಿರಲು ಭೂಮಂಡಲಕೆ ಹನಿಹನಿಯಾಗಿ ತೊಟ್ಟಿಕ್ಕುವ ಕೆಂಡದ ಮಳೆ ರಕ್ತದ ಹೊಳೆ...
ಮುಸ್ಸ೦ಜೆಯ ಹೊತ್ತಿನಲಿ ಗೂಡು ಸೇರುವ ತವಕದಲಿ ಗುಂಪಾಗಿ ಹಾರುವ ಹಕ್ಕಿಗಳು, ಮಧ್ಯಾಹ್ನ ನೆರಳಾಗಿದ್ದ ಮರಗಳ ಬರಬರುತ್ತ ಕಡುಕಪ್ಪು ನೆರಳು ಗಡುಸಾಗಿ ನಿಶ್ಚಲವಾಗಿ ನೆಲ ಮುಗಿಲು ಒಂದಾಗಿ ಕ್ಷಿತಿಜದಲಿ ಸಂಧಿಸುವ ರೇಖೆಯಲಿ ಒಂದಾದ ಆಕಾಶ ಭೂಮಿಗಳ ಸುಂದರ ಸ...
ತುಸುತುಸುವೇ ಹತ್ತಿರವಾಗುವ ಕ್ರೂರ ಸಾವಿನ ಸಂಬಂಧ ಪಾಶವೀ ಆಕ್ರಮಣ, ವಿರಹದ ಬಿಸಿ ಮೀರಿ ಹೊರ ಬರುವ ಕರುಳ ಸಂಬಂಧ, ಬದುಕು ಮುದುಡುವಂತೆ ಬೀರುವ ಸುಡು ನೋಟ, ಬದುಕಿನ ಆಳ – ಅಗಲ ಏರುಪೇರಿನಲಿ ಏಕುತ್ತ ಎಳೆದು ತಂದ ಬಾಳಬಂಡಿ ಮನೆ ಮಂದಿಗೆಲ್ಲ ಬಡಿ...







