ಭೂಮಿಕೆ

ಬೀಸೊ ಗಾಳಿಗೆ ದಿಸೆಯದಾವುದೊ ಎಂಬ ನಿಯತಿಯದೆಲ್ಲಿಯೋ, ಪ್ರೀತಿ ಸ್ಪುರಣೆಗೆ ಕುಲವದಾವುದೊ ಎಂಬ ಭೀತಿಯದೆಲ್ಲಿಯೋ, ಮೂಡಣದ ಕಿರಣಕೆ ಅರಳದಿರುವವೆ ಸುಮಗಳು ತಾ ಲತೆಯಲಿ, ಚಂದ್ರೋದಯ ದಂದಕೆ ಏಳದಿರುವವೆ ತೆರೆಗಳು ತಾ ಕಡಲಲಿ, ಸಮದ ಸಮತೆಯ ಶೃಂಗ...

ನೋಡೋಣ ಬಾ ಹುಲಗೂರ ಸಂತಿ

ನೋಡೋಣ ಬಾ ಗೆಳತಿ ನಾಡೋಳ್ ಹುಲಗೂರ ಸಂತಿ ಬಾಡ ಮಾರವಳ ಬಡಿವಾರ ಬಹಳೈತಿ ||ಪ|| ಜೋಡಬಿಲ್ಲಿ ದುಡ್ಡಿಗೊಂದು ಸಿವಡು ಕೋತಂಬರಿಯ ಕೊಡಲು ಬೇಡಿಕೊಳ್ಳುತ ನಿಂತರೆ ಮಾತಾಡಳೋ ಮುಖ ನೋಡಳೋ ||ಅ.ಪ.|| ಸರಸಾದ ಪ್ಯಾಟಿಯು ಮೆರೆವದು...

ನಿಲ್ಲು ಮನವೆ

ನಿಲ್ಲು ಮನವೆ, ನಿಲ್ಲು ಇಲ್ಲಿ ಇನ್ನು, ಒಮ್ಮೆ ಹೊರಳಿ ನೋಡು, ನಾಗಾಲೋಟದ ಧಾವಂತದಲಿ ಪಡೆದುದೇನೆಂಬುದ ಕಾಣು... ಜಗವನಾಳುವ ಶಕ್ತಿತ್ರಯಗಳನು ಮೀರಲು ಜೀವನವಿನ್ನೇನು? ಎಲ್ಲೋ ಕಳೆದುದನಿನ್ನೆಲ್ಲೋ ಹುಡುಕಿರೆ ದೊರೆಯುವುದಿನ್ನೇನು...! ಸುಖದ ಸಾಧನ ನಿನ್ನಾಚೆ ಎಲ್ಲಿದೆ, ಜೀವ...

ಕುರುವರಿಯದ ಕುಂಬಾರಗ ಹೇಳಲು

ಕುರುವರಿಯದ ಕುಂಬಾರಗ ಹೇಳಲು ಮಾರಿಗ್ಹೊಡದ ಮಾದಿಗರಣ್ಣಾ ||ಪ|| ಕಾರಹುಣ್ಣಿವಿ ದಿನ ಕೋರಿಯ ಹೊತಗೊಂಡು ಬೋರಗಲ್ಲಿಗೆ ಬಡದೀರಿ ಸುಣ್ಣಾ ||೧|| ಹುರಿಕಟ್ಟಿನ ಹೋರಿಗೆ ಗೊಟ್ಟವ ಹಾಕಲು ಕುಟ್ಟಿ ಉಪ್ಪು ಎಣ್ಣಿ ಅರಿಷಿಣ ||೨|| ಹುರಿಯಕ್ಕಿ ಹೋಳಿಗೆ...

ಅಭಿಮಾನವಿಡು

ಅಭಿಮಾನವಿರಲೀ, ದೇಶ, ಭಾಷೆಯ ರೀತಿ, ನೀತಿಯ ಸಿರಿಯುಸಿರಲಿ, ವಿಶ್ವಕೋಶದ, ಧಮನಿ ದಮನಿಯ, ಬಿತ್ತಿ ಬೆಳೆಸಿದ ತೋಳಲಿ.... ಎಲ್ಲ ಲೋಕದ, ನಾಕವಿದುವೆ ಪುಣ್ಯ, ಸಗ್ಗಕೆ ಭೂಮಿಕೆ, ಜ್ಞಾನವೆಲ್ಲಕೂ ಮೂಲವಿದುವೆ, ಧ್ಯಾನ ನಂದನ ಚಂದ್ರಿಕೆ, ಧೃವಗಳೆಲ್ಲಕೂ ಧೃವವ...

ಕುಂಬಾರಕಿ ಈಕಿ ಕುಂಬಾರಕಿ

ಕುಂಬಾರಕಿ ಈಕಿ ಕುಂಬಾರಕಿ ಈ ಬ್ರಹಾಂಡವೆಲ್ಲ ತುಂಬಿಕೊಂಡಿರುವ ||ಪ|| ಚಿನ್ನ ಎಂಬುವ ಮಣ್ಣನು ತರಸಿ ತನು ಎಂಬುವ ನೀರನು ಹಣಸಿ ಮನ ಎಂಬುವ ಹುದಲನು ಕಲಸಿ ಗುಣ ಎಂಬುವ ಸೂಸನು ಹಾಕಿ ||೧|| ಭಕ್ತಿ...

ಪ್ರಶ್ನೆಗಳು

ಎಲ್ಲಿ ನೀನು, ನಿನ್ನೆ ನೆಲೆಯು, ತಿಳಿವುದೆಂತು ನಿನ್ನೊಳದನಿ, ಬಣ್ಣವೇರಿ ನಿಂತ ಮೊಗಕೆ, ಕಾಣಬಹುದೆ ನಿಜ ದನಿ? ವಿಸ್ತೃತ ಜಗವೆ ಕಿರಿದು ಮಾಡಿ ಕೀರ್ತಿ ಶಿಖರವೇರಿ ನಿಂತು ನನ್ನ-ನಿನ್ನ ದೂರಮಾಡಿದೆ, ಸರಕು-ಸಂಸ್ಕೃತಿ ದಾಳದಲ್ಲಿ ಏನೆಲ್ಲ ಕಳೇದೀಡಾಡಿದೆ....?...

ಬಿದ್ದಿಯಬೇ ಮುದುಕಿ

ಬಿದ್ದಿಯಬೇ ಮುದುಕಿ ನೀ ದಿನ ಹೋದಾಕಿ ಬಲು ಜೋಕಿ ಬಿದ್ದಿಯಬೇ ಮುದುಕಿ ||ಪ|| ಸಧ್ಯಕಿದು ಹುಲಗೂರ ಸಂತಿ ಗದ್ದಲದೊಳಗ ಯಾಕ ನಿಂತಿ ಬಿದ್ದು ಒದ್ದಾಡಿದರ ಎಬ್ಬಿಸುವರಿಲ್ಲಾ ಬುದ್ಧಿಗೇಡಿ ಮುದುಕಿ ನೀನು ಬಿದ್ದಿಯಬೇ ಮುದುಕಿ ||೧||...

ಎಚ್ಚರವಿರಲಿ

ಶಿಖರ ಶೃಂಗಗಳೆನಿತೆನಿತೆ ಇರಲಿ ನಿನ್ನ ಸಾಧನೆಯ ಹಿರಿಮೆ ಗರಿಮೆಗೆ, ಪ್ರೀತಿ ಹಣತೆ ನಂದದಿರಲಿ, ಮಧುರ ಭಾವ ಬಂಧುರ ಬದುಕಿಗೆ ಇಂದು ನಾಳೆಗಳಲಿ ನೀನೆ ನಿನ್ನ ಪರಧಿಯ ನೇಸರ, ಒಂದರೊಳಗೊಂದಾಗೋ ಪ್ರೀತಿಗೆ ನೀನೆ ತಿಂಗಳಂಗಳ ಚಂದಿರ,...

ತಂಗಿ ನಮಗೆ ಕೊಡಿರೆಂದು

ತಂಗಿ ನಮಗೆ ಕೊಡಿರೆಂದು ಕೊಟ್ಟಳ್ಹಂಗಿನರಕಿಯನು ||ಪ|| ಇಂಗಿತ ಅರಿದವ ಅಣ್ಣ ನೀ ಬಾರೆಂದು ಬಂಗಿ ಸೇದಿಸಿ ಬ್ರಹ್ಮಾಂಡದ ಬಯಲೊಳು ||ಅ.ಪ.|| ತನುತ್ರಯಕ್ಕೆ ತಾ ಬಾಧ್ಯಳೋ ಎನ್ನ ಘನ ಆತ್ಮಕ್ಕೆ ಪ್ರಸಿದ್ಧಳೋ ವನಜಾಕ್ಷಿಯು ತನ್ನ ಚಿನುಮಯ...