ಸೂಜಿಯೇ ನೀನು ಸೂಜಿಯೇ

ಸೂಜಿಯೇ ನೀನು ಸೂಜಿಯೇ ಈ ರಾಜ್ಯದೊಳಗೆಲ್ಲ ತೇಜ ಕಾಣಿಸುವಂಥ ||ಪ|| ಹರಿಯ ಶಿರದಮ್ಯಾಲೆ ಮೆರೆದಂಥ ಸೂಜಿಯೇ ಹರನ ಕಪಾಲದಿ ಬೆರೆದಂಥ ಸೂಜಿಯೇ ಮರವಿಯ ಅರವಿಯ ಹೊಲಿವಂಥ ಸೂಜಿಯೇ ಮರೆ ಮೋಸವಾಗಿ ಮಾಯವಾದಂಥ ಸೂಜಿಯೇ ||೧||...

ಕಣಜ

ಆ ಮನೆಯ ಕಣಜ ನಮಗೆ, ದಿನಾರಾತ್ರೆ  ಒಂದೊಂದು ನೀತಿಕಥೆಯನ್ನು ಹೇಳು ತ್ತಿತ್ತು; ಕೇಳಿಸಿಕೊಳ್ಳುತ್ತಿದ್ದದ್ದು ಮಾತ್ರ ಅವರಾಗಿದ್ದರು. ಅವರೆಕಾಳು, ರಾಗಿ, ಗೋಧಿ, ತೊಗರಿ, ಹೆಂಡ, ಹಳೆಬಟ್ಟೆಗಳು, ಔಷಧಿ ಬೇರುಗಳೆಲ್ಲವನ್ನೂ ತನ್ನೊಳಗೆ ಹೊತ್ತುಕೊಂಡು, ದೂರದ ಗ್ರಾಮದ ದಢೂತಿ...

ಜಲರೂಪಿನಗು

ಜಗದಲೆಲ್ಲ ಹುಡುಕಿದೆ ನಿರಂತರ ಕಳೆದವೆಷ್ಟೊ ಗೆಳತಿ ಮನ್ವಂತರ ಎಲ್ಲೂ ಸಿಗಲಿಲ್ಲ ನಿನ್ನ ನಗುತರ ನಾ ಮಡಿಲ ಮಾತೆ ಮಗು ತರ || ಅದೆಷ್ಟು ಶಕ್ತಿ ನವ ರೋಮಾಂಚನ ಜಡ ಬದಕಿಗೆಲ್ಲ ಗರಿಗೆದರಿ ಸಿಂಚನ ಎಣಿಸಲಾರದ...

ಸ್ವಂತದ್ದಲ್ಲ

ಅದು ಮದುವೆ ಮನೆ. ಅಕ್ಷತೆಯ ನಂತರ ಭೋಜನ ಪ್ರಾರಂಭವಾಯಿತು. ಉದ್ದ ನಾಲ್ಕು ಸಾಲುಗಳಲ್ಲಿ ಜನರು ಊಟಕ್ಕೆ ಕುಳಿತಿದ್ದರು. ಅದು ಪ್ರತಿಷ್ಠಿತ ವ್ಯಕ್ತಿಯ ಮಗನ ಮದುವೆಯಾಗಿರುವುದರಿಂದ ಸುಗ್ರಾಸ ಭೋಜನದ ವ್ಯವಸ್ಥೆ ಆಗಿತ್ತು. ಊಟದ ರುಚಿಯನ್ನು ಪ್ರೀತಿಯಿಂದ...

ಸ್ಥಾವರ! ಜಂಗಮ?

ಅಂತರಂಗದ ಕದವ ತೆರೆಯಿಸೊ ಅಂತರಾತ್ಮ ವಾಣಿಯನಾಲಿಸು ಅಂತಕಾಂತನ ಕೃಪೆಯ ನೆಳಲಲಿ ಚಿಂತಾತ್ಮನ ಕೊನೆಗಾಣಿಸು || ಚಿತ್ತ ಚಿತ್ತಾರ ಬಿತ್ತರ ಬಣ್ಣ ಬದುಕಿನ ಕೆಡುಕಿಗೆ ನೀನು ನಾನು ಎಲ್ಲರಿಲ್ಲಿ ಮೃತ್ಯುಗೈಯಮಣ್ಣ ಬಿಂದಿಗೆ || ಬಿಸಿಲಗುದುರೆಯ ಸವಾರಿಯಲ್ಲಿ...

ಜಿ.ಎಸ್. ಶಿವರುದ್ರಪ್ಪನವರ ಕಾವ್ಯದಲ್ಲಿ ಸಾಮಾಜಿಕ ಸಾಮರಸ್ಯದ ಆಶಯಗಳು

ಗಣಕ-ತಂತ್ರಜ್ಞಾನವು ಜನಪ್ರಿಯವಾಗುತ್ತಿರುವ ಕಾಲ ಇದಾಗಿರುವುದಿಂದ ಮಾಹಿತಿ ಸಂಗ್ರಹ ಮತ್ತು ಒದಗಿದ ಮಾಹಿತಿಯನ್ನು ಆಯಾ ಆವಶ್ಯಕತೆಗಳಿಗೆ ಆನುಗುಣವಾಗಿ ವಿಭಜಿಸಿ ನೋಡುವ ತಂತ್ರವೂ ಕೈಗೆಟುಕುವಂತಿದೆ. ಸಾಹಿತ್ಯದ ಸಂದರ್ಭದಲ್ಲಿಯೂ ಈ ರೀತಿಯ ವಿಭಜನೆಯ ಕ್ರಮಗಳು ಚಾಲ್ತಿಗೆ ಬಂದಂತೆ ಕಾಣುತ್ತಿವೆ....

ಇನಸ್ಪೆಕ್ಟರ ದಯಾನಿಧಿ

ಇನಸ್ಪೆಕ್ಟರ ದಯಾನಿಧಿ ವನಗಾವಲಧಿಕಾರ ||ಪ|| ಘನಸಿರಿಯ ಪರಿ ಅರಣ್ಯದಿ ಶೋಭಿತಹ ಜುರ್ಬಿಶರಿಯುತಾಧೀಶನ ಪದಾ ||೧|| ಹಮ್ ದೇಖಾ ತುಮ್ ಲೈಯನ್‍ತು ದೋದಿನ್ ಕರತೆ ಜಾವಿದಾ ಸುಮ್ಮನೆ ಸಂದಿದೆ ನಾ ಪೇಳುವೆ ಲಾಲಿಸು ಹಿಮಕರ ಕಷ್ಟದಿ...

ಇದ್ದಿಲು ಮಾರುವ ಹೆಂಗಸರು

ನನ್ನ ತಾಯಿ ಕಡೆಯ ಸಂಬಂಧಿಕರಿವರು, ಇದ್ದಿಲಿನಂತೆ ಕಗ್ಗತ್ತಲನ್ನು ಉಗಿಯಬಲ್ಲ ಮಹಾ ದರಿದ್ರರಂತಿದ್ದರು. ಹೆಂಡದಾಸೆಗೆ ದಿನ್ನೆ ಬಯಲಿನ ಪೊದೆಗಳಲ್ಲಿ ಇಸ್ಪೀಟು ಆಡಲು ಬರುವ ಗಂಡಸರ ಜೊತೆ ಮಲಗಿ ಎದ್ದದ್ದನ್ನು ಎಷ್ಟೋ ಸಲ ನೋಡಿದ್ದೇನೆ. ಒಂಟಿಗಿಡದ ಪನ್ನೀರ...

ಅಕ್ಕ ನೀ ಕೇಳವ್ವ

ಅಕ್ಕ ನೀ ಕೇಳವ್ವ ತಂಗೀ ನೀ ಬಾರವ್ವ ಸಂವಿದಾನ ತಿಳಿಯವ್ವ || ಹೆಣ್ಣಾಗಿ ಹುಟ್ಟಿದ್ದಿ ಹಣ್ಣಾಗಿ ಬಾಳಿದ್ದಿ ಕೂಸು ಗಂಡನ್ನ ಸಾಕಿ ಸಂಸಾರ ಮಾಡಿದಾಕಿ || ಜಗವೆಲ್ಲ ತಿಳಿದೈತೆ ತಲಿಯಾಗೆ ಗ್ಯಾನೆಐತೆ ಘನ ಬಾಳ...

ನಾನು ಬದುಕುತ್ತೇನೆ

ಸ್ಫರದ್ರೂಪಿ ಯವಕನೊಬ್ಬ ಪ್ರತಿಷ್ಠಿತ ಕಂಪನಿಯೊಂದರಲ್ಲಿ ಉನ್ನತ ಅಧಿಕಾರಿಯಾಗಿದ್ದ. ಅವನು ತನ್ನ ತಾಯಿ ತಂದೆ ಸಂಬಂಧಿಕರೊಂದಿಗೆ ಬಂದು ಆ ಚೆಲುವಾದ ಹುಡುಗಿಯನ್ನು ನೋಡಿದ. ಅವಳ ಮಾತು, ಅರ್ಹತೆಗಳೆಲ್ಲ ಅವನಿಗಿಷ್ಟವಾದವು. ಹುಡುಗಿಯೂ ಅವನನ್ನು ಮೆಚ್ಚಿಕೊಂಡಳು. ಎರಡೂ ಕಡೆಯ...