ಇದಾರ ಮನಸು ಉದಾರ ಮನಸು ಕನಸುಗಳ ಹೊಸೆಯಿತೊ ಚಿತ್ರ ಬರೆದು ಬಣ್ಣ ಹಚ್ಚಿ ಮೂಡುವ ಮೊದಲೆ ಅಳಿಸಿತೊ ಇದಾರ ಮನಸು ಉದಾರ ಮನಸು ಭಾವನೆಗಳ ಭಾವಿಸಿತೊ ಪ್ರೀತಿಯೆಂದು ಕರುಣೆಯೆಂದು ಕಣ್ಣ ತುಂಬ ತುಂಬಿತೊ ಇದಾರ...
ನನ್ನ ಮನೆಯ ನೆತ್ತಿಯ ಮೇಲೆ ಸೂರ್ಯ ಇನ್ನೂ ಹುಟ್ಟಿರಲಿಲ್ಲ. ಒಲೆಗೆ ಬೆಂಕಿಯ ಕಾವು ಸಿಕ್ಕಿರಲಿಲ್ಲ ಚಳಿಯಲ್ಲಿ ನಡುಗುತ್ತ ಮಲಗಿದ್ದ ಹಸಿವಿನಿಂದ ಚಡಪಡಿಸುತ್ತಿರುವ ಮಕ್ಕಳಿಗೆ ಹೇಗೆ ಹೇಳಲಿ ನಾನು ನಮ್ಮ ರಂಜಾನಿನ ಉಪವಾಸ ಇನ್ನೂ ಮುಗಿದಿಲ್ಲ...
ಅಶಕ್ತರಾದಾಗ ವೈದ್ಯರು ಮೊಟ್ಟೆಗಳನ್ನು ತಿನ್ನಲು ಹೇಳುತ್ತಾರೆ. ಮೊಟ್ಟೆಯಲ್ಲಿ ಜೀವಸತ್ವ ಇರುವುದರಿಂದ ಶಕ್ತಿವರ್‍ಧಕವೆಂದು ತಿಳಿಸುವ ವೈದ್ಯರ ಈ ಸಿಫಾರಸ್ ಈಗ ತಿರುಮರುವಾಗಿದೆ. ಜತೆಗೆ ಮೊಟ್ಟೆ ಮಾಂಸಾಹಾರಿ ಅಲ್ಲವೆಂಬ ಸತ್ಯವನ್ನು ಸಹ ತಲೆಕೆಳಗೆ ಮಾಡಿ ಇದೊಂದು ಮಾಂಸಾಹಾರಿಯೇ...
ಧಾರವಾಡ ತಾಯೆ ನಿನ್ನದೆಂತ ಮಾಯೆ! ಚಿತ್ತ ತಣಿಸುವ ಸತ್ಯ ಸಾರುವ ತತ್ತ್ವಲೇಪದ ಕಾವ್ಯ ಕರ್ಮಕೆ ಮಡಿಲು ಆದ ತಾಯೆ-ಆಹ ನಿನ್ನದೆಂತ ಮಾಯೆ! ಲೋಕ ಮೆಚ್ಚುವ ಸತ್ವ ಮಿಂಚುವ ಆದಿ ಪಂಪ ಆ ಕುವರವ್ಯಾಸರ ನಿನ್ನ...
ನನಗೆ ಆಗ ವಯಸ್ಸು ಇಪ್ಪತ್ತೆರಡು, ಹೆಣ್ಣು ಮಕ್ಕಳ ಕಾಲೇಜದಲ್ಲಿ ಬಿ.ಎ. ಕ್ಲಾಸದಲ್ಲಿದ್ದೆ. ಕಾಲೇಜಕ್ಕೆ ಒಂದು ವಸತಿಗ್ರಹವಿತ್ತು. ಅಲ್ಲಿ ನಾನಿದ್ದೆನು. ನನ್ನ ಸ್ವಭಾವ "ವಿಲಕ್ಷಣ" ಎನ್ನುವರು. ಅದಕ್ಕಂತಲೇ ಏನೋ ವಸತಿಗ್ರಹದಲ್ಲಿದ್ದರೂ ನನಗೆ ಸ್ನೇಹಿತರಾರೂ ಇರಲಿಲ್ಲ. ಸರೋಜಳು...
ಹಾಡು - ೧ ದಿಟ್ಟಿಸಿ ನೋಡುತಲಿದ್ದಳು ಕನ್ನಿಕೆ ಡಯೋನಿಸಸ್ಸನು ಸತ್ತಾಗ, ಅವನ ಮೈಯಿಂದ ಹೃದಯವ ಕಿತ್ತು ಕೈಯೊಳು ಅದನ್ನು ಹಿಡಿದಾಗ, ಹಾಡಿದರೆಲ್ಲಾ ಕಲಾದೇವಿಯರು ಮಹಾಯುಗಾದಿಯ ಚೈತ್ರದಲಿ, ದೇವರ ಸಾವೂ ಆಟ ಎಂಬಂತೆ ಕೂಡಿ ಹಾಡಿದರು...