Tag: ಯುಗಾದಿ
-

ಒಕ್ಕಲಗಿತ್ತಿಯರ ಒಲವಿನ ಹಬ್ಬ ಯುಗಾದಿ !
ಬೆಂಗ್ಳೂರಿನ ಡಾಲರ್‍ಸ ಕಾಲನಿಯಲ್ಲಿಯ ನನ್ನ ಅಗದೀ ಪೆಟ್ ಲಂಗೋಟಿ ದೋಸ್ತ “ಹುಬ್ಬಳ್ಳಿ ಸಾವ್ಕಾರ”ನ ಮನೆಗೆ ಹೋದಾಗ ಒಂದು ಬಲಂಡ ಭಾರೀ ವಿಚಿತ್ರ ಕಂಡು ದಂಗುದಕ್ಕಾದೆ. ಏನೆಂದರೆ ಅವರ ಬಿಲ್ಡಿಂಗಿನ ಮೇಲಿನ ಸಾವಿರ ಲೀಟರ ನೀರಿನ ಸಿಂಟ್ಯಾಕ್ಸಿಗೆ ಯಾವುದೋ ತಪ್ಲಾ ಹಾಕಿದ್ದರು. ನಾನು ವಕಾವಕಾ ಬಾಯ್ಬಿಟ್ಟು…..”ಇದೇನೋ ದೋಸ್ತಾ ?” ಅಂತ ಕೇಳಿದೆ. ಆತ ಖುಶಿಯಿಂದ ಹೇಳಿದ- “ಮಾರಾಯಾ….ನಾಳೆ ಬೆಳಿಗ್ಗೆದ್ರ ಉಗಾದಿ ಹಬ್ಬಾ. ನಾ ಸಣ್ಣಾವಿದ್ದಾಗ ಹುಬ್ಬಳ್ಯಾಗ ನಮ್ಮಜ್ಜ ಹಳೇ ಹಂಡೇಕ ಬೇವಿನ ತಪ್ಲಾ ಹಾಕಿ ಕುದಿಸಿ, ಸುಡುಸುಡೂ ಎಣ್ಣಿಮಜ್ಜನ…
