ಮತೀಯ ಬೆಳವಣಿಗೆ – ಮಾನವ ಮಾರಕ

Published on :

The hardest thing in the world is to convince a man that he is FREE -Richard Buck ನಗರಕ್ಕೆ ಜಿಲ್ಲೆಗೆ ಹುಡುಕುತ್ತಿರುವ ಕಾಲರಾಕ್ಕಿಂತ ಕ್ರೂರವಾಗಿ ಮತೀಯ ಮೌಢ್ಯ ಹರಡುತ್ತಿದೆ. ಹತ್ತನೇ ತಾರೀಖಿನ ಕ್ರೈಸ್ತ ಮೆರವಣಿಗೆ ೧೪,೧೫ ರಂದು ನಡೆಯುವ ಮತಮೌಢ್ಯ, ದಿನ ನಿತ್ಯ ಕಿವಿಗಡಚಿಕ್ಕುವಂತೆ ಅರಚಿಕೊಳ್ಳುವ ರಾಘವೇಂದ್ರನ ಜಾಗಟೆ, ಇತ್ಯಾದಿ. ಮಳೆ ಇಲ್ಲದೆ ಕುಡಿವ ನೀರಿಗಾಗಿ ಜನ ಪರಿತಪಿಸುತ್ತಿದ್ದಾರೆ. ಭೂಮಿ ಆಕಾಶಗಳ ನಡುವೆ ಕಾವು […]

ದಾರಿ ತಪ್ಪಿಸುವ ಶ್ಲೋಕ – ಒಂದು ಚಿಂತನೆ

Published on :

ಇಡೀ ಮಾನವ ಕುಲದ ಮನಸ್ಸನ್ನು ಮೋಸಗೊಳಿಸಿ ಸಮಾಜದ ವಿಕೃತಿಗೆ ಕಾರಣವಾಗಿರುವ ಒಂದು ಶ್ಲೋಕ ಇದೆ. ಅದು ಬ್ರಾಹ್ಮಣ ಎಂದರೆ ಯಾರು ಎಂದು ತಿಳಿಸಲು ಅಳತೆಗೋಲಾಗಿರುವ ಶ್ಲೋಕ. (ಹುಟ್ಟಿನಿಂದ ಶೂದ್ರನಾಗಿ, ತನ್ನ ಕರ್ಮಾಧಿಕಾರದ ನಿರ್ವಹಣೆಯಿಂದ ದ್ವಿಜನಾಗಿ, ವೇದಾದಿಗಳ ಪಾಠ ಪಠನಗಳಿಂದ ವಿಪ್ರನಾಗಿ, ಬ್ರಹ್ಮಜ್ಞಾನ ಪಡೆದನಂತರ ಬ್ರಾಹ್ಮಣನಾಗುತ್ತಾನೆ.) ಜನ್ಮನಾ ಜಾಯತೇ ಶೂದ್ರಃ: -ವಿಚಾರಕ್ಕಾಗಿ ಈ ಮಂತ್ರದ ಹಿನ್ನೆಲೆಯಲ್ಲಿ ಹುಟ್ಟಿನಿಂದ ಎಲ್ಲರೂ ಶೂದ್ರರೆಂದು ಸ್ವೀಕರಿಸುವ. ಕರ್ಮಣಾ ಜಾಯತೇ ದ್ವಿಜಃ -ತಾನು ಮಾಡುವ (ಯಾವುದೇ) ಕರ್ಮದಿಂದ […]

ಪ್ರಾಮಾಣಿಕತೆ: ಲೋಹಿಯಾ, ನೆಹರೂ ನಡುವೆ

Published on :

ದೇಶದಲ್ಲಿ ಮೂರನೆಯ ಮಹಾಚುನಾವಣೆ. ವರ್ಷ ೧೯೬೨. ದೇಶದ ಒಳಹೊರಗೆಲ್ಲಾ ಜವರಹರಲಾಲ್ ನೆಹರೂ ವಿರುದ್ಧ ಡಾ. ಲೋಹಿಯಾ ಲೋಕಸಭೆಗೆ ಸ್ಪರ್ಧಿಸುತ್ತಾರೆಂಬ ಸುದ್ದಿಯ ಗದ್ದಲ. ನೆಹರೂವನ್ನು ಪರಾಜಯಗೊಳಿಸಲು ಅಸಾಧ್ಯ ಎಂಬುದು ವಿಶ್ವ ನಂಬುಗೆ. ಇದುವರೆವಿಗೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದವರೆಂದರೆ ಪ್ರತಿಗಾಮಿಶಕ್ತಿಗಳು ಮತ್ತು ಕೋಮುವಾದಿಗಳು ಮಾತ್ರ. ನೆಹರೂ ವಿರುದ್ಧ ರಾಜಕೀಯ ಆದರ್ಶದ ತಳಹದಿಯ ಮೇಲೆ ಮೊಟ್ಟ ಮೊದಲಿಗೆ ಸ್ಪರ್ಧಿಸಿದವರೆಂದರೆ ಡಾ. ಲೋಹಿಯಾ. ನೆಹರೂ ನಿರ್ಮಿಸಿಕೊಂಡಿದ್ದ ಹೊರಹೊಳಪು ಅಧಿಕಾರಮುಷ್ಟಿ ಮತ್ತು ಕಾಂಗ್ರೆಸ್ ಪಕ್ಷದ ಪ್ರಭಾವದೊಂದಿಗೆ ಹೋಲಿಸಿದಾಗ ಸೀಮಿತ […]

ಲೋಹಿಯಾ ಮತ್ತು ಐನ್‌ಸ್ಟೀನರ ವಿಚಾರಸಂಗಮ

Published on :

(ಲೋಹಿಯಾ: ಜನನ : ೨೩-೩-೧೯೧೦ ಮರಣ ೧೧/೧೨-೧೦-೧೯೬೭ ಐನ್‌ಸ್ಟೀನ್ : ಜನನ : ೧೪-೩-೧೮೭೯ ಮರಣ ೧೭/೧೮-೪-೧೯೫೫) ಗಾಂಧಿಯ ಆಹಿಂಸಾ ತತ್ವ ಹಾಗೂ ಐನ್‌ಸ್ಟೀನರ ಅಣುವಾದ ಈ ಯುಗದ ಎರಡು ಅದ್ಭುತಗಳೆಂದು ಪರಿಗಣಿಸಲಾಗಿದೆ. ಆದರೆ ಅವು ಯಾವ ರೀತಿಯಲ್ಲಿ ಅದ್ಭುತ ಎಂದು ನನಗೆ ಆರ್ಥವಾಗಿಲ್ಲ. ಅದ್ಭುತ ಎನ್ನುವ ಅರ್ಥಕ್ಕಾಗಿಯೇ ಅದ್ಭುತವಾಗಿದ್ದರೆ ಅದರಿಂದ ಆಶ್ಚರ್ಯವಿಲ್ಲ. ನನ್ನ ದ್ಬಷ್ಟಿಯಲ್ಲಿ ಮಾನವ ಕಲ್ಯಾಣಕ್ಕೆ ಮಾರಕವಾಗುವ ಯಾವುದೇ ತತ್ವ ಹಾಗೂ ವಾದ ತಿರಸ್ಕಾರ ಯೋಗ್ಯವಾದದ್ದು. ನನಗೆ […]

ವಿದ್ಯಾರ್ಥಿ ಹಾಗೂ ವಿಶ್ವದ ನಡುವೆ

Published on :

ನಾನು ವಿದ್ಯಾರ್ಥಿಗಳನ್ನು ಹೆಚ್ಚಾಗಿ ಪ್ರೀತಿಸುತ್ತೇನೆ, ಅವರೊಂದಿಗೆ ನಾಲ್ಕು ಕಾಲ ಇರಲು ಇಚ್ಛಿಸುತ್ತೇನೆ. ಏಕೆಂದರೆ, ಅವರ ಕಣ್ಣುಗಳಲ್ಲಿ ಹೊಳೆವ ಕುತೂಹಲಕ್ಕಾಗಿ, ಹೊಸದನ್ನು ಹಂಬಲಿಸುವ ಅವರ ಕಾತುರಕ್ಕಾಗಿ, ಅವರ ಕಳಂಕರಹಿತ ನಿರ್ಮಲ ನೋಟಕ್ಕಾಗಿ, ಬದುಕಬೇಕೆನ್ನುವ ಅವರ ಅದಮ್ಯ ಉತ್ಸಾಹಕ್ಕಾಗಿ, ಹೊಸ ದಿಗಂತದ ಕಡೆಗೆ ಚಿಮ್ಮುವ ಅವರ ಚೈತನ್ಯಕ್ಕಾಗಿ. ಆದರೆ ಪ್ರೀತಿಸುವಷ್ಟೇ ಅಥವಾ ಅದಕ್ಕಿಂತ ಹೆಚ್ಚಾಗಿ ನಾನು ವಿಷಾದಿಸುತ್ತೇನೆ. ಏಕೆಂದರೆ ಮೂವತ್ತು ವರ್ಷಗಳ ಸ್ವಾತಂತ್ರ್ಯದ ನಂತರವೂ ಈ ವಿದ್ಯಾರ್ಥಿಗಳ ಚೈತನ್ಯವನ್ನು ದಮನ ಮಾಡುವ ನಿರ್ವೀರ್ಯರನ್ನಾಗಿಸುವ […]

ಯುವ ಲೇಖಕ ಹಾಗೂ ರಾಜಕೀಯ ಪ್ರಜ್ಞೆ

Published on :

ನನಗೆ ರಾಜಕೀಯ ಪ್ರಜ್ಞೆ ಹೆಚ್ಚಿನ ಮಹತ್ವದ್ದಾಗಿ ಕಾಣುವುದೇಕೆಂದರೆ ಸಾಮಾಜಿಕ ಪ್ರಜ್ಞೆ, ಪರಂಪರೆಯ ಪ್ರಜ್ಞೆ, ಸಮಕಾಲೀಕ ಪ್ರಜ್ಞೆ, ಸಾರ್ವಕಾಲೀಕ ಹೀಗೆ ಬಹುಮುಖಿ ಪ್ರಜ್ಞೆಗಳ ಅಂತರಂಗದಲ್ಲೆ ಅದು ಅಡಗಿ ಅವುಗಳೆಲ್ಲವನ್ನೂ ನಿಯಂತ್ರಿಸುತ್ತ ಅವುಗಳ ಮೇಲೆ ತನ್ನ ಪ್ರಭಾವವನ್ನು ಪ್ರತಿಸ್ಠಾಪಿಸುತ್ತಾದ್ದರಿಂದ. ಬಹು ಹಿಂದೆ ಕವಿಗೆ ಅಥವಾ ಲೇಖಕನಾದವನಿಗೆ ಈ ರಾಜಕೀಯ ಸುಳಿವೇ ಇರುತ್ತಿರಲಿಲ್ಲ ಎಂದರೂ ಸರಿಯೆ. ಅವನು ಆಸ್ಥಾನದ ಕವಿಯಾಗಿ ಉಳಿಯಬೇಕಾದರೆ ರಾಜನಿಗೆ ಮೆಚ್ಚಿಗೆಯಾಗುವ ಕಾವ್ಯ ರಚಿಸಿ ಸೈ ಎನ್ನಿಸಿಕೊಂಡು ಉಸಿರಾಡಬೇಕಿತ್ತು. ಅಂತಹ ಕವಿಗೆ […]

ಬೆಳಕಿನ ದಾರಿ

Published on :

ನನಗೆ ಶಾಲಾ ಕಾಲೇಜುಗಳಲ್ಲಿ, ವಿಶ್ವವಿದ್ಯಾಲಯಗಳಲ್ಲಿ ದೊರೆತದ್ದು ವಿದ್ಯೆಯ ಮೊಗವಾಡ, ಬರಿಯ ಪದವಿ ಪತ್ರ ಎಂದು ಸ್ಪಷ್ಟವಾದದ್ದು; ನಮ್ಮ ಸಮಾಜದ ಪ್ರತಿಷ್ಠಿತರು ನಮ್ಮನ್ನು ಎಷ್ಟು ನಯವಂಚಕರನ್ನಾಗಿ ಬೆಳೆಸಿದ್ದಾರೆ ಎಂದು ಅರಿವಾದದ್ದು; ದೀನದಲಿತರ ಉದ್ಧಾರಕ್ಕೆ ದೇಶದ ಉದ್ದಗಲ ನಾಲಗೆ ಚಾಚುವ ದೇಶಭಕ್ತರ ಹುಂಬತನ ಅರ್ಥವಾದದ್ದು; ಧರ್ಮದ, ಮಾನವ ಕಲ್ಯಾಣದ ಹೆಸರಿನಲ್ಲಿ ಜಾತಿಯ ವಿಷಬೀಜ ಬಿತ್ತುತ್ತ ಮಾನವತೆಯನ್ನು ವಿನಾಶದೆಡೆಗೆ ಒಯ್ಯುತ್ತಿರುವ ಮಠ ಮಾನ್ಯಗಳ, ಮಠಾಧೀಶರ, ಮಸೀದಿ ಚರ್ಚುಗಳ, ರಾಜಕೀಯ ಪಕ್ಷಗಳ ಅಂತರಂಗದ ಅರಿವಾದದ್ದು; ಬರವಣಿಗೆ, […]