ರೂಪವಿಸ್ಮಯ ಮತ್ತು ರೂಪವಿಸ್ಮೃತಿ

ರೂಪವಿಸ್ಮಯ ಮತ್ತು ರೂಪವಿಸ್ಮೃತಿ

'ಸುದೀರ್ಘವೂ ಸೃಜನಶೀಲವೂ ಆದ ಬದುಕನ್ನು ಬದುಕಿದ ಇತರ ಶ್ರೇಷ್ಠ ಕಲಾವಿದರಂತೆಯೇ, ಬರ್ನಿನಿ ಕೂಡಾ ವ್ಯಕ್ತಿಗತವಾದ ತನ್ನದೇ ತಡವಾದ ಶೈಲಿಯೊಂದನ್ನು ರೂಪಿಸಿಕೊಂಡ. ಈ ಸಾದೃಶ್ಯವನ್ನು, ಉದಾಹರಣೆಗೆ, ರೆಂಬ್ರಾಂಟ್ ಅಥವಾ ಬಿಥೋವೆನ್‌ರ ಜತೆ ಇನ್ನೂ ಮುಂದಕ್ಕೆ ಒಯ್ಯುವುದು...
ಸಮೂಹ ಸಾಧನೆ

ಸಮೂಹ ಸಾಧನೆ

ಸೀಫ್ಲ್‌ನಲ್ಲಿ ನಾನು ಕೆಲಸ ಮಾಡುತ್ತಿದ್ದಾಗ ಕೆಲವು ಸಹಚಿಂತಕರು ಜತೆಸೇರಿ 'ಸ್ಪೀಕ್' (Speak) ಎ೦ಬ ವೇದಿಕೆಯೊಂದನ್ನು ಸುರುಮಾಡಿದೆವು. ಇದು ಸಾಹಿತ್ಯ, ವಿಮರ್ಶೆ, ಭಾಷಾವಿಜ್ಞಾನ, ಫಿಲಾಸಫಿ ಮುಂತಾದ ವಿಷಯಗಳ ಕುರಿತಾಗಿ ವಿಚಾರ ವಿನಿಮಯ ಮಾಡಿಕೊಳ್ಳುವಂಥ ಒಂದು ವೇದಿಕೆಯಾಗಿತ್ತು....
ಪದಾರ್ಥ ಚಿಂತಾಮಣಿ

ಪದಾರ್ಥ ಚಿಂತಾಮಣಿ

ಓದಿನಲ್ಲಿ ಹಲವು ರೀತಿಗಳಿರುತ್ತವೆ: ಕೆಲವು ಪಠ್ಯಗಳನ್ನು ನಾವು ಶೀಘ್ರಗತಿಯಲ್ಲಿ ಓದಿ ಮುಗಿಸುತ್ತೇವೆ: ಯಾಕೆಂದರೆ ಅವುಗಳ ಸಾರಾಂಶವಷ್ಟೇ ನಮಗೆ ಬೇಕಾಗುವುದು -ಪತ್ರಗಳು, ಪತ್ರಿಕೆಗಳು, ಜನಪ್ರಿಯ ಕತೆ ಕಾದಂಬರಿಗಳು ಇತ್ಯಾದಿ. ಇನ್ನು ಕೆಲವನ್ನು ನಿಧಾನಗತಿಯಲ್ಲಿ ಓದಿಕೊಂಡು ಹೋಗುತ್ತೇವೆ:...
ದ್ರಾವಿಡ ಭಾಷಾಧ್ಯಯನ: ಮರಿಯಪ್ಪ ಭಟ್

ದ್ರಾವಿಡ ಭಾಷಾಧ್ಯಯನ: ಮರಿಯಪ್ಪ ಭಟ್

ಪ್ರೊಫೆಸರ್ ಮರಿಯಪ್ಪ ಭಟ್ ಅವರ ಆಯ್ದ ಇಂಗ್ಲಿಷ್ ಲೇಖನಗಳ ಮತ್ತು ಭಾಷಣಗಳ ಸಂಕಲನವೊಂದು Dravidic Studies ಎ೦ಬ ಹೆಸರಲ್ಲಿ ಈಚೆಗೆ ಪ್ರಕಟವಾಗಿದೆ. ಮರಿಯಪ್ಪ ಭಟ್ಟರ ಮಗಳು ಡಾಕ್ಟರ್ ಶಾರದಾ ಜಯಗೋಪಾಲ್ ಸಂಪಾದಿಸಿ ಚೆನ್ನೈನ ಮರಿಯಪ್ಪ...
ಕೂಡಲ ಸಂಗಮದೇವನ ಕನ್ನಡ

ಕೂಡಲ ಸಂಗಮದೇವನ ಕನ್ನಡ

ಭಾಷೆ ಬಹಳ ಹಗುರಾದ ಸಾಧನವಾದ್ದರಿಂದ ಅದರ ಪ್ರಶ್ನೆ ಬಂದಾಗಲೆಲ್ಲ ಅದನ್ನು ನಾವು ಏನುಬೇಕಾದರೂ ಮಾಡಬಹುದು ಎಂದು ತಿಳಿಯುತ್ತೇವೆ. ಅದು ಸಾಧ್ಯವಿಲ್ಲ ಅನಿಸಿದಾಗ ಯಾರು ಯಾರನ್ನೋ ದೂರುತ್ತೇವೆ. ಫರ್ಡಿನಾಂಡ್ ದ ಸಸ್ಸ್ಯೂರ್ ತನ್ನ A Course...
ಕನ್ನಡ ಕಾವ್ಯಧಾತುವಿಗೆ ಅಂಟಿಕೊಂಡಿರುವ ಆತ್ಮೀಯ ಕವಿ

ಕನ್ನಡ ಕಾವ್ಯಧಾತುವಿಗೆ ಅಂಟಿಕೊಂಡಿರುವ ಆತ್ಮೀಯ ಕವಿ

ದುಃಖ ಯಾವಾಗಲೂ ವೈಯಕ್ತಿಕವಾಗಿರುತ್ತದೆ, ಆದ್ದರಿಂದಲೇ ಅದು ಮಾತಿಗೆ ಅತೀತವೂ ಆಗಿರುವುದು. ಅತಿಯಾದ ದುಃಖದಲ್ಲಿ ಉಮ್ಮಳ ಮಾತ್ರವೇ ಸಾಧ್ಯ. ಅಥವಾ ಮೌನ. ಆದರೆ ವೈಯಕ್ತಿಕ ದುಃಖ ಸಾರ್ವತ್ರಿಕವಾದಾಗ ಬಹುಶಃ ಕಾವ್ಯ ಹುಟ್ಟಿಕೊಳ್ಳುತ್ತದೆ. ವಾಲ್ಮೀಕಿಯಲ್ಲಿ ಹೀಗೇ ಆಯಿತು....
ಇತಿಹಾಸೋತ್ತರ ಕಥಾನಕಗಳು

ಇತಿಹಾಸೋತ್ತರ ಕಥಾನಕಗಳು

ಸಾಹಿತ್ಯದಲ್ಲಿ ಪ್ರಾಯೋಗಿಕತೆಯ ಸ್ಥಾನವೇನು? ಇದು ಸೂಕ್ಷ್ಮ ಮನಸ್ಸಿನ ಹಲವು ಸಾಹಿತಿಗಳನ್ನು ಕಾಡುವ ಮುಖ್ಯ ಪ್ರಶ್ನೆಗಳಲ್ಲಿ ಒಂದು. ಸಾಹಿತ್ಯದಲ್ಲಿ ಪ್ರಧಾನವಾಗಿ, ಹಾಗೂ ಕಲೆಯಲ್ಲಿ ಸಾಮಾನ್ಯವಾಗಿ, ನಡೆಯುವ ಬದಲಾವಣೆಯೆಲ್ಲ ರೂಪಶಿಲ್ಪಕ್ಕೆ ಸಂಬಂಧಿಸಿದ್ದಲ್ಲದೆ ವಸ್ತುವಿಗಲ್ಲ ಎಂಬ ವಾದವಿದೆ. ಈ...
ಬಿಳಿಗಿರಿಯವರ ವರಸೆಗಳು

ಬಿಳಿಗಿರಿಯವರ ವರಸೆಗಳು

‘ಯಾವ ಆಟವೇ ಆಗಲಿ, ಅದನ್ನು ಆಡುವಾಗ ಎರಡು ಬಗೆಯ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಮೊದಲನೆಯ ಬಗೆಯ ನಿಯಮಗಳನ್ನು, ಎಂಥ ಆಟಗಾರನೇ ಆಗಲಿ, ಪಾಲಿಸಬೇಕು, ಮುರಿಯುವಂತಿಲ್ಲ. ಎರಡನೆಯ ಬಗೆಯ ನಿಯಮಗಳನ್ನು ಮುರಿಯಬಾರದೆಂದಿಲ್ಲ, ಪಾಲಿಸಲೇಬೇಕು ಎಂದಿಲ್ಲ. ಆದರೆ ಆಟಗಾರ...
ಭವ ನೀಗುವ ಬಗೆ

ಭವ ನೀಗುವ ಬಗೆ

ಕತೆಗಾರ ಎಸ್. ಸುರೇಂದ್ರನಾಥ್ ಭರ್ಜರಿಯಾದ ಕಾದಂಬರಿಯೊಂದನ್ನು ಬರೆದಿದ್ದಾರೆ-ಹೆಸರು ‘ಎನ್ನ ಭವದ ಕೇಡು’ (ಛಂದ ಪ್ರಕಾಶನ, ಬೆಂಗಳೂರು, ೨ಂಂ೭)- ಹಾಗೂ ಆ ಮೂಲಕ ಕನ್ನಡ ಕಾದಂಬರೀ ಕ್ಷೇತ್ರವನ್ನು ಭರ್ಜರಿಯಾಗಿಯೇ ಪ್ರವೇಶಿಸಿದ್ದಾರೆ. ಎನ್ನ ಭವದ ಕೇಡು ಎನ್ನುವುದು...