ಕಣ್ಣೋಟವೋ ಚೆಲ್ಲಾಟವೋ

ಕಣ್ಣೋಟವೋ . . . ಚೆಲ್ಲಾಟವೋ . . . ನೀನು ಕಣ್ಣಲ್ಲೆ ನುಡಿದ ಮಾತು ಕವಿತೆಯಾಗಿದೆ; ನನ್ನ ಕವಿಯ ಮಾಡಿದೆ - ನಿನ್ನ ಹೆಜ್ಜೆಯಲ್ಲಿ ಕಂಡ ನಡಿಗೆ ನವಿಲು ಆಗಿದೆ; ಪ್ರೀತಿ ಸೋನೆ...

ಹರಿದಿದೆ ನೋಡಿ ಕನ್ನಡ ರಥವು

ಹರಿದಿದೆ ನೋಡಿ ಕನ್ನಡ ರಥವು ಪಶ್ಚಿಮದಾ ಕಡೆಗೆ ಕಾಣದಾಗಿವೆ ನಮ್ಮ ದಿಕ್ಕುಗಳು ಪೊರೆ ಬಂದಿದೆ ಕಣ್ಗೆ! || ಪ || ನಮ್ಮಲಿ ಏಳು ಜ್ಞಾನಪೀಠಗಳು ಕನ್ನಡಕೇನು ಬರ? ಕವಿತೆಯೆ ಸಾಕು ಇನ್ನೇನು ಬೇಕು ಕನ್ನಡವು...

ನೋಡಲು ಕ್ರಿಕೇಟು ಮ್ಯಾಚು

ನೋಡಲು ಕ್ರಿಕೇಟು ಮ್ಯಾಚು ಸಹಜವೆ ಉತ್ಸಾಹ ಭಾರತ ಪಾಕ್ ಎಂದರೆ ಯಾತಕೆ ರಣೋತ್ಸಾಹ ನಿನ್ನೆ ನಾವು ಅವರು ಒಂದೆ ತಾಯ ಮಕ್ಕಳು ಇಂದು ಬೇರೆ ದೇಶ ಅದಕೆ ಬೇಕೆ ದ್ವೇಷ ಆಟಕೆ ಬೇಕು ಸ್ನೇಹ...

ಹೂಡಬೇಡ ಬಾಣ

ಹೂಡಬೇಡ ಬಾಣ ಕಣ್ಣ ಅಂಚಿನಲ್ಲಿ ಕಾಡಬೇಡ ಹೀಗೆ ಮೋಹ ಪಾಶದಲ್ಲಿ ಗೊತ್ತು ಪ್ರೀತಿ ಕಡಲು ಅದರ ಚರಿತೆ ಬಹಳ ನಾನೋ ಅಸಮರ್ಥ ತಿಳಿಯಲದರ ಆಳ ನಿನ್ನ ಪ್ರೀತಿ ಕೆಂಪು ಅದಕೆ ನಾನು ದೂರ ತಿಳಿಯಬೇಡ...

ಸಾಕು ತಾಯಿ, ಹಾಲು

ಸಾಕು ತಾಯಿ, ಹಾಲು ನಿನ್ನ ಎದೆಯ ಹಾಲು ಬೇಡ ಇನ್ನು ರಕ್ತ ನಿನ್ನ ಒಡಲ ರಕ್ತ ನನ್ನ ತಪ್ಪು ನೂರು ನಿನ್ನ ಕೋಪಕಶಕ್ತ ಬಗೆದೆ ನಿನ್ನ ಒಡಲ ಗಣಿಯ ಹೆಸರಿನಲ್ಲಿ ಜೊತೆಗೆ ಕುಡಿದೆ ರಕ್ತ...

ಈಚೀಚೆ…

ಈಗೀಗ ನನ್ನಲ್ಲಿ.... ಕೋಗಿಲೆ ಹಾಡುವುದಿಲ್ಲ ಹೂವು ಅರಳುವುದಿಲ್ಲ ಶ್ರಾವಣ ಸುಳಿಯುವುದಿಲ್ಲ ಈಗೀಗ ನನ್ನಲ್ಲಿ.... ಬೆಳುದಿಂಗಳು ಕಾಣುವುದಿಲ್ಲ ತಂಗಾಳಿ ಸುಳಿಯುವುದಿಲ್ಲ ಚಂದ್ರತಾರೆ ಹೊಳೆಯುವುದಿಲ್ಲ ಈಗೀಗ ನನ್ನಲ್ಲಿ.... ಹಾಡು ಹುಟ್ಟುವುದಿಲ್ಲ ಹುಟ್ಟಿದರದು ಹಾಡಲ್ಲ ಹಾಡಾದರೂ ಅದು ನಿಜವಲ್ಲ...

ಬಸವ : ಅಂದು-ಇಂದು

ಬಸವ ನಿನ್ನ ಕಾಲಕ್ಕೂ ನನ್ನ ಕಾಲಕ್ಕೂ ವ್ಯತ್ಯಾಸವೇನಿಲ್ಲ! ಆದರೆ ನಿನಗೂ ನನಗೂ ವ್ಯತ್ಯಾಸ ಬಹಳ! ಬಸವ ನಿನ್ನ ವಿಭೂತಿಗೂ ನನ್ನ ವಿಭೂತಿಗೂ ಬಣ್ಣ, ವಿನ್ಯಾಸ, ಪ್ರೊಡಕ್ಷನ್‌ನಲ್ಲೇನೂ ವ್ಯತ್ಯಾಸವಿಲ್ಲ ಆದರೆ ಅದರೊಳಗಿನ ತತ್ವದ ಮಾತು ಇಲ್ಲಿ...

ಸಂಕ್ರಾಂತಿ

ಸಂಕ್ರಾಂತಿ ಸೂರ್ಯ ಬದಲಿಸುವ ಪಯಣದ ದಿಕ್ಕು ಆ ದಿಕ್ಕು ನಾನಾಗುವುದೆಂದು? ಸಂಕ್ರಾಂತಿ ಎಲ್ಲೆಲ್ಲೂ ಹೊಮ್ಮಿಸುವ ಈ ಭೂಮಿ ಅದಕ್ಕೆ ಅರ್ಥ ತಾರದೇಕೆ? ಭುವಿಗಿಳಿದ ಸಂಕ್ರಾಂತಿ ನನ್ನೆದೆಗಿಳಿಯಲಿಲ್ಲ ಎದೆಗಿಳಿದರೂ ಅಲ್ಲಿ ಸಮೃದ್ಧಿ ತರಲಿಲ್ಲ ಸಮೃದ್ಧಿಯ ಮೇಲೆ...

ರಾಮನಿಲ್ಲದ ನಾಡಿನಲಿ

ರಾಮನಿಲ್ಲದ ನಾಡಿನಲ್ಲಿ ರಾಮ ಬಾಣದ ಆರ್ಭಟ ಜುಟ್ಟು ಗಡ್ಡಗಳ ಕಾಳಗದಲ್ಲಿ ರಕ್ತದೋಕುಳಿ ಚೆಲ್ಲಾಟ ರಾಮನಿದ್ದನೋ ಇಲ್ಲವೋ ಮಸೀದಿಯಂತೂ ಬಿದ್ದಿದೆ ಮಂದಿರ ಮೇಲೇಳದಿದ್ದರೂ ಸಿಂಹಾಸನ ದಕ್ಕಿದೆ ಜುಟ್ಟುಗಳ ಆಚೆಗೂ ಜುಟ್ಟುಗಳು ಬೆಳೆದಿದೆ ಗಡ್ಡಗಳ ಆಚೆಗೂ ಗಡ್ಡಗಳು...

ಮಾತನಾಡಬೇಕು ನಾವು

(ವಿಸ್ತೃತ ಕವನ) ಮಾತನಾಡಬೇಕು ನಾವು ಒಂದು ಘಳಿಗೆ ಕುಳಿತು ಬಿಟ್ಟು ಎಲ್ಲ ಹಮ್ಮು ಬಿಮ್ಮು ಹೃದಯ ಬೆಸೆಯಬೇಕು || ಆಕಾಶವು ಅತ್ತಿದೆ ಧರೆ ಧಗಧಗ ಉರಿದಿದೆ ಪಂಚಭೂತ ನಮ್ಮ ನೋಡಿ ನೇಣುಗಂಬ ಹುಡುಕಿದೆ ಉಳಿಯಲಿಲ್ಲಿ...