
ಮನದ ಬಯಲಲಿ ಬವಣೆಗೊಂಡೆ, ಬಿಸಿಲಿನ ಝಳದೆ ಹುಲ್ಲೆ ಹಂಗಿಸುವ ಹುಸಿನೀರ ಕಾಂಬೊಲು ಕಂಡೆ- ನೀರ, ನೇಹಿಗ, ನಂಟ, ಬಂಟ, ಸಂವಾದಿ, ಗುರು, ಶಿಷ್ಯ, ಪ್ರೀತಿಯ ಚಾತಿಗಾರ! ಎಲ್ಲಿರುವೆ ರಸ- ಸಿದ್ಧ ಗೋರಕ್ಷನುಕ್ಕಿಲೆ ಹೊಯ್ದರೂ ಮುಕ್ಕು ತುಕ್ಕರಿಯದಿದ್ದ ಮೈಕವಚ...
ರವಿ ಶಶಿಯ ಮತ್ತೆ ನೀನಿತ್ತ ಬೆಳಕಲಿ ಗುರುತಿ- ಸುವೆ, ಗುರುವೆ ! ಗುರು ಬುಧರ ಹಾಸಂಗಿಯಲ್ಲಿ ಲೆತ್ತ- ವಾಡುತಿರೆ ಹೊತ್ತು, ಚಿಕ್ಕೆಯ ಪಟ್ಟದಲ್ಲದರ ಲೆಕ್ಕವನು ಗುಣಿಸಿ ಎಣಿಸುವೆ, ಮಲೆಯ ಬನಬನವ ತರಿವ ಮೂಡಲಗಾಳಿ, ಹಸಿರು ಬಯಲಿಗೆ ತರುತ- ಲಿರುವ ಪಡುವಲ ...
ನೊಸಲು ನೊಸಲಿನಲಿರಿಸಿ ಸುಸಿಲಾಡುವವು ಹೂವು ಹೊಳೆ ನೀರ ಬಳಿಗೆ; ಪಡಿನೆಳಲನೆದೆಯೊಳಗಿರಿಸಿ ಮಧುರ ಸಲಿಲ ಸಲೀಲ ನಲಿದಾಡುವದು; ಚಿತ್ರ ರತಿಯ ನೋಡುತ ಚಿಕ್ಕೆ ಕಣ್ಚಿವುಟುವವು; ಮಂದ ಮಾರುತನು ಪಿಸುಗುಡುತಲಿಹನದರ ಸೌಸವದ ಸವಿಮಾತ; ಸಂಜೆ ಬಾಸಣಿಸಲಿದೆ ತಿಮಿ...













