
ಅನುನಯದೊಳಾಲೋಚಿಸಲು ಅರಿತೀತೆಮ್ಮ ಆರೋಗ್ಯವಿಹುದೆಮ್ಮದೇ ದುಡಿವ ಕೈಯೊಳಗೆ ಅನುಕೂಲವೆಂದಿನ್ನಾರೋ ಎಮ್ಮೆ ಬಾಯ್ಗನ್ನವಿಡುವ ಅನಾರೋಗ್ಯವನಾರಾದೊಡಂ ಬೇಕೆನಲುಂಟೇ? ಆರೊ ದುಡಿದನ್ನವುಣ್ಣುತಿರಲೆಲ್ಲೆಡೆಗು ಕೊಳೆರೋಗವಲಾ – ವಿಜ್ಞಾನೇಶ್ವರಾ *****...
ತರತರದಡುಗೆ ಮಾಡುವ ವರಶಕ್ತಿಯೆಮಗಿರಲು ಬರವೆಂದೇನು ಬಡ ಬಡಿಸುವುದೋ ಬೋರಿನಾಳದಿ ನೀರೆತ್ತಿ ಸೂರಪ್ಪ ಮರಗಿಡವನಳಿಸುವುದೋ? ಊರಿಗೂರೇ ಮಧುಮೇಹವಪ್ಪಂತಾ ಕಬ್ಬನಿಕ್ಕುವುದೋ? ಬರವೆನದೆಲ್ಲೆಡೆ ಬೆಳೆವ ಹಲಸಿನಡುಗೆಲ್ಲ ರೋಗಕೆ ಮದ್ದೋ- ವಿಜ್ಞಾನೇಶ್ವರಾ ****...
ವನ್ಯದ ಹಿತಮಿತವನರಿತಲ್ಲಲ್ಲೇ ಶೂಲದ ಮೊನೆಯೊಳಾಡಿದ ಬೇಟೆ ಭೋಜನ ಬಿಟ್ಟೇನಿ ದೇನಿದೆಲ್ಲ ವನ ಕಾನನ ಕಡಿದಲ್ಲಿ ಮುಸುಕಿನ ಜೋಳ ವನು ಬೆಳೆದದನು ಹದಿನಾರಕೊಂದಂಶ ಮಾಂಸಕಿಳಿಸುವಾ ಧುನಿಕ ಪಶುಪಕ್ಷಿ ಸಂಗೋಪನೆಗೆ ವಿಜ್ಞಾನವೆನ್ನುವುದೋ ? – ವಿಜ್ಞಾನೇ...
ಮಸಣಕೊಯ್ದ ಹೆಣವಿದನು ಸುಟ್ಟು ಕಳೆಯೆಂದು ಮಾರುಕಟ್ಟೆಗೊಯ್ದ ಕೃಷಿ ಸರಕುಗಳನವಗಣನೆ ಮಾಡುತಲಿ ಬೆಳೆದಿಹರೆಮ್ಮ ವರ್‍ತಕರು ಮಸಣವಾಸಿಗಳವರು ಮಾರಿದಾ ಹೊಲಸು ಮ್ಹಾಲನು ತಿನುವರಲಾ ನಗರವಾಸಿಗಳು – ವಿಜ್ಞಾನೇಶ್ವರಾ *****...
ಹೊಟ್ಟೆ ಹಸಿವೊಂದೆ ದಿಟದ ಹಸಿವದನು ಹೆರರು ತಣಿಸುತಿರಲಿಂದು ಆ ಒಂದು ಹಸಿವೆ ನೂರೊಂದಾಗಿ ಭೂಗರ್‍ಭವನೆ ಹರಿದು ಮುಕ್ಕುತಿರಲಿನ್ನು ತಿನ್ನುವುದೇನು? ಹಿಂತಿರುಗಿ ದುಡಿದುಣಲು ಕಲಿಯಬೇಕಿನ್ನು – ವಿಜ್ಞಾನೇಶ್ವರಾ *****...
ಎಷ್ಟೆ ಗಡಿಬಿಡಿ ಇರಲಿ, ಗಡಿಬಿಡಿ ಸಾರು ಮಾ ಳ್ಪಷ್ಟಾದೊಡಂ ಅಡುಗೆಮನೆ ಕೆಲಸವೆಮಗಿರಲಿ ಲೊಟ್ಟೆ ಜಾಹೀರಿಗೆಮ್ಮ ಮನ ಜಾರದಿರಲಿ ಹೊಟ್ಟೆಯೊಳು ಬರಿ ತೊಟ್ಟೆಯಬ್ಬರವೇರದಿರಲಿ ರಟ್ಟೆಯೊಳನ್ನದಭಿಮಾನ ಆರದಿರಲಿ – ವಿಜ್ಞಾನೇಶ್ವರಾ *****...
ಬೆಂಕಿ ಬಿಸಿಲುಪ್ಪು ಸಕ್ಕರೆಯೊಡಗೂಡಿ ಅಲಫಲಗಳಿ ನ್ನೊಂದು ರುಚಿಯೊಳುದಿಸಿ ದೀರ್‍ಘಾಯುವಪ್ಪಂತೆಮ್ಮ ಸ್ವಂತಿಕೆಯೊಡಗೂಡಿ ಗುರು ಹಿರಿಯರಾದರ್‍ಶ ಸೇರಿದರದನು ಖಂಡಿತದಿ ಮೌಲ್ಯವರ್‍ಧನೆ ಎನಬೇಕಲ್ಲದಿದೇನು ನಿಂದ್ಯ ಪರಿರಕ್ಷಕಗಳೊಡ್ಡೋಲಗಕೆ ಮೌಲ್ಯವರ್‍ಧನೆಯ...
ಕಾಯಿ ಹಲಸನೆಣ್ಣೆಯೊಳು ಕರಿದು ಮಾರಲಾ ಧನದೊಳಾ ದಾಯವೇರಿದೊಡದನು ಮೌಲ್ಯ ವರ್‍ಧನೆಯೆನುವರಲಾ? ಕಾಯ ಕಷ್ಟದ ಕೃಷಿಯ ಬಯಸದೆ, ಕೃಷಿಯ ಕಷ್ಟವ ಮಯಣವೆನ್ನದೆ, ಎಣ್ಣೆ ಸವರುತ ಮಯಣ ಕಳೆಯದೆ ನಯದೊಳುಣುವರನೋಲೈಸಿದೊಡದು ಮೌಲ್ಯವರ್‍ಧನೆಯೇಂ? – ವಿಜ್ಞಾನೇ...
ರುಚಿಯೊಳ್ ಮಾವನು ಫಲರಾಜನೆಂದೊಡೆನಬಹುದು ಯೋಚಿಸಲಾ ಪಟ್ಟ ಹಲಸಿಗಿರಬೇಕು ದಿಟದಿ ಉಚ್ಛತನವಿದಕೆ ಸಲ್ಲುವುದು ಗಾತ್ರದಲಿ ಅಡುಗೆ ಪಾತ್ರದಲಿ ಒಕ್ಕೊರಿಯೊಳಿದರಿಂದ ಮಾಡಲುಬಹುದನೇಕ ಮೇಲೋಗರವ ಅಚ್ಚರಿಯೊಳಿದುವೆ ಓಗರಕೆ ಬದಲಹುದನೇಕ ತರಹ – ವಿಜ್ಞಾನೇ...
ಹಾ ಎಂದೊಡದು ಆನಂದವಿರಬಹುದು ಹಾ ಎಂದೊಡದು ಆಕ್ರಂದವಿರಬಹುದು ಹಾ ಎನಲಿಕ್ಕೆಡೆಗು ಹಲಸಿನೊಳುತ್ತರವಿಹುದು ಹಬ್ಬದಡುಗೆಯದೇಕೆನುವ ರುಚಿ ಹಲಸಿನೊಳಿಹುದು ಹಸಿದ ಹೊಟ್ಟೆಗೆ ಹಲಸು ಹಬ್ಬದೂಟವೆ ಹೌದು – ವಿಜ್ಞಾನೇಶ್ವರಾ *****...













