ಅಮ್ಮ ನಿನ್ನ ಕೈಯ ಹಿಡಿದು ನಡೆಯ ಕಲಿತೆನು ಅಮ್ಮ ನಿನ್ನ ಮಾತ ಕೇಳಿ ನುಡಿಯ ಕಲಿತೆನು ಅಮ್ಮ ನಿನ್ನ ಕಣ್ಣಿನಲ್ಲಿ ನನ್ನ ಬಿಂಬ ಕಂಡೆನು ನಿನ್ನೆದೆಯ ಹಾಲಿನಲ್ಲಿ ಅಮೃತವುಂಡೆನು ಪೂಜೆ ಬೇಡ ಧ್ಯಾನ ಬೇಡ...
ಮರವೇ ಮರವೇ ಎಷ್ಟಿವೆ ಪೊಟರೆ ನಿನ್ನ ಬಳಿ ಒಂದೊಂದ್ ಪೊಟರೆಲಿ ಯಾರ್ಯಾರಿರುವರು ಅಳಿಲೇ ಇಳಿಯೇ ಪಂಚರಂಗಿ ಗಿಳಿಯೇ ಅರಣೆಯೆ ಹಾವೇ ನೆಲದಲ್ಲೆಲ್ಲೂ ಬೆಳೆಯದ ಹೂವೇ ಅಥವಾ ಗೂ ಗೂ ಕೂಗುವ ಗೂಗೇ? ನನಗೂ ಒಂದು...
ಉದ್ಯೋಗ ಭಾಗ್ಯದ ಯೋಜನೆ ಕೆಳಗೆ ಪುಟ್ಟ ನೊಂದಾಯಿಸಿದ ಡಾಕ್ಟರನಾಗಿ ಕತ್ತರಿ ಕೊಟ್ಟರು ಟೇಪೂ ಇತ್ತರು ಕತ್ತರಿಸಿಕೋ ಎಂದುಬಿಟ್ಟರು ಹೊಲಿಯೋದಕ್ಕೊಬ್ಬ ಬಟನಿರಿಸೋದಕ್ಕಿನ್ನೊಬ್ಬ ಅಕ್ಕ ಪಕ್ಕದಲಿ ಕೂತುಕೊಂಡಿದ್ದರು ಇದೇನು ಕೆಲಸ ದರ್ಜಿಯ ಕೆಲಸ ನಾ ಕೇಳಿದ್ದು ಡಾಕ್ಟರ...
ಆಕಾಶಕೆ ಕಲ್ಲೆಸೆದು ಕಾಯುತಿರುವನು ಪುಟ್ಟ ಅರೆ! ಮೇಲೇರಿದ್ದು ಕೆಳ ಬೀಳಲೆ ಬೇಕಲ್ಲ ಇದು ಮಾತ್ರ ಬೀಳ್ತಾನೇ ಇಲ್ಲ! ನಕ್ಷತ್ರವಾಗಿ ಕೂತ್ಕೊಂಡ ಹಾಂಗಿದೆ ಬಹುಶಾ ಧ್ರುವನ ತಮ್ಮ ಉಲ್ಕೆಯ ಹಂಗೆ ತಪ್ಪಿಸಿಕೊಂಡಿದೆ ಶನಿ ಮಹಾತ್ಮನ ಅಮ್ಮ...
ತಂಟ್ಳುಮಾರಿ ಪಾಂಡುರಂಗ ಮಾಡುತಾನೆ ತಂಟೆಯ ಮಂಗಳಾರತಿ ಮುಗಿದ ಮೇಲೂ ಬಾರಿಸುತಾನೆ ಗಂಟೆಯ! ಇನ್ನೂ ಯಾತಕೆ ಎಂದರೆ ಹೇಳ್ತಾನೆ: ನಾಳೆಯ ಲೆಕ್ಕಕೆ ಬರಕೊಳ್ಳಿ ತುಸು ಬಡ್ಡೀನಾದ್ರೂ ಇಸಕೊಳ್ಳಿ! *****