ಉದ್ಯೋಗ ಭಾಗ್ಯದ ಯೋಜನೆ ಕೆಳಗೆ
ಪುಟ್ಟ ನೊಂದಾಯಿಸಿದ ಡಾಕ್ಟರನಾಗಿ

ಕತ್ತರಿ ಕೊಟ್ಟರು ಟೇಪೂ ಇತ್ತರು
ಕತ್ತರಿಸಿಕೋ ಎಂದುಬಿಟ್ಟರು

ಹೊಲಿಯೋದಕ್ಕೊಬ್ಬ ಬಟನಿರಿಸೋದಕ್ಕಿನ್ನೊಬ್ಬ
ಅಕ್ಕ ಪಕ್ಕದಲಿ ಕೂತುಕೊಂಡಿದ್ದರು

ಇದೇನು ಕೆಲಸ ದರ್ಜಿಯ ಕೆಲಸ
ನಾ ಕೇಳಿದ್ದು ಡಾಕ್ಟರ ಕೆಲಸ

ಅಂತ ಪುಟ್ಟ ಅಲವತ್ತುಕೊಂಡರೆ
ಅವರಂತಾರೆ-ಇದು ಹೀಗೇ

ಬಟ್ಟೆ ಕತ್ತರಿಸಿದರೆ ದರ್ಜಿ
ಹೊಟ್ಟೆ ಕತ್ತರಿಸಿದರೆ ಡಾಕ್ಟ್ರು

ಏನ್ ಕತ್ತರಿಸ್ತೀಯೋ ಅದು ನಿನ್ನಿಷ್ಟ
ನಮಗೇನಿಲ್ಲ ನಷ್ಟ!
*****