Home / Poem

Browsing Tag: Poem

ಖಾದರಿ ಸದಾವರಿ ನಿತ್ಯ ನಿರಂಜನಾವರಿ ||ಪ|| ಪಂಚ ಪ್ರಣಮ ಘೋಷನಾದ ಮುಂಚೆ ಮೌನ ಖಾದರಿ ಸಂಚಿತಾರ್ಥ ವಿಷಯ ಕರ್ಮವಿದು ಪ್ರಪಂಚದೂರ ಖಾದರಿ ಪದವಿದಾನು ಸದವಿದಾನು ಪದವಿದೂರ ಖಾದರಿ ||೧|| ಆದಿನಾದ ಮೋದನಾದ ಹಮ್ಮನಳಿದ ಖಾದರಿ ಮೇದಿನಿ ಸ್ಥಳದಿ ಶಿಶುನಾಶ ಶಹ...

ದಶಾವತಾರಕಾ ಕೃಷ್ಣ ದಶಾವತಾರಕಾ…. ||ಪ|| ಕೃಷ್ಣಮೂರ್ತಿ ಸೃಷ್ಟಿಪೂರ್ತಿ ಇಷ್ಟದಾಯಕಾ ಸರ್ವೇಷ್ಟದಾಯಕಾ ||೧|| ಬಲಿಯ ತುಳಿದು ನೆಲಿಯ ತಿಳಿದು ಕಲಿವಿಚಾರಕಾ ಮಹಾಬಲದಿ ಪೂರಕಾ ||೨|| ಬೌದ್ಧ ವಾಮ ಪರಶುರಾಮ ಕ್ಷತ್ರಿನಾಶಕಾ ಮತ್ಸ್ಯ ಕೂರ್ಮರೂಪಕಾ ...

ಬೋದಹ ಒಂದೇ ನಾದ ಒಂದೇ                              ||ಪ|| ಸಾದಹನ ಮಾಧುವ ಹಾದಿ ಒಂದೇ ಆದಿ ಪದ ಒಂದೇ                        ||ಅ.ಪ|| ಬಿಂದು ಒಂದೇ ನಿಜಾ- ನಂದ ಒಂದೇ ತಂದೆ ಸದಗುರು ಒಂದೇ ಅಂದಿಗಿಂದಿಗೊಂದೇ                        ...

ಮೈಲಾರ ಮಹದೇವ ಕೈಲಾಸಪತಿಯೆ ||ಪ|| ನಯ ಭಯದಲಿ ಮೈಯಿಕ್ಕುವೆ ಚರಣಕೆ ಕೈಮುಗಿದೆರುಗುವೆ ಸೈ ಸದ್ಗುರು ರಾಯ ||ಅ.ಪ.|| ಸುಂದರ ಮೂರುತಿ ಬಂಧುರ ಕೀರತಿ ಚಂದಾಸುರನ ವಧಮಾಡಿ ಜಗಕೆ ಆನಂದ ಬೀರಿದೆ ಮೈಲಾರಲಿಂಗ ||೧|| ಘನಕರುಣ ವೀರನೆ ಚಿನುಮಯ ಶೂರನೆ ಮಣಿಮಲ್...

ಅಪ್ಪಯ್ಯನವರ ಪಾದ ಕಂಡೆ ಸ್ವಾಮಿ ಗುಡಿಪುರ ಗ್ರಾಮದೊಳೇರಿಸಿ ಜಂಡೇ ||ಪ|| ಉಕ್ಕುತಿಹ ಆನಂದ ಭರದಿ ಸಕ್ಕರೆಯನೋದಕಿಯ ಮಾಡಿ ಓಂಕಾರ ಪ್ರಣಮವ ನೋಡಿ ಬಹುಕಾಲ ಭಕ್ತರ ಕೂಡಿ ಬಸವಾದಿ ಪ್ರಮಥರು ಹಾಡಿ ||೧|| ಅಂಬರಪುರವಿಂಬುಮಾಡಿ ಸಾಂಬನೂರವಿಲೆ ಬೆಳಿಸ್ಯಾರೊ ...

ಆದಿಬಸವ ಅನಾದಿಯಿಂದಲು ಮೇದಿನಿಗಿಳಿದು ಬಂದ ಚೋದ್ಯ                    ||ಪ|| ಶೋಧಿಸಿ ನಗರ ಕಲ್ಯಾಣದಿ ಕಲಿಯುಗ ವಿನೋ- ದದಿ ಸಲುಹಿದ ಶಿವನಾರಾಧ್ಯ                        ||೧|| ಸರಳು ಜಪಾಂಗುಲಿ ಕಿರಿಬೆರಳು ನೋಸಲಲಿ ಧರಿಸಿ ಮರಣ ಗೆಲಿವುದು...

ಭಲಿರೆ ಬಾಲದಂಡ ಹನುಮ ಶಿಲೆಯೊಳಗೆ ಮೂಡಿ ನೆಲಿಸಿದೆಯೋ ಜನರೊಲಿಸಿದೆಯೋ                    ||ಪ|| ಕಲಹ ಕಂಠೀರವನಾಗಿ ಲಂಕೆಯನು ಸುಟ್ಟು ಬಲದಿ ರಾಮನ ಛಲ ಗೆಲಿಸಿದಿಯೋ ಸಿಟ್ಟಲೆ ಅಉರರ ಕುಟ್ಟಿ ಧುರದಿ ನಿಂತು ಘಟ್ಟಿ ಸೀತೆಗೆ ಮುದ್ರಿಯುಂಗುರ ಕೊಟ್ಟಿ...

ನೀಲಕಂಠನ ದಿವ್ಯ ಆಲಯದೊಳು ಬಂದು ಸಾಲಿಟ್ಟು ಸಾಧು ಸಮ್ಮುಖ ನೋಡಿದ್ಯಾ                            ||ಪ|| ಕಾಲಾನುಕಾಲನ ಕಾಲವಂದನೆ ಗೆದ್ದು ಮೇಲಾದ ಮಹಿಮೆ ನೋಡಿದ್ಯಾ                                    ||೧|| ಮೂರು ತನುವಿನೊಳು ಏರುವ ಸ...

ರಾಮಲಿಂಗಮೂರ್ತಿ ಸದ್ಗುರು ಸ್ವಾಮಿ ನಿನ್ನ ಕೀರ್ತಿ ನೇಮದಿ ನಿನ್ನಯ ನಾಮವ ಸ್ಮರಿಸುವೆ ಆ ಮಹಾ ಶಿಗ್ಗಲಿ ಗ್ರಾಮದೊಳಗೆ….ಶ್ರೀ ||೧|| ಛಂದದಿ ನಾ ಬಂದು ಈ ಕ್ಷಣ ಸೇವೆಯೊಳಗೆ ನಿಂದು ಅಂದ ವಚನಗಳ ಸಿದ್ಧಿಗೆ ಹೊಂದಿಸು ಎಂದೆಂದಿಗೂ ನಿನ್ನ ದ್ವಂದ್ವ...

ನಂಬಿದೆ ನಾ ನಿನ್ನ ಶಂಭೋ ರಕ್ಷಿಸು ಎನ್ನ ||ಪ|| ಕುಂಬಿನಿಹೊಳು ಬಿಡದೆ ತುಂಬಿ ತುಳುಕುತಲಿರುವೆ ||ಅ.ಪ.|| ಹರನಾಮದಲಿ ಪ್ರೇಮದಲಿ ಕರೆಗೊಂಡು ಮನಸಿನಲಿ ವರವ್ಯಸನವನು ಕಳೆದು ನಿರುತ ಪಾಲಿಸು ದೇವಾ ||೧|| ಜಡದೇಹಿ ಜಗದಿ ನಾನು ಮೃಡರೂಪ ಮೂರ್ತಿ ನೀನು ಪ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....