ಮೂರ್ಛೆ ಬಂದಿತ್ತು

ಮೂರ್ಛೆ ಬಂದಿತ್ತು! ಮೂರ್ಛೆ ಬಂದಿತ್ತು! ಕಾಂಪೋಂಡು ಬಂಗ್ಲಿ ಕಂಕಮ್ಮಂಗೆ ಮೂರ್ಛೆ ಬಂದಿತ್ತು ಮದಿವೊ ಏನೋ ಆಗುತಿತ್ತಂತೆ ಚಪ್ಪರ ಕಂಬ ವರಗಿದ್ದರಂತೆ ಮದವಣಗನ್ನೇ ನೋಡುತಿದ್ದರಂತೆ ಯಾಕೋ ಏನೋ ಬಂದವರಂತೆ ಯಾರೋ ಏನೋ ಉಸಿರಿದರಂತೆ ಕೂತಿದ್ದ ಹಾಗೇ...

ಪಂಡಿತ

ಫಣೆಗೆ ಚಂದಿರ ರೇಖೆ ಆಣಿಯಾಗಿ ತಿದ್ದಿಟ್ಟು! ಮಣಿರಮಣಿ ತಾರೆಯೊಲು ಮಿಣುಗು ದೀಪವನಿಟ್ಟು ಕ್ಷಣಗಳನ್ನು ವರಸತಿಯು ಎಣಿಸುತಲಿ ಕುಳಿತಿರಲು! * * * ಘನ ಘನೋಪಾಧಿಗಳ! ತನ ಬುದ್ಧಿಯಿಂ ಪಡೆದ ಘನಶ್ರೇಷ್ಠ ಪಂಡಿತನು ತನಿಗಬ್ಬ! ಓದುತಲಿ!...

ಕಿಡಿ

ಕಿಡಿಯೊಂದನಡಗಿಸೆ ನುಡಿಬಲೆ ಹೂಡಿ ಗುಡುಗಾಡಿ ಜಗವೆಲ್ಲ ಸುತ್ತಿತು ಹಾಡು ಸಿಡಿಯುತ ನುಡಿಗಳು ಸುಳಿರಾಗವುಗುಳೆ ಒಡಲುರಿಯೆಂದಿತು ಧರಣಿಯು ಹೊರಳಿ ಚಿಗಿಯಿತಿದಾಶೆಯ ಕಿಚ್ಚಿದು ಕಿಚ್ಚು ಚಿಗಿಯಿತು ಕವಿಮನದಾಶೆಯ ಕಿಚ್ಚು ಇನ್ನೊಂದು ಕಿಡಿಯಿಟ್ಟೆ ರೇಖೆ ಬಣ್ಣದಲಿ ಮುನ್ನದ ಮೋಹಿಸಿ...

ಕನ್ನಡಿ

ಕಳವಳವು ಕನಸಿಂದ ಬೆಳಗಾಗಿ ಬಲುಕಾಲ ಕಳೆದು ಹೋಯ್ತೆನುತಾಗ ತಿಳಿವಿನಾ ರಾಣಿತಾ ನಿಳಿದು ಮಂಚವ ಬೇಗ ತಿಳಿನೀರ ಮಿಂದೆದ್ದು ಬಿಳಿ ಮಡಿಯ ಶೆಳೆದುಡುತಲೆ ತರಣಿಗರ್ಘ್ಯವನಿತ್ತು ಅರಿವಿನಾರಾಣಿ ಜಪ ಸರವ ಪಿಡಿದಾಗ ಕುಳಿತಿರುತಲರ ಘಳಿಗೆಯುರು ತರದ ಶಾಂತಿಯ...

ಉಘೇ

ಉಘೇ ಉಘೇ ಉಘೇ ಹಿಂದು ದೇಶ ಹಿಂದು ಹೃದಯ ಸಿಂಧು ಗೋದೆ ಗಂಗೆಯು ಅಂದಿಗಿಂದಿಗೆಲ್ಲ ಒಂದೆ ಹಿಂದು ಜನ ಸ್ವತಂತ್ರರು ಉಘೇ ಉಘೇ ಉಘೇ ಮುಳಿಗಿ ಸೂರ್ಯ ಬೆಳಗಿ ಸೂರ್ಯ ಮುಳುಗಿ ಪರರು ಮೇಗಡೆ...

ಕಂಕಣ

ತಿರುಗಿದೆನು ಕರುನಾಡ ವರೆಯಿಡುತ ಪೂರವಕೆ ಉರುಭಯಂಕರವಾಯ್ತು ನಡುಗಿತೆದೆಯುಡುಗಿ ಬಲ ಪಡುವಲಿನ ಹೊಡೆತದಲಿ ವಡಲೊಡೆದು ಬೇರೆನಿಸಿ || ಸಡಲಿರಲು ಪ್ರೇಮಬಂಧ || ಮರುಗಿದೆನು ಹಂಪೆಯಲಿ ಸೊರಗಿದೆನು ಸುಯಿಲಿಡುತ ಅರಿಯಿರಿದ ರೂಪಗಳ ತಡವರಿಸಿ ತಬ್ಬಿದೆನು ಮೃಡನಲ್ಲಿ ಬೇಡಿದೆನು...

ಯದುಮಣಿಯ ಜನುಮದಿನ

ಯಾದವರ ಜಿವಸುಳಿ ವುರಿಗೆರೆಯು ಮೈಸೂರು ಆದಿಯಲಿ ತೆಂಕಣಕೆ ಅಂಕಿತವ ನಿಡಲಿಳಿದು ಮೇದಿನಿಯ ನಾಡಿಸಿದ ನಾಡಿಯಿದು ಬೆಳೆದಿಹುದು ದ್ವಾಪರದಿ ಕಲ್ಕಿಗೆನಲು ಆದಿಯಿಂ ರಾಜ ಕಂಠೀರವರ ದೇವಚಾ ಮೋದಧಿಯ ಚಂದ್ರ ಕೃಷ್ಣೇಂದ್ರನೆನೆ ಜ್ಯೋತಿಗಳ ಮೋದದಲಿ ರಾಜಸಿರಿ ಹಾದಿಯಲಿ...

ಗಣಪತಿ

ಹೊಗಳುವರು ಭಟ್ಟಂಗಿಗಳು ನಿನ ಗಗಣಿತಾರೋಪಗಳ ಮಾಡುತ ಹಗರಣದ ಕಾಮುಕರು ನಿನ್ನರಿತವರು ಅವರಲ್ಲ ಸುಗುಣ ನಿರ್‍ಗುಣ ರೂಪ ನೀನೈ ಜಗಕೆ ಮಂಗಳ ಕಾರಿ ನೀನೈ ಮಗುಳೆ ನಮ್ಮಲಿ ಹೊಳೆವ ತೇಜವೆ! ಹೊರತೆ ನೀ ಯಮಗೆ ನೊಂದಿ...