
ಮಂಗಳಂ, ಮೈಸೂರಿನರಮನೆಗೆ ಮಂಗಳಂ. ಜಯದ ಹೆಸರಿನ ಚಾಮರಾಜಂಗೆ ಮಂಗಳಂ. ಮುಮ್ಮಡಿಯ, ನಾಲ್ಮಡಿಯ ದಿವ್ಯ ತೇಜಂಗಳಂ ಒಮ್ಮುಡಿಯೊಳಾಂತೆಸೆವ ಧೀರಂಗೆ ಮಂಗಳಂ. ತಂದೆತಾಯ್ ಪಯಿರಿಟ್ಟ ಪುಣ್ಯದ ಫಲಂಗಳೇ, ಸೋದರನ ಸೌಭಾಗ್ಯದಮೃತ ಕಳಶಂಗಳೇ, ಲಾವಣ್ಯ ಲಕ್ಷ್ಮಿಯರನಾಳ...
ಕನ್ನಡದ ಬಾನಿನಲಿ ಮೂಡಿತದೊ ಬೆಳಕು, ಪುಣ್ಯ ಕಣ್ದೆರೆದಂತೆ ಬೆಳಕು! ಕನ್ನಡಿಗರೊಲುಮೆ ತೆರೆಹೊಮ್ಮಿಸುವ ಬೆಳಕು, ಹೊನ್ನ ಕನಸನು ತರುವ ಹೊಸ ಕಳೆಯ ಬೆಳಕು, ಮುನ್ನರಿಯದಚ್ಚರಿಯ ಮೆಚ್ಚು ಬೆಳಕು. ಬೆಳ್ಳಿ ಬೆಳಗುವ ಬಾನ ಬೆಳ್ಳನೆಯ ಬೆಳಕು, ಒಳ್ಳಿತೊಸರುವ ಹ...
೧ ಇನ್ನೊಮ್ಮೆ ಪಾಡುವೆನ್ ನನ್ನ ದೊರೆ ಕೃಷ್ಣನನ್ – ಇನ್ನೊಮ್ಮೆ ಪಾಡುವೆನ್ ರಾಜರ್ಷಿ ಕೃಷ್ಣನನ್. ನನ್ನ ದೊರೆಗೆನ್ನ ಪೊರೆದಾಳ್ದಂಗೆ, ನನ್ನೊಲವಿನಾಣ್ಮಂಗೆ, ನನ್ನುಸಿರ ಭಕ್ತಿಯೊಡೆಯಂಗೆ, ಭಕ್ತ ಕನಕಂಗೆ, ಕಲಿಕಾಲ ಜನಕಂಗೆ, ಕರ್ನಾಟಕ ಪ್ರೇಮಸಾಮ...
ಏರಿಸಿ, ಹಾರಿಸಿ, ಕನ್ನಡದ ಬಾವುಟ! ಓಹೊ ಕನ್ನಡನಾಡು, ಆಹ್ ಕನ್ನಡನುಡಿ! ಹಾರಿಸಿ, ತೋರಿಸಿ, ಕೆಚ್ಚೆದೆಯ ಬಾವುಟ! ಗಾಳಿಯಲಿ ಫಟಪಟ, ದಾಳಿಯಲಿ ಚಟಚಟ, ಉರಿಯಿತೋ ಉರಿಯಿತು ಹಗೆಯ ಹಟ ಮನೆ ಮಟ, ಹಾಳ್ ಹಾಳ್ ಸುರಿಯಿತು ಹಗೆಯ ಬೀಡಕ್ಕಟ! ಬಾಳ್ ಕನ್ನಡ ತಾಯ್...
(ವಿಜಯನಗರ ಸಾಮ್ರಾಜ್ಯದ ಆರುನೂರು ವರ್ಷದ ಹಬ್ಬದಲ್ಲಿ) ೧ ಹಿರಿಯರಿರ, ಕೆಳೆಯರಿರ, ಅಕ್ಕತಂಗಿಯರಾ, ಅಣ್ಣತಮ್ಮದಿರಾ, ಒಸಗೆನುಡಿ ತಂದಿಹೆನು ನಾನೊಂದ, ತಾಯಿಂದ, ಸಿರಿಯ ತಾಯಿಂದ- ಕೇಳುವಿರ ಕಿವಿಗೊಟ್ಟು, ತಾಳುವಿರ ಎದೆನೆಟ್ಟು, ತಾಳಿ ಬಾಳುವಿರಾ ? ಕಣ್...
೧ ಕಾಯಿ, ತಾಯಿ, ಕೃಪೆಯ ತೋರಿ ನಮ್ಮ ಕೃಷ್ಣನ ; ಬೆಳ್ಳಿಬೆಟ್ಟದೊಡತಿ, ಗೌರಿ, ಬೆಳ್ಳಿಯೊಸಗೆಗೊಸಗೆ ಬೀರಿ ಕಾಯಿ ಕೃಷ್ಣನ, ಏಳು, ವಾಣಿ, ವೀಣೆದಾಳು, ಅಮೃತವಾಣಿಯಿಂದ ಹೇಳು ಪುಣ್ಯದರಸು, ಧರ್ಮದಾಳು, ದೊರೆಯ ಕೃಷ್ಣನ. ಹೊನ್ನು ನಡೆಯ, ಹೊನ್ನು ನುಡಿಯ, ಕ...
ಮೊದಲು ತಾಯ ಹಾಲ ಕುಡಿದು, ಲಲ್ಲೆಯಿಂದ ತೊದಲಿ ನುಡಿದು, ಕೆಳೆಯರೊಡನೆ ಬೆಳೆದು ಬಂದ ಮಾತದಾವುದು- ನಲ್ಲೆಯೊಲವ ತೆರೆದು ತಂದ ಮಾತದಾವುದು- ಸವಿಯ ಹಾಡ, ಕತೆಯ, ಕಟ್ಟಿ, ಕಿವಿಯಲೆರೆದು, ಕರುಳ ತಟ್ಟಿ, ನಮ್ಮ ಜನರು, ನಮ್ಮ ನಾಡು, ಎನಿಸಿತಾವುದು- ನಮ್ಮ ಕ...
ನಿಮ್ಮ ನಾಡಾವುದು ? ಮೈಸೂರು. ನಿಮ್ಮೂರದಾವುದು ? ಮೈಸೂರು. ಕನ್ನಡದ ಕಣ್ಣದು, ಮೈಸೂರು. ನಾಲುಮಡಿ ಕೃಷ್ಣನ ಮೈಸೂರು. ಅಲ್ಲೆಲ್ಲಿ ನೋಡಿದರು ಬಾನ ಕರೆಯಲಿ ಹದುಗಿ ಕಾರ ಮುಗಿಲಂತಿಹುವು ಬೆಟ್ಟ ಹಬ್ಬಿ ; ತೆರೆ ಎದ್ದು ಬಿದ್ದು ಬಹ ಬಯಲಲ್ಲಿ ಹಳ್ಳಿಗಳು, ...














