ಚಿದಂಬರ

ಕಲವಧುವಿನೊಲು, ಅಡಕದಲಿ ನಗುವ ಕೌತುಕ-ಕು- ತೂಹಲದ ಕಣಿಯ ಕಣ್ಣಲಿ ತೆರೆದು, ’ಮುಗಿಲ ನೀ- ಲಿಯ ಕುಡಿದು ಬಿಳಿದು ಮಾಡುವೆ’ನೆಂದು ಹಸಿದ ಹ- ಳ್ಳಿಯ ಹುಡುಗ! ಗುರುವೆನುವ ಗರುವಾಯಿಯಲಿ ನಿಂತಿ- ರಲು ಇದಿರುಗೊಂಡೆ ನನ್ನನು ನೀನು,...

ಏನ ಮಾಡಲಿರುವೆ ನೀನು

ಏನ ಮಾಡಲಿರುವೆ ನೀನಿದುವರೆಗೆ ಯಾರು ಮಾಡದ ಏನ ಕಲ್ಪಿಸಲಿರುವೆ ಯಾರಿದುವರೆಗೆ ಕಲ್ಪಿಸದ ಬಲೆಯ ನೇಯುವೆಯ ಜೇಡ ಆಗಲೇ ನೇಯ್ದಿದೆ ಕಲೆಯ ಬರೆಯುವೆಯ ಆ- ಕಾಶ ಆಗಲೇ ರೂಪಿಸಿದೆ ಮುತ್ತ ಪೋಣಿಸುವೆಯ ಇಬ್ಬನಿ ಆಗಲೇ ಪೋಣಿಸಿದೆ...

ಕಣ್ಣ ರೆಪ್ಪೆಯ ಕೆಳಗೆ

ಎಲ್ಲಿಂದ ಬರುತ್ತವೆಯೋ ಹಾಳಾದ ಕಣ್ಣೀರು? ಏಕೆ ಹರಿಯುತ್ತವೆಯೋ ಬಳಬಳನೆ ಸುಮ್ಮನೆ! ಗೋರಿಗಳ ಕೇರಿಯಲ್ಲಿ ಮಸಣ ಸಮಾಧಿಯಲಿ ಅಂತರಂಗದ ಏಕಾಂತ ದೂರದೂರದ ತನಕ ಹಬ್ಬಿರುವ ಮೌನದಲಿ ಕುಟುಕುತ್ತಿದೆ ಗೋರಿಕಲ್ಲು ಗಾಳಿಯಲಿ ಕನಸ ತೂರಿ! ಏಕೆ ಹರಿಯುತ್ತಿದೆ...

ಬೇಕು-ಬೇಡ

ಬೇಕೆಂಬುವ ಬಡತನವ ನ್ನೇಕೆ ಕರೆದುಕೊಳುವೆ? ಬೇಡದೆ ಬಹ ಬಲುಧನವ ನ್ನೇಕಕಟಾ ಕಳೆವೆ? ಹಗಲ ಕುಮುದದಿಂದುಭಿಕ್ಷೆ, ಶಿಶಿರಾಂತದ ಸುಮೋಪೇಕ್ಷೆ ನೆರೆಯಲೆಂದುಮಳವೆ? ೭ ಬೇಕೆನೆ ನೀನೊಮ್ಮೆ ಬಳಿಕ ಬೇಕೆನುವೆಲ್ಲವಂ- ಬೇಡುವುದಿನ್ನೇಕೆ ತುಳುಕ ಲಂಬುಧಿ ಸಲಿಲವಂ? ಬೇಡುವಂತೆ ಬಡವನಾದೆ-...

ಗೋಪುರ ಗೃಹ

ಏನು ಮಾಡಲಿ ಕಟ್ಟಿಕೊಂಡು ಈ ಅಸಂಬದ್ಧವನ್ನ - ಓ ನನ್ನ ಹೃದಯವೇ, ಅಶಾಂತ ಹೃದಯವೆ ಹೇಳು - ನಾಯಿಬಾಲಕ್ಕೆ ಕಟ್ಟಿದ ಹಾಗೆ ಪಟ್ಟಾಗಿ ನನಗೆ ಬಿಗಿದಿರುವ ಈ ವಿಕಟ ಚಿತ್ರವನ್ನ ಜರ್ಝರಿತವಾದ ಈ ವಾರ್‍ಧಕ್ಯವನ್ನ?...

ನಂ ಮುನಿಯಂದು ಜರ್‍ಬು

ಯಿಂದೆ ಲೋಟ್ದಾಗ್ ನೀರ್ ಇಟ್ಕೊಂಡಿ ‘ಚೂ ಮಂತ್ರಾ’ಂದ ಏಸು! ಇಟ್ ನೀರೆಲ್ಲ ಯೆಂಡ್ ಆಗೋಯ್ತು! ಅದು ಕೆಲಸ! ಬೇಸು! ೧ ಮಾತ್ಗೇಳ್ತೀನಿ- ಯಿಂದಿನ್ ಕಾಲ್ದಾಗ್ ಎಂತೆಂತೋರ್ ಇದ್ರಂತ! ಈಗ್ಲು ಔರೆ-ದೊಡ್ ಪಡಕಾನೆ ಇಟ್ಟಾಕ್ಸ್ನೇನೆ ಬಂತ!...

ಸತ್ಯಸಂಕಲ್ಪ

ಜನ್ಮ ಜನ್ಮಾಂತರದ ಸತ್ಯ ಸಂಕಲ್ಪವೇ, ಫಲಹೊಂದು ಕಾಲ ಬಂದಾಗ. ಒಗರಿಳೆದು ಹುಳಿ ಹೋಗಿ, ಸವಿ ಹವಣುಗೋಳುತಿರೆ, ಬಣ್ಣ ಹೊಂಬಣ್ಣ- ಕೇರುತಿರೆ, ಬಳುಕಿ ಗಾಳಿಗೆ, ಬೆಂದು ಬಿಸಿಲಿನಲಿ, ನಾನು ಕಾಯುವೆ; ಹಸಿವ ಎಸರೇರಿ ಕುದಿಬಂದು ಉಕ್ಕಿ...

ಏನೂ ಮಾಡದೆ

ಏನೂ ಮಾಡದೆ ಏನೂ ತಡೆಯದೆ ನಾ ನೋಡುತ ಇದ್ದೇನೆ ಹೋದವರಾರೂ ಬಂದೇ ಇಲ್ಲ ಬಂದವರಿಗೊಂದೂ ಗೊತ್ತೇ ಇಲ್ಲ ನಾ ನೋಡುತ ಇದ್ದೇನೆ ಏನೂ ಮಾಡದೆ ಇದ್ದೇನೆ ವಾಹನ ಹೊರಟಿವೆ ಎಲ್ಲಿಗೊ ಸ್ವಾಮಿ ಹಾರುವ ಹಕ್ಕಿ...

ಕವಚ

ಜೋತು ಬಿದ್ದಿದೆ ಮೇಲೆ ಬಣ್ಣ ಬಣ್ಣದ ಕವಚ ಸತ್ತ ಮೌಲ್ಯಗಳ ಹೆಣಭಾರ. ಹೊತ್ತು ಸಾಗಿರುವೆ ಬಹುದೂರ ಹೀಗೇಯೇ ಮರುಮಾತಿಲ್ಲದೆ. ಸನಾತನ ಬೇರುಗಳು ಬಿಳಲುಗಳು ಆಳಕ್ಕಿಳಿದು ಕತ್ತಲೆ ತೊಟ್ಟಿಕ್ಕಿತ್ತು ಹೊತ್ತಿರುವ ಕವಚಕ್ಕೆ ಮೆತ್ತಿದೆ ಬೆವರಿನ ಜಿಡ್ಡು...

ಕನ್ನಡಿಗರ ತಾಯಿ

ತಾಯೆ ಬಾರ, ಮೊಗವ ತೋರ, ಕನ್ನಡಿಗರ ಮಾತೆಯೆ! ಹರಸು ತಾಯೆ, ಸುತರ ಕಾಯೆ, ನಮ್ಮ ಜನ್ಮದಾತೆಯೆ! ನಮ್ಮ ತಪ್ಪನೆನಿತೊ ತಾಳ್ವೆ, ಅಕ್ಕರೆಯಿಂದೆಮ್ಮನಾಳ್ವೆ; ನೀನೆ ಕಣಾ ನಮ್ಮ ಬಾಳ್ವೆ, ನಿನ್ನ ಮರೆಯಲನೆಮ್ಮೆವು- ತನು ಕನ್ನಡ, ಮನ...