ಅಭ್ಯುದಯ

ಇಳೆಯನೆಲ್ಲ ತುಂಬಿನಿಂತು ನಾಟ್ಯವಾಡುತಿರುವ ರೂಹೆ ! ಅಲ್ಲಿ-ಇಲ್ಲಿ ಎಲ್ಲೆಡೆಯಲಿ ಇದ್ದ ನಿನ್ನ ನಿಲುಕದೂಹೆ ! ಮನವ ಸೆಳೆದುಕೊಳ್ಳುವ ಶಕ್ತಿ ! ನಿನ್ನ ಮಿರುಗಮಿಂಚಿದೇನು ? ಬಣ್ಣ ಬಣ್ಣಗಳನ್ನು ತೋರ್‍ವ ನಿನ್ನ ಸಹಜ ಸೃಷ್ಟಿಯೇನು ?...

ಕ್ರಾಂತಿದರ್‍ಶಿ

ಉಧೋ! ಉಧೋ! ಏಳಿರೆನ್ನು! ಇದೋ! ಇದೋ! ಎದ್ದೆವೆನ್ನು! ಎಲ್ಲು ಇಲ್ಲ ದೇವರು. ನಾವೆ ನಮ್ಮ ದೇವರು. ತಾಳಬೇಕು,-ಬಾಳಲು. ಸಹಿಸಬೇಕು,-ಆಳಲು. ಬಿನ್ನವಿಸಲು,- ಕೊಡುವದಿಲ್ಲ ! ಗರ್‍ಜಿಸೆ-ಕೊಡದಿರುವದಿಲ್ಲ ! ಹಣಕಾಸೆಳೆ ಬೈಲಿಗೆ. ಕೈಯ್ಯ ಹಚ್ಚು ಧೈಲಿಗೆ. ಹಣದ...

ಚಂದ್ರಗ್ರಹಣ

ಮೇಳ ಒಂದು ಗ್ರಹಕೆ ಬಂತು ಗ್ರಹಣ, ಇಂದೆ ಚಂದ್ರಗ್ರಹಣ ಇಂದೆ ಚಂದ್ರಗ್ರಹಣೋ ! ಇಂದೆ ಚಂದ್ರಗ್ರಹಣ. ಮೇಳದ ಹಿರಿಯ ಕೆನೆವೆಳಕಿನ ಸೊನೆಯ ಚಂದ್ರ- ನಾದನು ಕಪ್ಪಿಡಿದ ಲಾಂದ್ರ ಪವನವಾಯ್ತು ತಾಮ್ರದ ವೈ ಕತ್ತಲೆಯೇ ಎತ್ತಿದ...

ಬೆಡಗಿ

ಸುಡು ನಿನ್ನ ಸಿಂಗರವ, ನಿನ್ನ ಸೊಗವ. ಬಿಡು ನಿನ್ನ ಬೆಡಗ ಹಾ- ಳಾಗಿಸಿತು ಜಗವ! ಆಳಾಗಿಸಿತು ನೂರು ದೇಹಗಳನು, ತೊಳಲಾಡಿಸಿತ್ತೆನಿತೊ ಗೇಹಗಳನು! ನಿನ್ನ ಮಖಮಲು ಮುಖವ ಬಣ್ಣಿಸಿದ ವೆಂಪು,- ಕಳೆಯಲದು ನಿಲ್ಲುವವು ನೂರು ಸಂಪು!...

ಕೃಪಣರ ಬಾಳು

ಮುತ್ತುಗಳ ಕಾವಣದಿ ಮುತ್ತಜ್ಜ ಕುಳಿತಿದ್ದ ಬೇಡಿದೆನು ಮುತ್ತನೊಂದು. ‘ಹೋದ ಮುತ್ತುಗಳೆಂತು ತಿರುಗಿ ಬರುವವು, ರಸಿಕ! ಅವು ನನ್ನ ಪ್ರಾಣಬಿಂದು!’ ಹೂವರಳ್ದ ತೋಟದಲ್ಲಿ ಹೂವರಸ ಕುಳಿತಿದ್ದ. ಹಾತೊರೆದೆ ಹೂವಿಗೆಂದು, ‘ಶೋಭೆಯಳಿಯದೆ ಹೇಳು, ಹೂವೆದೆಯ ಹಾದಿಗನೆ! ಕೊಡಲಾರೆ...

ಬೇಡತಿ

ನರಿಯ ಮದುವೆಯ ಮಂಗ- ಲೋತ್ಸವದ ಸಮಯವೆನೆ ಹೂಬಿಸಿಲುಮಳೆಯಾಗ ಸುರಿಯುತಿತ್ತು. ‘ಇರುವೆ ನಿಬ್ಬೆರಗಾಗಿ’ ಎಂದು ಮುಗಿಲೆಂದಂತೆ ನೀರದದ ಕಪ್ಪುಗೆರೆ ಸರಿಯುತಿತ್ತು. ಮೊರಡಿಯೊಂದರ ಬಳಿಗೆ ಸಾಗಿಹಳು ಬೇಡತಿಯು. ಅವಳ ಬಣ್ಣವು ಸುತ್ತಿನೆರೆಯ ಕಪ್ಪು ಬಡ ಜಾಲಿ ಮರದಂತೆ...

ಗುಬ್ಬಿಮರಿ

ಮಬ್ಬುಗವಿದು ಕತ್ತಲಾಗೆ ಎತ್ತ ಏನು ಕಾಣದಾಗೆ ಮಳೆಯ ಹನಿಯು ಮೊತ್ತವಾಗಿ ಬಂದು ಮೊಗವ ತಿವಿಯುತಿರಲು ಸತ್ತು ಬಿದ್ದ ಬಂಟನಂತೆ ಇಳೆಯು ಸುಮ್ಮನೊರಗುತಿರಲು ಕತ್ತನೆತ್ತಿ ಅತ್ತ ಇತ್ತ ನೋಡುತಿಹುದು ಗುಬ್ಬಿ ಎತ್ತ ತನ್ನ ಪಯಣ ಬೆಳೆಸಿತೋ!...

ಗಿಳಿವಿಂಡು

ಒಂದರಳೆ ಮರದಲ್ಲಿ ಸಂಜೆಯಾಗಿರುವಲ್ಲಿ ಒಂದೊಂದೆ ಮರಳುವವು ಸಾಲುಗೊಂಡು : ಒಂದೊಂದೆ ಮರಳುವವು ಗಿಳಿಯೆಲ್ಲ ತೆರಳುವವು ಗೂಡುಗೊಂಡಿಹ ಮರವನಿದಿರುಗೊಂಡು. ಸಂಧ್ಯೆಯಿಂದೀಚೆಗೆನೆ ಸ್ಮರನೆಚ್ಚ ಶರಗಳೆನೆ ತಾಗುತಿದೆ ಗಿಳಿಹಿಂಡು ಬಂದು ಮರಕೆ. ಕೊಂಬೆಮೇಲೆಳೆಮರಿಯು ನಂಬಿ ತಾಯಿಯನರಿಯು- ತಿರೆ ಮಿಡಿಯಿತೆನ್ನೆದೆಯು...

ಬಣ್ಣದ ಚಿಟ್ಟೆ

`Who breaks a butterfly upon a wheel?' -Pope ಚಳಿಗೆ ಕಾತರಗೊಂಡು ರಾಜವೀಧಿಯಲಲೆದು ನೆಲಕಂಟಗೊಂಡ ಬಣ್ಣದ ಚಿಟ್ಟೆಯ ನಸುಕಿನಲಿ ನೋಡಿದೆನು,- ಬಂಡಿಗಾಲಿಯದುರುಳಿ ಕೊಲಲದನು ಮಾಡಿ ಮೂರಾಬಟ್ಟೆಯ. ಬಣ್ಣ ಬಣ್ಣದ ಪಕ್ಕಗಳನು ಮಣ್ಣಾಗಿಸಿದ ನರನವನ...

ನಮಸ್ತೇ!

ಹೋಗಿ ಬರುವೆನು ನನ್ನ ಎಳೆಗನಸುಗಳೆ! ನಿಮ್ಮ ತಳಿರ್‍ಗೆಂಪು ಹೂಗಂಪು ತಂಗಾಳಿ ಮುಗಿದು ಸಮರವನು ಸಾರಿಹುದು ಅಮರ ಶಕ್ತಿಯದೊಂದು, ಎದೆಮನವ ತಣಿಸಿರುವ ದಿನಗಳನೆ ಹುಗಿದು! ನಿಂತಿರುವದೆದುರಾಳಿಯಾಗಿ ನನಸಿನ ಕಹಿಯು, ಪ್ರಾಣಗಳ ಗಂಟೆಯನು ಗಣಗಣನೆ ಬಡಿದು; ಪಾಪಸಂಚಯವೆಲ್ಲವಾಗಿ...
cheap jordans|wholesale air max|wholesale jordans|wholesale jewelry|wholesale jerseys