ಪ್ರಕೃತಿ ಎನ್ನನ್ಯಾಕೆ ಬರೆಸಿಹುದು ?

ಪ್ರಕೃತಿ ಎನ್ನನ್ಯಾಕೆ ಬರೆಸಿಹುದು ? ಯಾಕಾನು ಬರೆಯುವೆನೆಂದು ಕೇಳಿದೊಡೆ ಆಕಾನು ಯಾಕಷ್ಟು ತರುಲತೆಯ ಬೆಳೆಸಿಹುದೆಂ ದುಕೇಳಲು ಬೇಕು. ತರತರದ ಜೀ ವಕಾಮಕಪ್ಪಂತೇನೆಲ್ಲವನು ಬೆಳೆಸಿರ್ಪ ಪ್ರಕೃತಿಯೆ ಮತಿಯಾಗಿ ಬರೆಸಿಹುದೆನ್ನ - ವಿಜ್ಞಾನೇಶ್ವರ *****

ಆನು ಪೇಳಿದೆಲ್ಲವನು ಮಾಡದೊಡೇನಂತೆ ?

ಆನು ಪೇಳಿದೆಲ್ಲವನು ಮಾಡದೊಡೇನಂತೆ ? ಆನಿಲ್ಲ ಪೇಳಿದೆಲ್ಲವನು ಆನು ಮಾಡಿ ದೆನೆಂದಿಲ್ಲ ಆನೆಷ್ಟು ಮಾಡಿಹನೆಂದು ಆನು ಪೇಳುವುದಲ್ಲ, ಬುದ್ಧಿಮಾತನು ಎನಗಾನೇ ಪೇಳಿ ಆದನಾನೇ ಕೇಳಿ ಆನೆಷ್ಟು ಮಾಡಿದರಷ್ಟು ಲಾಭವೆನಗೆ - ವಿಜ್ಞಾನೇಶ್ವರಾ *****

ಪರಿಪರಿ ನೆನೆದೊಡಾ ಐದೆನ್ನ ಕಾಯದೇ ?

ಪರಿಪರಿ ನೆನೆದೊಡಾ ಐದೆನ್ನ ಕಾಯದೇ ? ಪ್ರಕೃತಿಯೊಳೈದಕ್ಕೆ ಉನ್ನತದ ಬೆಲೆಯುಂಟು ಪಂಚಭೂತಂಗಳೆಲ್ಲ ಜೀವದೊಳುಂಟು ಪ್ರಾಣಂಗಳೆಮ್ಮೊಳೈದು ಇಂದ್ರಿಯಂಗಳೈದು ಪಿಡಿವ ನಡೆದ ಬೆರಳೈದು ಅಂತೆನ್ನ ಕವನಕು ಪಂಕ್ತಿಗಳೈದು - ಅದುವೆ ಕಾಯಲಿ ಎಂದೆನುತ - ವಿಜ್ಞಾನೇಶ್ವರಾ *****

ಪೇಳಲಾಪರಿ ಕಿರಿದಾಗಿ, ಬೇಕಲ್ಲಾ ಹಿರಿ ಪ್ರತಿಭೆ?

ಪೇಳಲಾಪರಿ ಕಿರಿದಾಗಿ, ಬೇಕಲ್ಲಾ ಹಿರಿ ಪ್ರತಿಭೆ? ಪೇಳಿಹರೆಮ್ಮ ಹಿರಿಯರವರ ಜೀವನ ದೊಳುಂಡನುಭವವ ಮೂರ್‌ನಾಕು ಸಾಲಿ ನೊಳು, ಮಂತ್ರದೊಳು, ಗಣಿತದೊಳು ಕೇಳಿದೆನಗಂತೆ ಕವನದ ಕಂತೆಯೊಳಿಡಲು ಬಾಳಿನನುಭವ ಸಾಲದೆನ್ನ ಸಾಲುಗಳೈದಾಗಿಹವು -ವಿಜ್ಞಾನೇಶ್ವರಾ *****

ಕವನವೆನ್ನದಿದ್ಯಾಕೆ ಪ್ರಶ್ನೋತ್ತರದಂತಿಹುದು?

ಕವನವೆನ್ನದಿದ್ಯಾಕೆ ಪ್ರಶ್ನೋತ್ತರದಂತಿಹುದು? ಜೀವನವೆಂದೊಡೇನದರ ಅಂದಾನಂದವದೇನು? ನಾವೇನು ಮಾಡಿದೊಡೇನು? ಮಾಡದೊಡೇನು? ತವಕದೊಳೇಳ್ವ ಪ್ರಶ್ನಾವಲಿಯ ಮೇಲೆಮ್ಮ ಜೀವನವೆ ನಿಂದಿಹುದದರಿಂದ ನಿಲಿಸಿಹೆನೆನ್ನ ಕವನಗಳ ಪರಿಪರಿಯ ಪ್ರಶ್ನೆಗಳ ಮೇಲೆ - ವಿಜ್ಞಾನೇಶ್ವರಾ *****
cheap jordans|wholesale air max|wholesale jordans|wholesale jewelry|wholesale jerseys