ದಿನಾಲೂ ನೋಡುತ್ತಲೇ ಇದೆ
ಆ ಮಗು
ಪಾಪ ನೆಲದೆದೆಯಿಂದ ಆಕಾಶದಂಗಳಕೆ
ನೆಗೆಯುವ ವಿಮಾನ
ಹಾರಾಡಿ ದೂರ ದೂರ
ಸರಿಯುವದ-
ನೂರಾರು ಕನಸುಗಳು ಚಿತ್ತದೊಳಗೆ
ಹಾರಲು ಹಾತೊರಿಕೆ.
ಅನಕ್ಷರ, ಬಡತನ ಅಸಹಾಯಕತೆ
ಕಣ್ತುಂಬ ನೀರು ಕೆನ್ನೆ ಕಪ್ಪು
ಬಣ್ಣ ಬಣ್ಣದ ಗಾಳಿಪಟ ಕಟ್ಟಿ
ಕನಸ ತುಂಬಿ
ಗೆಳೆಯರೊಡನೆ ಕೇಕೆ ಹಾಕಿ
ಹಾರಿಬಿಟ್ಟ.
*****

ಲತಾ ಗುತ್ತಿ
Latest posts by ಲತಾ ಗುತ್ತಿ (see all)