ನಿಜವೇ ಇದು ನಿಜವೇ

ನಿಜವೇ ಇದು ನಿಜವೇ ನಿಜವಲ್ಲಾ
ಅಜ ಹರಿ ಸುರರಿಗಲ್ಲದ ಮಾತು ||ಪ||

ನರಜನ್ಮ ಸ್ಥಿರವೆಂದು ಧರೆಗೆ ಉದಿಸಿಬಂದು
ಸಿರಿಯು ಸಂಪತ್ತು ಸೌಭಾಗ್ಯ ಲೋಲ್ಯಾಡುವದು ||೧||

ಅಂಗಲಿಂಗದ ಸಮರಸನರಿಯದೆ
ಮಂಗನ ತೆರದಲ್ಲಿ ಪೂಜಿಸುವದು ||೨||

ವಸುಧಿಯೊಳು ಶಿಶುನಾಳಧೀಶನಲ್ಲದೆ ಬ್ಯಾರೆ
ತುಸು ಜ್ಞಾನ ಅರಿಯದೆ ಶಾಸ್ತ್ರಪುರಾಣವು ||೩||

*****

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಒಂಟಿ ಬ್ಯಾರಿಯೂ ಅವಭೃತ ಉತ್ಸವವೂ
Next post ನೀರು ಮಾಯಾ ವಸ್ತುವಲ್ಲ