ನಗಬಾರದಮ್ಮ ಲಗುಬಿಗಿ ಸುಮ್ಮನೆ ಬೀಸಮ್ಮ

ನಗಬಾರದಮ್ಮ
ಲಗುಬಿಗಿ ಸುಮ್ಮನೆ ಬೀಸಮ್ಮ ||ಪ||

ಲಗುಬಿಗಿ ಸುಮ್ಮನೆ ಬೀಸಿ
ತಗಿದಾಳೋ ಹಿಟ್ಟಿನ ರಾಶಿ
ಬಿಗಿದ ಪುಟ್ಟಿಯೊಳು ಸೋಸಮ್ಮಾ ||೧||

ಚಕ್ರದಿ ಕರೆಕಲ್ಲು
ಶುಕ್ರದಿ ಮುಕ್ಕುವ ಕಲ್ಲು
ವಕ್ಕರಿಸಿ ಮುಕ್ಕನ್ಹಾಕಮ್ಮಾ ||೨||

ಅಚ್ಚ ನಗಬಾರದು
ಬಾಳ ನಗಬಾರದು
ನಕ್ಕೋತ ಸುಮ್ಮನೆ ಬೀಸಮ್ಮಾ ||೩||

ಅಸಮ ಗೋದಿಯ ಕಾಳು
ಹಸನಾಗಿ ಬೀಸಮ್ಮಾ
ದೇಶಕೆ ಶಿಶುನಾಳಧೀಶನ ಭಜಿಸಮ್ಮಾ ||೪||
*****

 

ಕೀಲಿಕರಣ : ಎಮ್.ಎನ್.ಎಸ್.ರಾವ್

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹರಕೆಯ ಕುರಿ
Next post ನೂಪುರ

ಸಣ್ಣ ಕತೆ