ಅಲ್ಲಿ – ಇಲ್ಲಿ ಹುಡುಕುವೇತೆಕೆ,
ಪ್ರೀತಿಯ ಬಳ್ಳಿಯ ಚಿಗುರಿಗೆ,
ನಿನ್ನ ಮನದಲೆ ಬೇರು ಬಿಟ್ಟಿಹ
ತರು-ಲತೆ ಸುಮದ ಮಾಟದ ಚೆಲ್ವಿಗೆ ||

ಅವರ – ಇವರಲಿ ಅರಸುವೇತಕೆ
ನಿನ್ನ – ನೀನು ತಿಳಿಯದೆ,
ಅನ್ಯ ಪ್ರೀತಿಯ ಕಣ್ಣಕೂಟಕೆ
ಮುನ್ನ – ಬಾಳನು ಕಾಣದೆ,

ಪ್ರೀತಿಯೆಂಬುದು ದೇಹಕಲ್ಲವೊ
ಗೇಹದಾಚೆಯ ಪಲ್ಲವಿ,
ತುಂಬು ಜೀವನವೆಲ್ಲ ಪಾವನ
ಶೃತಿಲಯದ ಗೀತಿಕೆ ಜಾಹ್ನವಿ,

ಹೃದಯದಿಂಪು ತಂಪ ಮೋದ ಭಾವವೆ
ದೇವ ಪ್ರೀತಿಯ ಸಾಗರ,
ತಾಯ ತೆರಹದಾ ನೇಹ ಸಗ್ಗವೆ
ಪ್ರೀತಿ ನಿಯತಿಗೆ ನೂಪುರ,

ನಿನ್ನ ನೀನು ಮೊದಲು ಪ್ರೀತಿಸು
ದ್ವೇಷ ದಳ್ಳುರಿ ನಂದಿಸು,
ಚಣದ ಕಾಮನೆ ಹುಚ್ಚನಳಿಸು
ಜಗಕೆ ನಿನ್ನ ಇರವನೆ ತೋರಿಸು.

*****

ಗಿರಿಜಾಪತಿ ಎಂ ಎನ್
Latest posts by ಗಿರಿಜಾಪತಿ ಎಂ ಎನ್ (see all)