ಬಟ್ಟೆಗಳನು ತೊಟ್ಟು ತೊಟ್ಟು ಮೂರ ಬಟ್ಟೆಯಾಯ್ತು
ನಿಟ್ಟುದಪ್ಪಿ ಕಳಚಿ ಉಟ್ಟು ಬಟ್ಟ ಬರಿಯದಾಯ್ತು

ದೂರದಿಂದ ಬೇರೆ ಬಟ್ಟೆ ಬಣ್ಣ ಬಣ್ಣವಾಗೆ
ಅದನು ತೊಟ್ಟೆ ಇದನು ಉಟ್ಟೆ ಹೊಂದಲಿಲ್ಲ ಮೈಗೆ

ಅಡವಿಯೊಳಗೆ ನೂರು ಬಟ್ಟೆ ತೆರೆದುಕೊಂಡು ಇರಲು
ಸಡಗರದಲಿ ಬಾಚಿಕೊಂಡೆ ಕೈಯಿ ಕಾಲಿನಲ್ಲು

ಒಂದು ಪುಟ್ಟ ಒಂದು ಉದ್ದ ಒಂದು ಉಸಿರು ಕಟ್ಟೆ
ಒಂದು ಲೊಳಗ ಒಂದು ಕೊಳಗ ಮೊಳಕಾಲನು ಮುಟ್ಟೆ

ಅದೂ ಇರಲಿ ಇದೂ ಇರಲಿ ಎಂದು ಹಲವ ತೊಡಲು
ಕುಡಿಕೆಯ್ತಾ ಮೈಯು ಮನವು ಶಾದರಿಯನು ಪಡಲು

ಬಟ್ಟೆ ಬಟ್ಟೆ ಸೇರಿ ಸಿಕ್ಕು ಸಿಕ್ಕು ಮುಕ್ಕಿದಾಗ
ಬಟ್ಟೆ ದೋರದಂತೆ ಬಿದ್ದ ನನ್ನ ಹೊಕ್ಕಿದಾಗ

ಏನು ಬೇಡ ಹಾಗೆ ಇರುವೆ ಬಟ್ಟೆ ಚಿಂತೆ ಬೇಡ
ಮಾನವನ್ನು ಮುಚ್ಚಲಿಕ್ಕೆ ಬಟ್ಟೆ ಏಕೆ ಬೇಡ
*****

Latest posts by ವೃಷಭೇಂದ್ರಾಚಾರ್‍ ಅರ್ಕಸಾಲಿ (see all)