ಲೋಕದ ಡೊಂಕು

“ಲೋಕದ ಡೊಂಕು” ಸರಿಪಡಿಸದಿದ್ದರೆ ಅಲ್ಲಿ ಬಾಳುವುದೇ ಬಿಗಿಯಾಗುತ್ತದೆ. ಹತ್ತೂ ಕೆಲಸಗಳನ್ನು ಒತ್ತೆಯಿಟ್ಟು ಲೋಕದ ಡೊಂಕು ತಿದ್ದಬೇಕಾದುದು ಅತ್ಯವಶ್ಯ. ಅದ್ದರಿಂದ ಲೋಕದ ಡೊಂಕು ತಿದ್ದುವ ದಾರಿಯನ್ನು ಹೇಳಿಕೊಡಿರಿ” ಎಂದು ಸುಧಾರಣಾ ಪ್ರವೃತ್ತಿಯುಳ್ಳ ಜೀವವೊಂದು ಕಕ್ಕುಲತೆಯಿಂದ ಬಿನ್ನವಿಸಿಕೊಂಡಿತು.

ಸಂಗಮಶರಣನು ಜಗಜ್ಜನನಿಯನ್ನು ಮನದಲೇ ಎರಗಿ, ಕೇಳಿದ ಮಾತಿಗೆ ಸಮಾಧಾನ ಹೇಳುವುದಕ್ಕೆ ಆರಂಭಿಸುತ್ತಾನೆ. ಹೇಗೆಂದರೆ–
“ಅಯ್ಯಾ, ಲೋಕವೆಂಬುದು ವ್ಯಕ್ತಿಯ ಪಡಿನೆಳಲು. ಪ್ರತಿಬಿಂಬವೂ ಅಹುದು; ಕವನೆಳಲೂ ಅಹುದು. ಡೊಂಕುಕಾಲಿ- ನವನ ನೆರಳು ಸೊಟ್ಟಾಗಿದ್ದರೆ ಆದು ನೆರಳಿನ ತಪ್ಪೇ? ಮೊಂಡ ಮೂಗಿನವನ ವ್ರತಿಬಿಂಬವು ಆಣಕಿಸಿದಂತೆ ಕಾಣಿಸಿಕೊಂಡರೆ ಪ್ರತಿಬಿಂಬ ಮಾಡಿದ ತಪ್ಪೇನಿದೆ?

ಲೋಕದಲ್ಲಿ ಕಂಡುಬರುವ ಲೋಪ-ದೋಷಗಳು ತನ್ನಲ್ಲೇನಾದರೂ ಇದ್ದರೆ, ಇದ್ದಷ್ಟೇ ಕಳಕೊಂಡರೂ ಲೋಕವು ಲೋಪ-ದೋಷಗಳಿಲ್ಲದ ಪರಿಪೂರ್ಣನಾಗಿ ಕಾಣಿಸಲು ತೊಡಗುತ್ತದೆ. ಆದ್ದರಿಂದ ಲೋಕದ ಮುಖಕ್ಕೆ ಹತ್ತಿದ ಮಸಿಯಿಲ್ಲದಾಗಬೇಕಾದರೆ ಮೊದಲಿಗೆ ತನ್ನ ಮುಖ ತೊಳಕೊಳ್ಳಬೇಕಾಗುವದು.

ಲೋಕದ ಡೊಂಕು ನೀವೇಕೆ ತಿದ್ದುವಿರಿ?
ನಿಮ್ಮ ನಿಮ್ಮ ತನುವ ಸಂತಯಿಸಿಕೊಳ್ಳಿ.
ನಿಮ್ಮ ನಿಮ್ಮ ಮನವ ಸಂತಯಿಸಿಕೊಳ್ಳಿ.
ನೆರೆಮನೆಯ ದುಃಖಕ್ಕೆ ಅಳುವವರ ಮೆಚ್ಚ
ಕೂಡಲಸಂಗಮದೇವ.

ನೆರೆಮನೆಯವರ ದುಃಖನಿವಾರಣೆಯು, ಅವರೊಂದಿಗೆ ತಾನೂ ಅತ್ತರಾಗುವದೇ? ಅಳುವವರೊಡನೆ ಅತ್ತರೆ ದುಃಖವು ದೂರವಾಗದೆ ಅಳುವೇ ದೊಡ್ಡದಾಗಬಲ್ಲದು. ಮುಳು-ಮುಳು ಅಳುವವನು ಭೋರಾಡಿ ಅಳುವವನ ದುಃಖವನ್ನು ಕಡಿಮೆ ಮಾಡಬಲ್ಲನೇ? ಇಲ್ಲವೆ ಹೊರಳಾಡಿ ಅಳುವವನು, ಮೂಕ ಶೋಕದವನನ್ನು ಸಂತಯಿಸಬಲ್ಲನೇ? ತನ್ನ ಸೊಂಡೆಯನ್ನು ಒರಸಿ ಕೊಳ್ಳಲಿಕ್ಕೆ ಕೈಸಾಲದವನು ಹೆರರ ಮಂಡೆಯನ್ನು ತಡವಲಿಕ್ಕೆ ಬಲ್ಲನೇ?

ತನ್ನ ವಿಚಾರಿಸಲೊಲ್ಲದು, ಇದಿರ ವಿಚಾರಿಸ
ಹೋಹುದೀ ಮನವು.
ಏನು ಮಾಡುವೆನೀ ಮನವನು?
ಎಂತು ಮಾಡುವೆನೀ ಮನವನು?
ಕೂಡಲಸಂಗನ ಶರಣರ ನಚ್ಚಿದ ನುಚ್ಚಿದ ಮನವನು?

ತನ್ನ ಡೊಂಕು ತನ್ನ ಅಳವಿನಲ್ಲಿರುತ್ತದೆ; ತನ್ನ ಕೈಗೆ ನಿಲುಕುವಂತಿರುತ್ತದೆ. ಅದನ್ನು ತಿದ್ದುವುದು ಕೈಗೆ ನೀಗದ ಕೆಲಸವೇನಲ್ಲ. ಬಹಳಷ್ಟು ದಣಿಸುವ ಕೆಲಸವೂ ಅಲ್ಲ. ತನ್ನ ಡೊಂಕು ತನಗೆ ಕಾಣಿಸಿದಷ್ಟು ಅನ್ಯರಿಗೆ ಕಾಣಿಸದು. ಅದರಂತೆ ಅನ್ಯರದು ತನಗೆ ಕಾಣಿಸದು.  ಪುಟ್ಟ ಕೈಗೆ  ಪುಟ್ಟ ಕ್ಷೇತ್ರ. ತನ್ನನ್ನೇ ತಾನು ನಿಟ್ಟಿಸಿದರೆ ಲೋಕದ ಡೊಂಕಿಗಿಂತ ತನ್ನ ಡೊಂಕೇ ಅಸಾಧ್ಯವೆಂದು ಕಂಡುಬರಲಾರದೆ ಇರಲಾರದು. ಲೋಕವೆಲ್ಲ ಕೂಡಿ ಮಾಡಿದ ತಪ್ಪುಗಳು ಸಾವಿರವಾದರೆ, ತಾನು ಮಾಡಿದ ತಪ್ಪುಗಳು ಅನಂತ ಕೋಟಿಯೆಂದು ಕಂಡುಬರುತ್ತದೆ. ಲೋಕದ ಪ್ರಭುವು ಲೆಕ್ಕವಿಲ್ಲದಷ್ಟು ಸಹಿಸಿ ದ್ದಾನೆ; ಅಳತೆಯಿಲ್ಲದಷ್ಟು ಕ್ಷಮಿಸಿದ್ದಾನೆ. ನಾವು ನಿರಪರಾಧಿಗಳೆಂದು ತೋರುತ್ತಿರುವುದು ನಮ್ಮ ಜಾಗರೂಕತೆಯ ಪುಣ್ಯದಿಂದಲ್ಲ. ನಮ್ಮ ತಪ್ಪು ಕಾಣಿಸಿಕೊಳ್ಳದಿರುವುದು ನಮ್ಮ ಸಜ್ಜನಿಕೆಯಿಂದಲ್ಲ, ಆ ವ್ರಭುವಿನ ಅನಂತ ಕ್ಷಮೆಯ ಪುಣ್ಯದಿಂದ. ತುಡುಗುಣಿ ದನವೆಂದು ಬಡಿಯುವ ಮುನ್ನ, “ಇನ್ನು ತಪ್ಪಿದೆನಾದರೆ ನಿಮ್ಮ ಪಾದವೇ ದಿಬ್ಯ”  ಎಂದು ನಿಶ್ವಯಿಸಿಕೊಳ್ಳಬೇಕು. ಆಗ ಅದು ಪರಮಾತ್ಮನ ಕ್ಷಮೆಗೆ ಸಾರ್ಥಕತೆ ತರಬಲ್ಲದು. ವ್ಯಕ್ತಿಯಲ್ಲಿ ತಿದ್ದಿಕೊಳ್ಳಬೇಕಾದ ಲೋಪದೋಷಗಳೇನು ಕಡಿಮೆಯೆಂದು ತಿಳಿಯವಿರಾ?

ಗುಣದೋಷ ಸಂಪಾದನೆಯ ಮಾಡುವನ್ನಕ್ಕರ
ಕಾಯದ ಒಡಲು, ಕ್ರೋಧದ ಗೊತ್ತು,
ಲೋಭದ ಇಕ್ಕೆ, ಮೋಹದ ಮತ್ಸರದ ಹೊದಿಕೆ,
ಆ ಭವವರಿತಲ್ಲದೆ ಚೆಸ್ವಮಲ್ಲಿಕಾರ್ಜುನನ
ಆರಿವುದಕ್ಕೆ ಇಂಬಿಲ್ಲ ಕಾಣಿರಣ್ಣಾ.

ನಮ್ಮಲ್ಲಿರುವ ಲೋಪದೋಷಗಳು ಬೆಟ್ಟದಷ್ಟು ಎತ್ತರವಾಗಿ ಒಟ್ಟಿರುವುದನ್ನು ಕಾಣಬಲ್ಲೆವು. ಅವುಗಳನ್ನು ನಿವಾರಿಸುವ ಉಪಾಯಮಾಡದೆ ಗತ್ಯಂತರವೇ ಇಲ್ಲ. ನೆರೆಯವರ ದುಃಖಕ್ಕೆ ಅಳುವವನೇ, ಇಲ್ಲಿ ಕೇಳು-ನಿನ್ನ ಚಿಂತೆಯನ್ನು ಯಾರಿಗೆ ಮಾರುಗೊಡುವಿ? ಯಾರಲ್ಲಿ ಒತ್ತೆಯಿಡುವಿ?

ಪರಚಿಂತೆ ನಮಗೇಕಯ್ಯ?
ನಮ್ಮ ಚಿಂತೆ ನಮಗೆ ಸಾಲದೇ?
ಕೂಡಲಸಂಗಯ್ಯ ಒಲಿದಾನೋ-ಒಲ್ಲನೋ
ಎಂಬ ಚಿಂತೆ ಹಾಸಲುಂಟು ಹೊದೆಯಲುಂಟು.

ಅಷ್ಟೇ ಅಲ್ಲ, ಬೇಕಾದರೆ ತಲೆದಿಂಬಿಗೂ ಬರುವಷ್ಟಿದೆ ಚಿಂತೆ. ಕೂಡಲಸಂಗನನ್ನು ಒಲಿಸುವ ಚಿಂತೆ ಇರಲಿಕ್ಕಿಲ್ಲ; ಚೆನ್ನಮಲ್ಲಿಕಾರ್ಜುನದೇವನನ್ನು ಅರಿಯುವ ಚಿಂತೆ ಇರಲಿಕ್ಕಿಲ್ಲ. ಆದರೆ ನಮ್ಮ ಮುಖದ ಮಸಿತೊಳೆಯುವ
ಚಿಂತೆಯಾದರೂ ಇರಬಾರದೇ? ಏಸು ಕಾಲ ನೀರೊಳಗಿಟ್ಟರೂ ಕರಗದ ಮಸಿ ಅದು. ಕಾಯಕ್ಕಂಟಿದ ಕಾಳಿಕೆ; ಮನಕ್ಕೆ ಬಳಿದ ಮಸಿ; ಪ್ರಾಣಕ್ಕೆ ತಗುಲಿದ ಕಪ್ಪು. ಅದನ್ನು ಕಳಕೊಂಡರೆ’ ಆ ಭವ ಅರತಹಾಗೆ. ಆ ಮೇಲೆ ಉಳಿದ ಕೆಲಸ; ಲೋಕಸುಧಾರಣೆ. ಅದೇ ಕೂಡಲಸಂಗನ ಮಹಾ ಒಲುಮೆ. ಚೆನ್ನಮಲ್ಲಿಕಾರ್ಜುನನನ್ನು. ಅರಿಯುವ ಘನ ಅರುಹು.

ನಮ್ಮ ಲೋಪದೋಷಗಳ ಮೊತ್ತವನ್ನು ಕರಗಿಸುನ ಕೆಲಸಕ್ಕೆ ನಮ್ಮ ಎರಡು ಕೈಗಳು ಸಾಕಾಗವು. ಅಲ್ಪ ಶಕ್ತಿಯು ದಣಿದು ಕುಳಿತುಕೊಳ್ಳುವದು; ಸೋತು ನೆಲಕ್ಕೊರಗುವದು. ‘೩ನಾಪೈರಾದರೂ ನೆರವಿಗೆ ಬನ್ನಿರೆಂದು ಕೂಗಿ
ಕರೆಯಬೇಕಾಗುವದು. ಎಲ್ಲರೂ ನೆರವಿಗಾಗಿ ಹಲಬುವವರೇ ಇದ್ದರೆ ನೆರವು ನೀಡಲು ಯಾರು ಬರಬೇಕು? ಆಂಥ ಸಮರ್ಥರು ಯಾರಿದ್ದಾರೆ? ದೇವದೇವನೊಬ್ಬನೇ ಎಲ್ಲರಿಗೂ ನೆರವು ನೀಡಬಲ್ಲ ಬಲ್ಲಿದನು. ಆತನ ಕಾಣದ ಕೈಗಳೇ
ಜೀವಕೋಟಿಯ ಕಣ್ಣೀರನ್ನು ತೊಡೆಯಬಲ್ಲದು. ಆ ಕೈಗಳೇ ಕಣ್ಣೀರು ತೊಡೆದು, ಸಾಂತ್ವನವೆರೆದು ಉದ್ಧರಿಸಬಲ್ಲವು. ಆಗಲೇ ಜೀವನು ಸಾರ್ಥಕತೆಯನ್ನು ಪಡೆಯುವನು. ದೇವನ ಒಡವೆಯಾಗಿ ಒಪ್ಪುವನು. ಜಗಜ್ಜನನಿಯ ತೊಡಿಗೆಯಾಗಿ ತೊಳಗುವನು. ಅಂತೆಯೇ ಆ ದಾರಿಯಲ್ಲಿ ನಡೆಯುವಾಗ-
ಕರಗಿಸಿ ಎನ್ನ ಮನವ ಕಾಳಿಕೆಯ ಕಳೆಯಯ್ಯ!
ಒರೆಗೆ ಬಣ್ಣಕ್ಕೆ ತಂದೆನ್ನ ಪುಟವಿಕ್ಕಿ ನೋಡಯ್ಯ!
ಕೆಡಿಹಕ್ಕೆ ಬಡಿಹಕ್ಕೆ ತಂದೆನ್ನ ಕಡಿಯಾಣಿಯ ಮಾಡಿ
ನಿಮ್ಮ ಶಠಣರ ಪಾದಕ್ಕೆ ತೊಡಿಗೆಯ ಮಾಡಿ
ಸಲಹು ಕೂಡಲಸಂಗನುದೇವಾ.

ಎಂದು ಪ್ರಾರ್ಥಿಸಿ ದಿವ್ಯ ಬೆಂಬಲವನ್ನು ಕೇಳಿಕೊಳ್ಳುತ್ತಿರುವದುಂಟು. ಬಾಳುವೆಯೆಂದರೆ ಏನು? ನೆಲ್ಲು ಕುಟ್ಟಿ ಅಕ್ಕಿಯನ್ನು ಕಡೆಗೆ ತೆಗೆಯುವ ಎತ್ತುಗಡೆ. ತವುಡು ತೂರಿಬಿಡುವುದು, ಕಸರು ಕೊಚ್ಚಿಬಿಡುವುದು, ಕೊನೆಗುಳಿದ
ಆಕ್ಕಿ ಚೊಕ್ಯಕಾಳು ಇರಬೇಕು. ಅದರಲ್ಲಿ ನುಚ್ಚು ಬೆರೆಯಬಾರದು. ಜೋಕೆಯಿಂದ ಎಚ್ಚಿರಿಕೆಯಿಂದ ಒನಕೆಯ ಪೆಟ್ಟು ತಿಂದು, ಅಕ್ಕಿಯನ್ನು ಮುಸುಕಿದ ಕವಚದಿಂದ ಕಾಳು ಒಡೆಯದಂತೆ ಬಿಚ್ಚಿತೆಗೆಯುವುದು.

ಐದು ಮಾನವ ಕುಟ್ಟಿ, ಒ೦ದು ಮಾನವ ಮಾಡು ಕಂಡಾ.
ಮದುವಳಿಗೆ, ಇದು ನಮ್ಮ ಬಾಳುವೆ.
ಮದುವಳಿಗೆ, ಇದು ನಮ್ಮ ವಿಸ್ತಾರ.
ಮದುವಳಿಗೆ, ಮದವಳಿದು ನಿಜವುಳಿದಡೆ
ಬಳಿಕದು ಸತ್ಯಕಣಾ ಕೂಡಲಸಂಗಮದೇವಾ.

ಐದು ಮಾನವ ಕುಟ್ಟಿ ಒಂದು ಮಾನವ ಮಾಡುವ ಧಾವತಿಗೆ ಬಿದ್ದ ಜೀವನಿಗೆ ಪರರ ಚಿಂತೆ ಮಾಡುವ ಅವಕಾಶವೆಲ್ಲಿ? ಅನುಕೂಲವೆಲ್ಲಿ? ಅವರವರ ಚಿ೦ತೆ ಅವರವರಿಗಿರಲಿ. ನಿಷ್ಠೆಯಿ೦ದ, ನಿರ೦ತರವಾದ ಹೋರಾಟ ನಡೆಯಿಸಿ ಒಂದು ಮಾನವ ಮಾಡಿಟ್ಟರೆ ಬದುಕು ಬಂಗಾರವಾಗುವದು. ಆ ಬದುಕಿಗೆ ಲೋಕದ ಡೊಂಕು ತಿದ್ದುವ ಬಲಬರುವದು. ಆ ಬದುಕಿನ ನೆರಳು ಬಿದ್ದರೂ ಸಾಕು, ಲೋಪದೋಷಗಳು ಎಲ್ಲಿದ್ದರೂ ಎಷ್ಟಿದ್ದರೂ ಅವು ತಾವಾಗಿಯೇ ತೊಡೆದು ಹೋಗುವವು. ಆಗ ಆ ಜೀವವು ಹೀಗೆ ಹೇಳಿಕೊಳ್ಳುವುದರಲ್ಲಿ ಸಂಶಯವೇ ಉಳಿಯಲಾರದು. ಏನೆಂದರೆ-
ಅರೆತುದಯ್ಯ ಅಂಗಗುಣ, ಒರೆತುದಯ್ಯ ಭಕ್ತಿ ರಸ.
ಅವರಿಸಿತಯ್ಯ ಆಂಗ ಲಿಂಗವನು.
ಏನೆಂದರಿಯೆನಯ್ಯ ಲೋಕಲೌಕಿಕದ ಮದವ.
ಲಿಂಗಭ್ರಾಂತನಾದೆನಯ್ಯ ಕೂಡಲಸ೦ಗಮದೇವಾ
ನಿಮ್ಮ ಕರುಣ ಎನ್ನನಡೆಗೊಂಡಿತ್ತಾಗಿ.
ಈ ಬೆಳಸು ತನ್ನಲ್ಲಿಯೇ ತಲೆದೋರಿತು. ತನ್ನ ಡೊಂಕು ತಿದ್ದುವುದರಿಂದಲೇ ಲಿಂಗಗುಣ ತಿಳಿಯಿತು. ಹುಳಿಯೊಗರು ಮಾಗಿ ಸಿಹಿ ಮಧುರವಾಯಿತು. ಆನ್ಯರ ಡೊಂಕು ತಿದ್ದುವ ವ್ಯರ್ಥ ಪರಿಶ್ರಮದಿಂದ ಲೋಕಸರಿಗೊಳ್ಳುವುದು ಒತ್ತಟ್ಟಗೆ ಉಳಿಯಲಿ, ತನ್ನ ಡೊಂಕು ಸಹ ಮೊದಲಿನ೦ತೆ ವಕ್ರವಾಗಿಯೇ ಉಳಿಯುವದಲ್ಲವೇ? ತನ್ನೊಳಗಿದ್ದ ಅಕ್ಕಿ  ಪ್ರಕಟ- ವಾಯಿತು; ತನ್ನನಾವರಿಸಿದ್ದ ತವುಡು ಕಡೆಗಾಯಿತು; ಐದು ಮಾನವು ಒ೦ದು ಮಾನವಾಯಿತು. ಹಾಗೆಂದರೇನು? ಶರೀರದ ಆಲಸ್ಯ ತಿಳಿಯಿತು; ಪ್ರಾಣದ ಆಶೆ-ಆಕಾ೦ಕ್ಷೆಗಳು ಪರಿಶುದ್ಧಗೊಂಡವು; ಬುದ್ಧಿಯು ಆಡುವ ತರ್ಕ-ವಿತರ್ಕದ
ಚಧುರಂಗದಾಟವು ನಿ೦ತು, ಆದು ಅರುಹಿನ ಕುಡಿಯಾಯಿತು. ಭಾವನೆಯು ಬಿಸಿಲುಗುದುರೆಯನ್ನು ಬೆಂಬತ್ತಿ ಬಸವಳಿಯುವುದನ್ನು ಬಿಟ್ಟುಕೊಟ್ಟು, ನೇರವಾಗಿ ಪ್ರಭುವಿನ ಸಿರಿಯಡಿಯನ್ನು ಭಕ್ತಿರಸದಿಂದ ನೆನೆಯಿಸಿತು. ಅಂತಃ
ಪುರುಷನ ಕಾಣ್ಕೆಯೊಂದೇ ನಿಜವಾಗಿ ನಿಂತು ಆಳತೊಡಗಿತು.

ತನ್ನೊಳಗಣ ಆರಿವು ತನ್ನಲ್ಲಿ ತೋರಿದಲ್ಲದೆ
ಆನ್ಯರಲ್ಲಿ ತೋರಬಲ್ಲದೇ?
ತನ್ನಲ್ಲಿ ತಾನೆ ಇದ್ದಂತೆ ಇದ್ದಿತ್ತು.
ತನ್ನಲ್ಲಿ ತಾನೆ ಪಕ್ವಕ್ಕೆ ಬಂದು
ತನ್ನಲ್ಲಿ ಹುಟ್ಟಿದ ನೆನಹಿನ ಬಿನ್ನಾಣವನು
ಏನೆಂಬೆನಯ್ಯ ರಾಮನಾಥಾ.

ಈ ಉಪಾಯವು ಸರ್ವರಿಗೂ ಸಾಧ್ಯವೇ? ಸರ್ವರಿಗೂ ಸಹಜವೇ? ಜೀನಜಂಗುಳಿಗೆಲ್ಲ ಇದೊಂದೇ ಪಾಠವನ್ನು ಹೇಳಿಕೊಡಬಹುದೇ? ಬಟ್ಟಬಯಲೆಲ್ಲ ಗಟ್ಟಿಗೊಂಡರೆ, ಸ್ವರ್ಗ-ಮೃತ್ಯು ಪಾತಾಳಕ್ಕೆ ಠಾವಿನ್ನೆಲ್ಲಿಹುದೋ?
ಮೇಘಜಲವೆಲ್ಲ ಮುತ್ತಾದಡೆ ಸಪ್ತಸಾಗರಂಗಳಿಗೆ ಉದಕವಿನ್ನೆಲ್ಲಿಹುದೋ? ಕಷ್ಟಜೀವಿಗಳಾದ ಮನುಜರೆಲ್ದ ನೆಟ್ಟನೆ ಶಿವಜ್ಞಾನಿಗಳಾದಡೆ ಮುಂದೆ ಭವದ ಬಳ್ಳಿಗೆ ಬೀಜವಿನ್ನೆಲ್ಲಿಹುದೋ? ನಮ್ಮ ಕೂಡಲಚೆನ್ನಸಂಗಯ್ಯನಲ್ಲಿ ಸಾವಿರ
ಕೊಬ್ಬ ಸತ್ಯ, ಲಕ್ಷಕ್ಕೊಬ್ಬ ಭಕ್ತ, ಕೋಟಿಗೊಬ್ಬ ಶರಣ.

ಅಹುದು, ಈ ಮಾತು ನಿಜವೇ. ಸಂಪೂರ್ಣ ನಿಜವೇ, ಸುಳ್ಳಲ್ಲ. ಆದರೆ ಸಾವಿರವಿಲ್ಲದಿದ್ದರೆ ಒಬ್ಬ ಸತ್ಯ  ಕಂಡುಬರುವುದಕ್ಕೂ ದಾರಿಯೆಲ್ಲಿದೆ? ಒಬ್ಬ ಭಕ್ತ ಪ್ರಕಟನಾಗಬೇಕಾದರೆ, ಲಕ್ಷಜನರು ಕೃಷಿಮಾಡಬೇಕಲ್ಲವೇ? ಒಬ್ಬ ಶರಣನು ಮೈದೋರಬೇಕಾವರೆ ಕೋಟಿಜನರು ಪರಮ ಶೋಧನೆಗೆ ತೊಡಗ ಬೇಕಲ್ಲವೇ?

ಮಹಾಕರುಣಾಮಯಿಯಾದ ಜಗದೀಶ್ವರೀಶಕ್ತಿಯೇ ಭೂಮಿಗಿಳಿದಿರು ವಾಗ, ದೇವರಾಯನ ಕರುಣೆ ಮಳೆಯಾಗಿ ಸುರಿಯುತ್ತಿರುವಾಗ ಹುಡಿ ಹುಡಿಯೂ ಮುಗುಳುಗೊಳ್ಳುವದು. ಎಲ್ಲೆಲ್ಲಿಯೋ ಚೆಲ್ಲಾಡಿ ಹೋಗಿದ್ದರೂ, ಎಲ್ಲೆಲ್ಲಿಯೋ ತೂರಾಡಿ ಹೋಗಿದ್ದರೂ ಹುಲ್ಲು ಬೀಜಗಳೆಲ್ಲ ಮೊಳಕೆಯೊಡೆದು ಹಸುರು ಮುರಿಯತೊಡಗುವವು. ಸಾವಿರಕ್ಕೊಬ್ಬ ಸತ್ಯ, ಲಕ್ಷಕ್ಕೊಬ್ಬ ಭಕ್ತ, ಕೋಟಿಗೊಬ್ಬ ಶರಣ-ಎನ್ನುವುದು ಬೇಸಗೆಯ ಬೆಳೆ. ಬೆಳೆಗಾಲದ ಬೆಳಸಲ್ಲ; ಮಳೆಗಾಲದ ಪಸಲಲ್ಲ. ಭೂಮಿತಾಯಿಯ ಅಡಿಯಹುಡಿಯಲ್ಲಿ ದೇವರಾಯನ ಕರುಣೆಯ ಮಳೆಹನಿಕೂಡಿದ ಯಾವ ಬೀಜವೂ ಹಾಳಾಗಲಾರದು. ಒಲ್ಲೆನೆನ್ನುವ ಪಯರೂ ಲೋಕದ ಪಯರಿನೊಂದಿಗೆ ಎರಡಂಗುಲ ಬೆಳೆದು ನಿಲ್ಲುವದು. ಇದು ಸತ್ಯಸಿದ್ಧಾಂತ; ನಿತ್ಯಸಿದ್ಧಾಂತ.

ಕುಂಬಿಕಲ್ಲಿಗೂ ಹಾವಸೆಯ ಬೆಳೆ. ತೇವ ಏರಿದಲ್ಲೆಲ್ಲ ಬೂಳಸದ ಬೆಳೆ. ಗಿರಿಯಲ್ಲಿ ದರಿಯಲ್ಲಿ ಹಸುರಿನ ಪಸಲೆ. ಸಂದಿಯಲ್ಲಿ ಗೊಂದಿಯಲ್ಲಿ ಕಾಡು ಕಸದ ಸುಗ್ಗಿ. ಮಳೆಗಾಲದ ಬೆಳೆ, ಹುದಿಲಲ್ಲಿಯ ಹುಲ್ಲು, ಮೂಲೆಮೂಲೆಗೂ
ನಾಟಿಗೆಗಳು! ಆದ್ದರಿಂದ ಬಟ್ಟಬಯಲೆಲ್ಲಾ ಗಟ್ಟಿಗೊಂಡರೆ ಸ್ವರ್ಗ, ಮರ್ತ್ಯ, ಪಾತಾಳಕ್ಕೆ ಠಾವಿನ್ನೆಲ್ಲಿ-ಎಂಬ ಚಿಂತೆ ನಮಗೆ ಬೇಡ. ಆ ಚಿಂತೆ ದೇವನಿಗಿರಲಿ. ಮೇಘಜಲವೆಲ್ಲ ಮುತ್ತಾದರೆ ಸಪ್ತಸಾಗರಗಳಿಗೆ ಉದಕವಿನ್ನೆಲ್ಲಿ-ಎಂಬ
ಯೋಚನೆ ನಮಗೇಕೆ? ಅದನ್ನು ಯೋಚಿಸುವ ಸಮರ್ಥನು ಬೇರೆಯೇ ಇದ್ದಾನೆ. ಕಷ್ಟಜೀವಿ ಮನುಜರೆಲ್ಲ  ಶಿವಜ್ಞಾನಿಗಳಾದಡೆ ಮುಂದೆ ಭವದ ಬಳ್ಳಿಗೆ ಬೀಜವಿನ್ನೆಲ್ಲಿ-ಎಂದು ನಾವು ಗಾಬರಿಗೊಳ್ಳುವ ಕಾರಣವಿಲ್ಲ.
ಆ ತೊಡಕನ್ನು ಆಡಾಡುತ್ತ ಬಿಡಿಸಬಲ್ಲ ಗಾರುಡಿ ಬೇರೆಯೇ ಇದ್ದಾನೆ. ಆತನ ಕೈಗೂ ತೊಡಕಾಗಿಯೇ ಉಳಿಯುವುದಕ್ಕೆ ಸಾಧ್ಯವಿಲ್ಲ. ಈ ಬಗೆಯ ಯೋಚನೆ, ತೊಡಕು ಸಂದೇಹ ಇವೆಲ್ಲ ಒಂದು ಬಗೆಯಿಂದ ಪರಚಿಂತೆಗಳೇ ಆಗಿವೆ. ಪರ
ಚಿಂತೆ ನಮಗೇಕಯ್ಯ? ನಮ್ಮ ಚಿಂತೆಯೇ ನಮಗೆ ಹಾಸಲುಂಟು, ಹೊದೆಯಲುಂಟು! ಈ ಕೃಷಿಯು ಅದೆಷ್ಟು ಪ್ರಬಲವಾಗಿವೆಯೆ೦ದರೆ, ಅವರಲ್ಲಿ ಗೆಲುವಂತೂ ಕಟ್ಟಿಟ್ಟ ಹಾಗಿದೆ. ನಡುನಡುವೆ ತತ್ಪೂರ್ವಿಕ ಸೋಲು ಬಂದರೂ ಅವು
ಮುಂಬರುವ ಮಹಾಗೆಲುವಿಗೆ ಪೂರ್ವ ಸೂಚನೆ. ಈ ಮಹಾಮಾರ್ಗದಲ್ಲಿ ಒಂದಡಿಯಿಟ್ಟಿವನೂ ಧನ್ಯನೇ. ಅವನು ಹತ್ತುಸಾರೆ ಬಿದ್ದರೂ ಸಾವರಿಸಿ ಕೊ೦ಡು ಮತ್ತ ಎದ್ದು ಮುಂದುವರಿಯತಕ್ಕವನೇ. ಈ ಕೃಷಿಯಲ್ಲಿ ಬ೦ಗಾ
ರದ ನೇಗಿಲಿದೆ, ಕರ್ಪುರದ ಮರಕಡಿದು ಬೇಲಿ ಹಾಕುವುದಿದೆ; ಶ್ರೀಗಂಧದ ಗಿಡದ ಗೊಬ್ಬರ ಮಾಡಿ ಅಗಿಗಳಿಗೆ ಕಟ್ಟುವುದಿದೆ. ಅಂದ ಬಳಿಕ ಅದೆಂಥ ಬೆಳೆ ಬರಬಹುದು? ಅದೆಂಥ ಪಸಲು ಕೈಗೂಡಬಹುದು?

ಕೈಯಲ್ಲಿ ಜ್ಯೋತಿಯ ಹಿಡಿದು ಕತ್ತಲೆಯೆನಲೇತಕ್ಕೆ?
ಪುರುಷರಸ ಕೈಯಲ್ಲಿದ್ದು ಕೂಲಿಯ ಮಾಡಲೇತಕ್ಕೆ?
ಕ್ಷುತ್ತು ನಿವೃತ್ತಿಯಾದವಂಗೆ ಕಟ್ಟೋಗರದ
ಹೊರೆಯೆ ಹೊರಲೇತಕ್ಕೆ?
ನಿತ್ಯ ಅನಿತ್ಯವನೆ ತಿಳಿದು, ಮರ್ತ್ಯಕೈಲಾಸನೆ೦ಬುದು
ಭಕ್ತರಿಗೆ ಯುಕ್ತವಲ್ಲ.
ನಿಶ್ಚಯವ ತಾನರಿದು ಆತ್ತಣ ಗೊತ್ತು
ನಿಶ್ಚಯವಾಗಿ ನಿಂದಲ್ಲಿ
ಅ ಬಚ್ಚಬಯಲ ಬೆಳಗಿನಲ್ಲಿ ನಿನ್ನ ನೀನೇ ನೋಡಿಕೋ.
ಎನ್ನಯ್ಯ ಪ್ರಿಯ ಇಮ್ಮಡಿ ನಿಃಕಳಂಕ ಮಲ್ಲಿಕಾರ್ಜುನನಲ್ಲಿ.

ಇಂಥ ಅಫಟಿತ ಘಟನಾಮಹಿಮರು ಲೋಕದ ಡೊಂಕು ತಿದ್ದುವುದಕ್ಕೆ ಸಾಗಿ ಹೋಗುವದಿಲ್ಲ. ಲೋಕವೇ ಇವರನ್ನು ಹತ್ತಿ ಬಂದು ಡೊಂಕು-ಕೊಂಕುಗಳನ್ನೆಲ್ಲ ನೀಗಿ ಹೋಗುತ್ತದೆ. ಇವರು ದರ್ಶನಮಾತ್ರದಿಂದ ಸ೦ಶಯ ಸುಡಬಲ್ಲರು. ಸ್ಪರ್ಶಮಾತ್ರದಿ೦ದಲೇ ಶ್ರದ್ಧೆಯನ್ನು ಎದೆಯಲ್ಲಿ ಊರಬಲ್ಲರು. ಮಾತು ಬೇಡ, ಕೃತಿಬೇಡ, ಒ೦ದು ದೃಷ್ಟಿಕಿರಣವು ಸುಳಿದಲ್ಲೆಲ್ಲ ನವಚೇತನವು ತುಳುಕಾಡಿ ಜನ್ಮಾಂತರ ದೀಕ್ಷೆಯನ್ನು ಕೊಡಬಲ್ಲದು. ಇಂಥ ಒಬ್ಬ ಶರಣನು ಭೂಮಿಯಲ್ಲಿ ಕಾಣಿಸಿಕೊಂಡರೂ ಸಾಕು, ಇಂಥ ಒಬ್ಬ ಶರಣನು ಭೂಮಿಗೆ ಬಂದರೂ ಸಾಕು. ಆ ಒಬ್ಬ ಶರಣನ ಬರುವಿಗಾಗಿ ಕೋಟಿಜನರು ಎತ್ತುಗಡೆ ನಡೆಸಿದರೂ ತಪ್ಪೇನು? ಬರಲಿರುವ ಶರಣನೊಬ್ಬನ ಕಲ್ಯಾಣವೇ ಅದರಲ್ಲಿರುವುದಿಲ್ಲ. ಕೋಟಿಕೋಟಿ ಜನರ ಮಹಾಕಲ್ಯಾಣವಿದೆ. ಅತಿಶಯವಾಗಿ ಶ್ರಮಿಸಿ ಅಸ್ಥಾಯಿಯಾದ ಫಲವನ್ನು ದೊರಕಿಸುವದ- ಕ್ಕಿ೦ತ, ಸ್ಥಿರವಾದ ಪ್ರಯತ್ನದಿಂದ ಯೋಗ್ಯವಾಗಿ ಪರಿಶ್ರಮಿಸಿ ಶಾಶ್ವತಫಲಕ್ಕೆ ಕೈಯೊಡ್ಡಿ ನಿಲ್ಲಬೇಕು. ಪ್ರತಿಫಲ ಸಿಗುವುದಕ್ಕೆ ಸಾವಕಾಶವಾದರೂ ಅಡ್ಡಿಯಿಲ್ಲ; ಅದರೊಂದಿಗೆ ಸರ್ವಕಲ್ಯಾಣಗಳೂ ಸಂಗಡಿಸಿರುತ್ತವೆ.

****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇವಳ ಚೆಂದ
Next post ನಗೆಡಂಗುರ-೧೪೮

ಸಣ್ಣ ಕತೆ

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

  • ಗದ್ದೆ

    ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

  • ಪ್ರೇಮನಗರಿಯಲ್ಲಿ ಮದುವೆ

    ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…

cheap jordans|wholesale air max|wholesale jordans|wholesale jewelry|wholesale jerseys