ಕೆಂಪು ಕಡಲಿನ ರಂಗಿನ ಲೋಕ

ಸೌದಿ ಅರೇಬಿಯಾದ ಪ್ರಮುಖ ಅಕರ್ಷಣೆಗಳಲ್ಲೊಂದಾದ ನೈಸರ್ಗಿಕ ಚೆಲುವ ನ್ನೊಳಗೊಂಡ ಕೆಂಪು ಸಮುದ್ರದ ಹವಳದ ದಿಣ್ಣೆಗಳು ಮರೆಯದೇ ಮತ್ತೆ ಮತ್ತೆ ನೋಡಬೇಕೆನಿಸುವಂಥದು. ಅದೂ ಜೆಡ್ಡಾದಲ್ಲಿದ್ದಕೊಂಡು ಇಂತಹ ಸುಂದರತೆ ಅನುಭವಸದೇ ಹೋದರಂತೊ ಅವರಷ್ಟು ಅರಸಿಕರು ಬೇರೆ ಯಾರಿಲ್ಲ ಎಂದು
ಹೇಳಬಹುದು.

ಸುಮಾರು ದಶಕಕ್ಕೂ ಹೆಚ್ಚು ಕಾಲ ನಮಗೂ ಈ ಕೆಂಪು ಕಡಲಿಗೂ ಒಂಥರಾ ಅಂಟಿನ ನಂಟಿನ ಸಂಬಂಧ ಬೆಳೆದುಬಂದಿತ್ತು.

ಜಿಡ್ಡಾದಲ್ಲಿ ವಾರದ ಅಂತ್ಯ ಕಳೆಯುವದೇನೊ ಸಮಸ್ಯೆಯಾಗಿರಲಿಲ್ಲ ನಮಗೆ. ಸಂಜೆ ಸ್ನೇಹಿತರ ಮನೆಯಲ್ಲಿ ಪಾರ್ಟಿಗಳಾಗಲೀ ಅಥವಾ Shopping ಆಗಲೀ ಇಲ್ಲದೇ ಹೋದರಂತೂ ಬೀಚಿಗೆ ಹೊರಡಲು ಶೇಕಡ 100 ಪರವಾನಗಿ. ಬೇಸಿಗೆಯ 4-5 ತಿಂಗಳು ಇಲ್ಲಿ ಅತೀ ಬಿಸಿಲು. 45-50 ಡಿಗ್ರಿ ಬಿಸಿಲು ಹೊಡಯುತ್ತಿರುತ್ತದೆ. ಅಗ
ನಾವು ಒಂದೆರಡು ತಿಂಗಳು, ಇಲ್ಲಿರದೇ ರಜೆಗೆಂದು ಬೇರೆ ಎಲ್ಲಾದರೂ ಹೋಗಿ ರುತ್ತೇವೆ. ಉಳಿದ ತಿಂಗಳುಗಳಲ್ಲಿ ಬೀಚ್‌ಗೆ ಹೋಗದೇ ಊರು ಹೊರಗಡೆಯೇ ಇರುವ ಕಾರ್ನಿಶ್ (ಸಮುದ್ರ ಒತ್ತುಗಳು ಇರುವ ಸ್ಥಳ) ನೋಡಲು ಹೋಗುತ್ತಿದ್ದೆವು.

ಉಳಿದ 7-8 ತಿಂಗಳು ಇಲ್ಲಿಯ ಹವಾಮಾನ ತಕ್ಕಮಟ್ಟಿಗೆ ಅನುಕೂಲವಾಗಿ ರುವದು. ನವೆಂಬರ್‌-ಡಿಸೆಂಬರಿ-ಜನವರಿಯಲ್ಲಿ ಇಲ್ಲಿ ಕೊರೆಯುವ ಚಳಿ. ಸ್ವೆಟರ್ ಗಳಿಲ್ಲದೆ ಮನೆಹೊರಗೆ ಹೆಜ್ಜೆ ಹಾಕುವಂತೆಯೇ ಇಲ್ಲ. ಮನೆ ಆಫೀಸುಗಳಲ್ಲಿರುವ ಏರ್‌ಕಂಡೀಶನ್‌ಗಳೆಲ್ಲ ಬೇಕಿದ್ದರೆ ಬಿಸಿ ಹವೆಗೆ ಹೊಂದಿಸುವರು. ಇಂತಹ ದಿನಗಳಲ್ಲಿ
ಸಮುದ್ರ ಕೂಡಾ ಸಾಕಷ್ಟು ಚಳಿಯಿಂದ ಕೊರೆಯುತ್ತದೆ. ಆದರೆ ಮಧ್ಯಾನ್ನ ಬೆಚ್ಚನೆಯ ನೀರಿರುವದರಿಂದ ಅಂತಹ ತೊಂದರೆಗಳೇನನಿಸುತ್ತಿರಲಿಲ್ಲ.

ಜೆಡ್ಡಾಗೆ ಬರುವವರೆಗೆ ನನಗೆ Corals, Reef, Diving,  Snorkling (ಸ್ನೋರ್ಕಲಿಂಗ) ಮುಂತಾದವುಗಳ ಪರಿಚಯ ಹೆಚ್ಚು ಗೊತ್ತಿರಲಿಲ್ಲ.  ಅಷ್ಟಿಷ್ಟು ಎಲ್ಲೆಲ್ಲೋ ಮ್ಯಾಗಝನ್‌ದಲ್ಲಿ ಓದಿದ್ದರೂ ಪೂರ್ತಿ ತಿಳಿದುಕೊಳ್ಳುವ ಗೊಂದಲಕ್ಕೆ ಹೋಗಿರದೇ ಅಂದಿನದಂದೇ ಮರೆತುಬಿಟ್ಟಿದ್ದೆ. ಅದರೆ ಇಲ್ಲಿಗೆ ಬಂದ ಮೇಲೆ ಪ್ರತಿವಾರ ಗಡಬಿಡಿಸಿ- ಕೊಂಡು ಹೊರಡುವ ನಮ್ಮ ಕ್ಯಾಂಪಸ್ಸಿನ ಜರ್ಮನ್, ಅಮೇರಿಕನ್ ಕುಟುಂಬಗಳನ್ನು ನೋಡಿದಾಗ ನಮಗೂ ಸ್ವಲ್ಪ ನೋಡುವ ತಿಳಿದುಕೊಳ್ಳುವ ಆತುರ ಶುರುವಾಯಿತು.

ಗುತ್ತಿಯವರು ನನಗಿಂತಲೂ ಒಂದು ವರ್ಷ ಮೊದಲೇ ಇಲ್ಲಿ ಬಂದಿದ್ದರಿಂದ ಅವರಿಗೆ ಸಾಕಷ್ಟು ಸಮುದ್ರದ ಪರಿಚಯ ಅನೇಕ ಜರ್ಮನ್ ಸ್ನೇಹಿತರ ಮೂಲಕ ದೊರಕಿತು. ಆದರೆ ಇನ್ನೂ Snorkling ಮಾಡಿರಲಿಲ್ಲ. ಆಗ ಬೀಚ್‌ಗೆ ಹೋಗುತ್ತಿದ್ದುದೇ ಕಡಿಮೆಯಂತೆ. ನಾನಿಲ್ಲಿಗೆ ಬಂದಾಗ ನನಗೊಂದು ತರಹದ ವಿಚಿತ್ರ ಅನುಭವ ವಾಯಿತು. ಹೆಚ್ಚಾಗಿ ಜರ್ಮನ್ ಕುಟುಂಬಗಳು ಕ್ಯಾಂಪಿಂಗ್ ಬಸ್ಸುಗಳಿನ್ನಿಟ್ಟು ಕೊಂಡಿದ್ದರು. (ಕಂಪೆನಿಯಿಂದ ಕಾರು ಮಾತ್ರ ಇರುತ್ತದೆ). ಅವುಗಳಲ್ಲದೇ ಬೇರೆಯವರೂ ತಮಗೆ ಅನುಕೂಲವಾಗುವಂತೆ ಕಾರಿನ ಮೇಲೆ ಒಳಗೆ ಹೊರಗೆ ಎಲ್ಲ ರಜೆಗೆ ಸಾಮಾನುಗಳನ್ನು ಹೊಂದಿಸಿಕೊಂಡಿರುತ್ತಾರೆ. ಗುರುವಾರ ಮಧ್ಯಾನ್ಹ ಬರುವದೇ ಸಾಕು (ಸೌದಿಯಲ್ಲಿ ಗುರುವಾರ ಅರ್ಧದಿನ, ಶುಕ್ರವಾರ ಪೂರ್ತಿ ದಿನ ರಜೆ. ನಮ್ಮ ರಜೆಗೆ ಶನಿವಾರ-ರವಿವಾರಗಳಿದ್ದಂತೆ) ಈ ಜನ ಅಫೀಸಿನಿಂದ ಬರಿದವರೇ ಮೊಂಡು ಚೊಣ್ಣ ಗಳನ್ನೇರಿಸಿಕೊಂಡು ಬೇಕಿದ್ದರೆ ಮೇಲೆ ಶರ್ಟುಹಾಕಿಯೋ ಇಲ್ಲ ಹಾಗೆಯೋ ಹೊರಬಿದ್ದು ಕ್ಯಾಂಪಿಂಗ್ ಬಸ್ಸುಗಳನ್ನಾಗಲೀ, ಕಾರುಗಳನ್ನಾಗಲೀ, ತಯಾರಿಸಿಕೊಳ್ಳುವರು. ಕ್ಯಾಂಪಿಂಗ್ ಬಸ್ಸುಗಳೆಂದರೆ ಎಲ್ಲಾ ಸೌಲಭ್ಯಗಳನ್ನು ಹೊಂದಿರುವ ಸಣ್ಣ ಪ್ರಮಾಣದ ಮನೆ ಅಂದರೂ ಅಡ್ಡಿ ಇಲ್ಲ. ಮಲಗುವ ಕೋಣೆಗಳು, ಊಟದ ಮನೆ, ಅಡುಗೆಮನೆ ಅಲ್ಲಿಯೇ ಫ್ರಿಜ್, ವಾಶ್ ಬೇಸನ್‌ಗಳನ್ನೊಳಗೊಂಡಿರುತ್ತದೆ. ಒಂದು ದಂಡೆಗೆ ಟಾಯಲೆಟ್ ಕೂಡಾ ಇರುತ್ತದೆ. ಸಣ್ಣ ಜನರೇಟರ್ ಕೂಡಾ ಹೊಂದಿಸಿರುತ್ತಾರೆ. ಸೌದಿಯಲ್ಲಿ ಈ ತರಹ ಜನರೇಟರ್ ಉಪಯೋಗಿಸಿದರೆ ಅಮೇರಿಕಗಳಲ್ಲೆಲ್ಲ ನೇರವಾಗಿ ವಿದ್ಯುತ್ ಉಪಯೋಗಿಸುತ್ತಾರೆ. ಯೂರೋಪ್ ಪ್ರವಾಸದಲ್ಲಿದ್ದಾಗ ಇಂತಹ ಕ್ಯಾಪಿಂಗ್
ಏರಿಯಾಗಳನ್ನು ಬಹಳ ನೋಡಿದೆವು. ಅಲ್ಲಲ್ಲಿ ಕ್ಯಾಂಪಿಂಗ್ ಎಂದೇ ಸ್ವಳಗಳು ಇರುತ್ತವೆ. ಅಲ್ಲಿ ಪ್ರವಾಸಿಗಳು ತಮ್ಮ ಬಸ್ ಒಯ್ದು ನೀಟಾಗಿರುವ ನಿಲ್ಹಾಣದಲ್ಲಿ ಸಾಲಾಗಿ ನಿಲ್ಲಿಸಿದರೆ ಸಾಕು. ವಿದ್ಯುತ್ ಸಂಪರ್ಕ ಕೆಲವೇ ಸೆಕೆಂಡುಗಳಲ್ಲಿ ಕೊಡುತ್ತಾರೆ. ನಾವು ಇಸ್ತ್ರಿ ಪ್ಲಗ್‌ನ್ನು ಗೋಡೆಯಲ್ಲಿರುವ ಹೊಲ್ಡರ್‌ಗೆ ಸೇರಿಸಿದಷ್ಟೇ ಸರಳ ಈ ಕೆಲಸ ಕೂಡ..

ಸರಿ, ಇಂತಹ ಕ್ಯಾಂಪಿಂಗ್‌ದವರು ಫ್ರಿಜ್ ತುಂಬ ತಿಂಡಿ ತಂಪು ಪಾನೀಯಗಳನ್ನು ತುಂಬಿಕೊಂಡು ಸಮುದ್ರ ದಂಡಗೆ ಎರಡು ದಿನ ಕ್ಕಾಂಪ್ ಹಾಕುವರು. ಕಾರಿನವರಿಗೂ ಏನೊ ತೊಂದರೆ ಇಲ್ಲ. ಒಳ್ಳೇ ಕೂಲರ್ ಡಬ್ಬಿಗಳಲ್ಲಿ ತಿಂಡಿ-ತೀರ್ಥ ಗಳನ್ನು ತುಂಬಿಕೊಂಡು ಕ್ಕಾಂಪಿಂಗ್ ಟೆಂಟ್‌ಗಳನ್ನು ತೆಗೆದುಕೊಂಡು ಹೋಗಿ ಅರಾಮವಾಗಿ ಮಜಾ ಮಾಡುತ್ತಾರೆ. ಈ ತರಹ ಬೀಚ್ ಮೇಲೆ ಟೆಂಟ್ ಹಾಕಿ ಕೊಂಡು ಖುಷಿಪಡುವ ಜನ ಯೂರೋಪಿಯನ್ನರು, ಅಮೇರಿಕನ್ನರು. ನಮ್ಮ ಕಡೆಯವರು ಬೀಚ್ ನೋಡಲು ಬರುವವರು ಮಾತ್ರ; ಅದರೆ ಇಂತಹ ಸಾಹಸವ ಅಥವಾ ಗೊಂದಲದ ಕೆಲಸಕ್ಕೆ ಹೋಗುವದು ಅತಿ ವಿರಳ. ಇಲ್ಲಿಯವರೆಗೂ ತಂಬೂ ಹಾಕಿ ರಾತ್ರಿ ಇಡೀ ಇದ್ದು ಸಮುದ್ರ — ಸಮುದ್ರದಾಳ ನೋಡಿ ಖುಷಿಪಟ್ಟ ಜನ ಕಾಣಿಸಲೇ ಇಲ್ಲ ನಾವೂ ಕೂಡಾ ಎಂದೂ ಸಾಹಸಮಾಡಲಿಲ್ಲವೆಂದೇ ಹೇಳುತ್ತೇನೆ.

ನಾವು ಹೆಚ್ಚಾಗಿ ಶುಕ್ರವಾರ ಜೆಳಿಗ್ಗೆ 9-10ರ ಒಳಗೆ ತಿಂಡಿ ತಿಂದು, ಒಂದಿಷ್ಟು ಮಧ್ಯಾನ್ಹಕ್ಕೆಂದು ಮುಂಜಾನೆಯೇ ಮಾಡಿದ ಇಡ್ಲಿಯೋ. ದೋಸೆಯೋ, ಅಥವಾ ಮೊಸರನ್ನವೋ ಕಟ್ಟಿಕೊಂಡು ಸಂಜೆಗೆಂದು ಬಿಸ್ಕಟು-ಕೇಕ್ ಹಾಗೂ ಕೋಲ್ಡ್  ಡ್ರಿಂಕ್ಸಗಳನ್ನು ತೆಗೆದುಕೊಂಡು ಹೋದರೆ ಆಯಿತು. ಸಾಕಷ್ಟು ಈಜಾಡಿ ಮತ್ತೆ ನಡುವೆ ಬಂದು ಅಷ್ಟಿಷ್ಟು ತಿಂಡಿ ತಿಂದು ಅರ್ಧತಾಸೋ, ತಾಸು ಹೊತ್ತೋ ಕಾರಿನಲ್ಲಿ ವಿಶ್ರಮಿಸಿ ಮತ್ತೊಂದು ಬಾರಿ ಸಮುದ್ರಕ್ಕಿಳಿಯುತ್ತಿದ್ದೆವು. ಹುಡುಗರಿಗೆ-ನಮಗೆ ಸುಸ್ತು ಹೊಡೆಯುವವರೆಗೆ, ಕೈ ಕಾಲು ರೋಳ್ಳೆಯಾಗುವವರೆಗೆ ಅಂದರೂ ಅಡ್ಡಿ ಇಲ್ಲ, ನೀರಿನಲ್ಲಿದ್ದು ಸಂಜೆ 6 ಗಂಟೆಗೆ ಮನೆಗೆ ತೆರಳುತ್ತಿದ್ದೆವು.

ಇಲ್ಲಿಯ ಬೀಚಚ್‌ಗಳೆಂದರೆ ನಮ್ಮ ಕಡೆಯ ಗೋವಾ – ಗೋಕರ್ಣ ಕಾರವಾರ-ಮಂಗಳೂರು-ಕೇರಳದ ಸೌಂದರ್ಯ ರಾಶಿ ಹೊತ್ತಂತವುಗಳಲ್ಲ. ಬರೀ ಒಣ ಒಣ ಏನೋ ಒಂಥರಾ ಕಳಕೊಂಡವರ ಹಾಗೆ ಭಣ ಭಣ ಕೂಡಾ. ಬೀಚ್  ಅಥವಾ ಸಮುದ್ರ  .ದಂಡೆಗುಂಟ ಒಂದೂ ತೆಂಗಿನ ಗಿಡ ಕಾಣಿಸುವದಿಲ್ಲ. ಉಸುಕಿನ ರಾಶಿ. ಕೆಲವು ಮರುಭೂಮಿ ಕಂಟೆಗಳು ಬಿಟ್ಟರೆ ಮತ್ತೇನೂ ಇಲ್ಲ. ಬೀಚ್ ಬಂದರೆ ದಟ್ಟ-ಪಚ್ಚ ಹಸಿರಿನ ಸೌಂದರ್ಯ ಮನಸ್ಸಿನಲ್ಲಿ ಅಚ್ಚೊತ್ತಿದ್ದಂತಿದೆ. ಅದೇ ಚಿತ್ರ ಇಲ್ಲಿಯೂ ಊಹಿಸಿ ಹೋದವರಿಗೆ ಬರೀ ನಿರಾಶೆ. ಆ ಕಡೆ ವಿಶಾಲ ಸಮುದ್ರ ಈ ಕಡೆಗೆ ರಾಶಿ ರಾಶಿಯಾಗಿ ಬಿದ್ದ.ಉಸುಕು, ಮರುಭೂಮಿ, ಮೇಲೆ ರಣರಣ ಬಿಸಿಲು. ಸಾಕು ನೋಡಿ ದ್ದಾಯ್ತು ಅನಿಸುವದು ಮೊದಲ ಸಲ. ಅಷ್ಟೊಂದು ಪರಿಣಾಮಹೀನ. 5-6 ವರ್ಷಗಳ ಮೊದಲು ವಾಹನಗಳು ಹೋಗಲಿಕ್ಕೆ ಸರಿಯಾಗಿ ರಸ್ತೆಯೂ ಇರಲಿಲ್ಲ. ಈಗ ಒಳ್ಳೆಯ ರಾಷ್ಟ್ರೀಯ, ಹೆದ್ದಾರಿಯಂತೆ ರಸ್ತೆಗಳು, ಲೈಟು, ಸಿಗ್ನಲ್‌ಗಳು ಇತರ ಸಾಕಷ್ಟು ವ್ಯವಸ್ಥೆ ಗಳನ್ನು ಮಾಡಿದ್ದಾರೆ.

ಮೊದಲು ನಾವು ಹೋಗಬೇಕಾದಾಗಲ್ಲ ಕಚ್ಚಾ ರಸ್ತೆ ಅಥವಾ ಉಸುಕಿ ನಲ್ಲಿಯೇ ಚಕ್ಕಡಿಯಲ್ಲಿ ಹೋದಂತೆ ಒಳಗಿನವರಲ್ಲ ಕೊಕ್ಕರಿಸುತ್ತ ಹೋಗುತ್ತಿದ್ದೆವು. ಈ ಕಚ್ಚಾ ರಸ್ತೆ‌ಗಳು ಯುರೋಪಿಯನ್ನ-ಅಮೇರಿಕನ್ನರೇ ಮೇಲಿಂದ ಮೇಲೆ ಕಾರುತಿರುಗಾಡಿಸಿ ಆದವೇ ಅನ್ನಬೇಕು. ಸಮುದ್ರದಂಡೆಗಂಟೆಲ್ಲ ಅವರದೇ ಸಾಮ್ರಾಜ್ಯ. ಅವರೇ ಸರಿಯಾಗಿ ಎಲ್ಲ ಅವಕಾಶ ಉಪಯೋಗಿಸಿಕೊಳ್ಳುವವರು.

ನಾವು ಬೀಚ್ ತಲುಪುವಾಗ (ಈ ಕಚ್ಚಾ ರಸ್ತೆ ದಾಟಿಕೊಂಡು) ಸುಮಾರು ಒಂದು ತಾಸಾದರೂ ಆಗುತ್ತಿತ್ತು. ನಮ್ಮ ಕ್ಯಾಂಪಸ್ಸಿನ ಮನೆಯಿಂದ ಕೇವಲ 25 ಕಿ.ಮೀ. ಅಷ್ಟೇ ದೂರ. ಈಗ ರಸ್ತೆಗಳಿರುವುದರಿಂದ ಕೇವಲ 20 ಮಿನಿಟುಗಳಲ್ಲಿ ತಲುಪುತ್ತೇವೆ. 10ರ ಸುಮಾರಿಗೆ ವಾತಾವರಣ ಇನ್ನೂ ಪ್ರಶಾಂತವಾಗಿಯೇ ಇರುತ್ತದೆ. ಯಾರೂ ಕಡಲ ಕನ್ಯೆಗೆ ಇನ್ನೂ ಕೈ ಹಚ್ಹಿಲ್ಲ ಅನ್ನುವಷ್ಟು ತಿಳಿಯಾದ ನೀಲಿ-ಹಸಿರು ನೀರು. ಮೊದಲನೆಯ ದಿನ ಕ್ಯಾಂಪ್ ಹಾಕಿದ ಜನ ಅರಾಮವಾಗಿ ಎದ್ದು ಸಣ್ಣ ಸಿಲೆಂಡರ್ ಇರುವ ಗ್ಯಾಸ್ ಒಲೆ ಹೊತ್ತಿಸಿಕೊಂಡು ಚಹಾ ಮಾಡಿಕೊಳ್ಳುವದೋ ಇನ್ನೇನಾದರೂ ತಿಂಡಿ-ತಿನಿಸು ಬಿಸಿ ಮಾಡಿಕೊಳ್ಳುವದೋ ನಡೆಸಿರುತ್ತಾರೆ. ಈ ಗುಂಪು ಜನ ಇಡೀ ರಾತ್ರಿ ಎಚ್ಚರವಿದ್ದು ಬೆಂಕಿಹಚ್ಚಿ ಅದರ ಮೇಲೆ ಮೀನು-ಕುರಿ-ಕೋಳಿ-ಸಿಂಪಿಗಳನ್ನು ಸುಡುತ್ತ, ಸಮುದ್ರದ ಮೇಲಿನ ತಂಪುಗಾಳಿ, ತೆರೆಯ ಏರುಬ್ಬರಗಳೊಂದಿಗೆ ಸ್ಟೀರಿಯೋ ಹಚ್ಚಿಕೊಂಡು ಡ್ಯಾನ್ಸ್ ಮಾಡುತ್ತ ಖುಷಿ ಪಡುತ್ತಾರೆ. ಈ ದೇಶದಲ್ಲಿ ಕುಡಿತ ಕಡ್ಡಾಯವಾಗಿ ನಿಷೇಧ ವಿರುವದರಿಂದ ಒಳ್ಳೆಯ ಸಮಯದಲ್ಲಿ ಅವರಿಗೆ ಬೇಸರ-ಸಿಟ್ಟು ಬರುತ್ತಿರಬಹುದು. ಅದೊಂದು ಅವರಿಗೆ ತೊಂದರೆಯಾದರೂ ಮನೆಯೊಳಗೇ ದ್ರಾಕ್ಷಾರಸಕ್ಕೆ ಏನೇನೊ:
ಬೆರಸಿ 8-15 ದಿನಗಳವರೆಗಿಟ್ಟು ಸೋಸಿ “ಸದಕಿ” ಎನ್ನುವ ಅರ್ಥದಲ್ಲಿ ರಸಾಯನ ತಯಾರಿಸಿಕೊಂಡು ಕುಡಿಯುತ್ತಾರೆ.

ಒಳ್ಳೆಯ ಸ್ಕಾಚ್, ವಿಸ್ಕಿ, ಯಂತಹ ಬೆಲೆಯುಳ್ಳ ಮದ್ಯಗಳು ಅತೀ ಕಟ್ಟುನಿಟ್ಟಾದ ಈ ದೇಶದಲ್ಲೂ ಸಿಗುತ್ತವಂತೆ. ಅದೆಲ್ಲ ಸ್ಮಗ್ಲರ್‌ಗಳ ಮುಖಾಂತರ ದೊಡ್ಡ ದೊಡ್ಡ ಕಂಟೈನರ್‌ಗಳಲ್ಲಿ ಬರುತ್ತವಂತೆ. ಅವಕ್ಕೆಲ್ಲ ಒಂದಕ್ಕೆ ಎರಡು ಪಟ್ಟು ಕೊಟ್ಟು ಒಳಗೊಳಗೇ ಅವರವರ ತಿಳುವಳಿಕೆಯ ಮೇರೆಗೆ ತರಸಿಕೊಳ್ಳುವ ವ್ಯವಹಾರ ನಡೆದಿರುವದಂತೆ.

ಅಕಸ್ಮಿಕವಾಗಿ ದೊಡ್ಡ ಪ್ರಮಾಣದವರು ಸಿಕ್ಕುಬಿದ್ದರೆ ಕುತ್ತಿಗೆಯೇ ಹಾರುತ್ತದೆ. ಈ. ಸಂಗತಿಗಳ ಬಗ್ಗೆ ಇಲ್ಲಿಯ ಪೇಪರ್‌ಗಳಲ್ಲಿ ಆಗೀಗ ಪ್ರಕಟಸಿರುತ್ತಾರೆ.

ನಮ್ಮ ಕ್ಯಾಂಪಸ್‌ನಲ್ಲಿಯ ಒಂದು ಜರ್ಮನ್ ಕುಟುಂಬದ ಗಂಡ-ಹೆಂಡತಿ ಯರಿಬ್ಬರೂ ‘ಸದಕಿ’ ದೊಡ್ಡ ಪ್ರಮಾಣದಲ್ಲಿ ತಯಾರಿಸಿ ಕ್ಯಾಂಪಸ್ಸಿನಲ್ಲಿಯೂ ಅಷ್ಟೇ ಅಲ್ಲ ಧೈರ್ಯವಾಗಿ ಹೊರಗಿನವರಿಗೂ ಮಾರಾಟ ಮಾಡುತ್ತಿದ್ದರು. ಹೀಗಾಗಿ ಸದಕಿ ತಯಾರಿಸುವ ಈ ದಂಪತಿಗಳು ಆಫೀಸಿನ ಗಳಿಕೆಗಿಂತ ಹೆಚ್ಚು ಗಳಿಸತೊಡಗಿದರು. ಬರಬರುತ್ತ ಅವರ ವೈಭವದ ಮೆರವಣಿಗೆ ಹೇಳತೀರದು. ಮನೆಗೆ ಬೇಕಬೇಕಾದ ಫ್ಯಾನ್ಸಿ ವಸ್ತುಗಳೆಲ್ಲ ಬಂದು ಬಿದ್ದವು. ಅವಳು ಒಳ್ಳೇ ಕಾರು ಇಟ್ಟುಕೊಂಡು ಹಣ ಎಣಿಸತೊಡಗಿದಳು, ಯಾವುದೇ ಅನ್ಯಾಯ ಎಷ್ಟು ದಿವಸ ಅಂತಾ ಬಚ್ಚಿಡಲಾಗುತ್ತದೆ?
ಎಲ್ಲರಿಗೂ ಅವರವರದೇ ಅದ ವೈರಿಗಳಿರುವಂತೆ ಇವರಿಗೂ ಇದ್ದಿರಬಹುದು. ಅದ್ಹೇಗೋ ಪೋಲಿಸಿನವರಿಗೆ ಗೊತ್ತಾಯ್ತೋ ಇದ್ದಕ್ಕಿದ್ದಂತೆ ಅವನ ಮನೆಗೆ ನುಗ್ಗಿ ದಾಳಿ ಮಾಡಿ ನೂರಾರು ಬಾಟಲಿಗಳ ಸದಕಿ ವಶಪಡಿಸಿಕೊಂಡು ಅವನನ್ನು ಜೈಲಿಗೆ ಎಳೆದೊಯ್ದದರು. ಅವಳನ್ನೂ – ಮಗನನ್ನು ತಕ್ಷಣ ದೇಶದಿಂದ ಹೊರದಬ್ಬಿದರು. ಅವನು 5-6 ತಿಂಗಳು ಜೈಲಿನಲ್ಲಿ ಕಳೆದ. ಅವನ ಸ್ನೇಹಿತರಲ್ಲ ಜರ್ಮನ್ ದೂತವಾಸ ಸಂಪರ್ಕಿಸಿ ಆದ ಹೇಳಿ ಪರಿಹಾರ ಕೇಳಿಕೊಂಡರು. ಬಹಳ ಪ್ರಯತ್ನಿಸಿದ ನಂತರ ಒಂದೂವರೆ ಲಕ್ಷ ರೂಪಾಯಿಗಳನ್ನು ದಂಡ ಅವನ ಸ್ನೇಹಿತರು ಅವನ ಸಾಮಾನುಗಳಲ್ಲ ಮಾರಿಬಿಟ್ಟು ಬಿಡುಗಡೆ ಮಾಡಿಸಿ ತಕ್ಷಣ ಸೌದಿಯಿಂದ ಹೊರಗೆ ಹಾಕಿದರೆಂದು ಕೇಳಿದವು. ಸ್ಥಳೀಯ ಸೌದಿ ಈ ತರಹ ಏನಾದರೂ ಮಾಡಿದ್ದರೆ ಒಂದೇ ವಾರದಲ್ಲಿ (ಇಲ್ಲಿ ಕಾಯ್ದೆ ಕಾನೂನುಗಳೆಂದು ಕೋರ್ಟುಗಳಿಲ್ಲ) ಸಾರ್ವಜನಿಕವಾಗಿ ಅವನಿಗೆ ಶಿಕ್ಷೆ  ಕೊಡುತ್ತಿದ್ದರು. ಏನೋ ಹೇಳುತ್ತ ಎಲ್ಲಿಯೋ ಬಂದುಬಿಟ್ಟೆ.

ಮತ್ತೆ ಸಮುದ್ರಕ್ಕೆ ಬರೋಣ : ಸಮುದ್ರ ವಾತಾವರಣವೆಲ್ಲ ಪ್ರಶಾಂತವಾಗಿ ರುವರಿತೆಯೇ ಮನಸ್ಸಿನ ಉತ್ಸುಕತೆ ಹೆಚ್ಚಾಗುತ್ತದೆ. ನಮ್ಮ ಮಕ್ಕಳಿಗಂತೂ ಖುಷಿಯೋ ಖುಷಿ. ಪ್ರತಿ ಸಲವೂ ಮೊದಲಿನಂತೆಯೇ ಕಾತುರ ಅವರಿಗೆ. ಎಂದೂ ನೋಡಿಲ್ಲ; ಸಮುದ್ರಕ್ಕೆ ಇಳಿದಿಲ್ಲ ಅನ್ನೊತರಹ ಮಾಡುತ್ತಾರೆ. ಈ ಕೆಂಪು ಕಡಲಿನ ವಿಚಾರ ಒಂದಷ್ಟು ಇಲ್ಲಿಯೇ ಹೇಳುತ್ತೇನೆ.

ಕೆಂಪು ಸಮುದ್ರವನ್ನು ಅರಬ್ಬಿಯಲ್ಲಿ ‘ಅಲ್- ಬಹ್ರ- ಅಲ್- ಅಹ್ಮದ್’ ಎನ್ನುತ್ತಾರೆ. ಇದರ ಒಟ್ಟು ವಿಸ್ತಾರ 4,38,000 ಚ.ಕಿ.ಮೀ ಅಡಿ ಹೆಚ್ಚು.

ಅಗಲ 190 ಮೈಲು ಅಥವಾ ಸುಮಾರು 300 ಕಿ.ಮೀ. ಈ ಸಮುದ್ರದ ಪೂರ್ವದಲ್ಲಿ ಸೌದಿ ಅರೇಬಿಯಾ ಮತ್ತು ಯಮನ್ ದೇಶಗಳಿವೆ. ಪಶ್ಚಿಮಕ್ಕೆ ಈಜಿಪ್ಡ್, ಸೂಡಾನ್, ಮತ್ತು ಇಥಿಯೋಪಿಯಾ ದೇಶಗಳಿವೆ.

ಈ ಸಮುದ್ರಕ್ಕೆ ನದಿಗಳಿಂದ ನೀರು ಬರುವುದಿಲ್ಲ. ಮರುಭೂಮಿಗಳೇ ಇರುವುದರಿಂದ ದೊರೆಯುವ ಮಳೆ ನೀರು ಕೊಡ ಕಡಿಮೆ. ಅದರೆ ಈ ಸಮುದ್ರದಿಂದ ವರ್ಷಕ್ಕೆ ಎರಡು ಸಾವಿರ ಮಿ.ಮೀ. ನಷ್ಟು ನೀರು ಆವಿಯಾಗುತ್ತದೆ. ಆದರೆ ಇದು ಏಡನ್ ಕೊಲ್ಲಿಯಿಂದ ಬರುವ ಬಾಬ್ ಅಲ್ ಮಾಂದೇಬ್ ಜಲಸಂಧಿಯಿಂದ ಬಂದು ಸೇರುವ ನೀರಿನಿಂದ ಭರ್ತಿ ಮಾಡಲ್ಪಡುತ್ತದೆ.

ಈ ಸಮುದ್ರದಲ್ಲಿ ಪೆಟ್ರೋಲಿಯಂ ದಾಸ್ತಾನು, ಉಪ್ಪು, ಜಿಪ್ಸಂ ಡೋಲ್ ಮೈಟ್‌ನಂತಹ ವಸ್ತುಗಳು ಹೆಚ್ಚು  ಪ್ರಮಾಣದಲ್ಲಿರುವುದು ಪತ್ತೆಯಾಗಿದೆ ಎನ್ನುತ್ತಾರೆ ವಿಜ್ಞಾನಿಗಳು.

ನಮ್ಮ ಜೆಡ್ಡಾಕ್ಕೆ ಸಮೀಪವಾಗಿರುವ ಈ ಸಮುದ್ರದಂಡೆ ಅಷ್ಟೇನೊ ಸ್ವಚ್ಛ ವಾದುದಲ್ಲ. ನೋಡಿದತ್ತೆಲ್ಲ ಕಸ ಹೆಚ್ಚು. ಸಮುದ್ರದಲ್ಲಿ ಬೆಳೆದ ಕೆಲವು ಸಸ್ಯವರ್ಗಗಳು ಕೊಳೆತು ದಂಡೆಗೆ ಬಿದ್ದಿರುತ್ತವೆ. ಅದಕ್ಕಿಂತಲೂ ಹೆಚ್ಚಾಗಿ, ಜನರು ಕುಡಿದೊಗೆದ ಆಹಾರ, ಪಾನೀಯಗಳ ಕ್ಯಾನ್ ಹೆಚ್ಚಿರುತ್ತವೆ. ಇತ್ತೀಚಿಗೆ ಜನ ಹೀಗೆ ಮಾಡುತ್ತಿದ್ದಾರೆ. 5-6 ವರ್ಷಗಳ ಮೊದಲೆಲ್ಲ ಕೆಲವೊಂದು ಸ್ಥಳಗಳಿಗೆ ಹೋಗಲಿಕ್ಕೆ ಜನ ಕೂಡಾ ಹೆದರುತ್ತಿದ್ದರು. ಅಂತಹ ಒಂದೆರಡು ಸ್ಥಳಗಳಿಗೆ ನಾವೂ ಹೋಗಿ ಸುಂದರವಾದ, ಸಿಂಪೆಗಳು, ಕವಡಿಗಳು ಸಾಕಷ್ಟು ಸಂಗ್ರಹಿಸಿದ್ದೇವೆ. ಒಂದು ಸಲ ನರಿಯಂತಹ ಕೆಟ್ಟ ನಾಯಿಗಳು ಸುತ್ತೆಲ್ಲ ಒಂದೇ ಸಮನೆ ಒದರೆ ತೊಡಗಿದಾಗ ಸುತ್ತ ಯಾರೂ ಇರಲಿಲ್ಲ ಹೆದರಿಕೆಯಾಗಿ ಕಾರಿನಲ್ಲಿ ಸುಮ್ಮನೇ ಎಷ್ಟೋ ಹೊತ್ತು ಕುಳಿತಿದ್ದೆವು.

ನಾವು ಸಾಮಾನ್ಯವಾಗಿ ಹೋಗುವ ಬೀಚಿನಲ್ಲಿ ಸುಮಾರು ಅರ್ಧ ಕಿ.ಮಿ.ಗಳಷ್ಟು ದೂರ ನೀರು ಒಂದೇ ಸಮನಾಗಿ ಇದೆ. ಇಲ್ಲಿ ತೆರೆಗಳು ಬರುವದಾಗಲೀ, ಕಾಲು ಕೆಳಗೆ ಉಸುಕು ಜರಿಯುವದೆಂದಾಗಲೀ ಇಲ್ಲವೇ ಇಲ್ಲ. ಮೊಳಕಾಲಿ- ನಿಂದ ಭುಜದವರೆಗೆ ನೀರು, ಸ್ವಲ್ಪ ಆಚೆಗೆ ಹೋದರೆ ಒಬ್ಬ ಧಾಂಡಿಗ ಮನುಷ್ಯನ ತಲೆಮುಟ್ಟುವಷ್ಟು ಆಳ ನೀರು ಎಂದು ಹೇಳಬಹುದು. ಈಜುಕೊಳಹೊಕ್ಕ ಅನುಭವ. ಯಾವುದೇ ನೀರು ಪ್ರಾಣಿಗಳಿಗೆ ಹೆದರದೆ  ನಿರಾತಂಕವಾಗಿ ಈಚಾಡಲು ಅನುಕೂಲ ಇದೆ. ಮುಳುಗುವ ಅಥವಾ ತೆರೆ ಎಳೆದುಕೊಂಡು ಹೋದೀತೆನ್ನುವ ಭಯ ಇಲ್ಲ.

ನಮಗೆಲ್ಲ ಸ್ನೋರ್ಕ್‌ಲಿಂಗ್ ಮಾಡುವದೆಂದರೆ ಬಹಳ ಖುಷಿ. ಕೇವಲ ಈಜಾಡಿ ನೀರೋಂದಿಷ್ಟು ಗೊಜ್ಜಾಡಿಯೋ ಅಥವಾ ದಬ್ ದಬ್ ನೀರು ಹೊಡೆದು ಮಜಮಾಡು ವದಕ್ಕಿಂತ ನೀರೋಳಗಿನ ಅದ್ಭುತ ಪ್ರಪಂಚ ನೋಡುವಲ್ಲಿ ಹೆಚ್ಚು ಖುಷಿ. ಸ್ನೋರ್ಕ್‌ಲ್ ಅಂದರೆ ಒಂದು ಉದ್ದಾದ (35-40 ಸೆಂಟಮೀಟರ್‌ಗಳಷ್ಟು) ಪ್ಲಾಸ್ಟಿಕ್ ನಳಿಕೆ. ಅದರ ಒಂದು ಕೊನೆ ತೆರೆದಿದ್ದು ಮತ್ತೊಂದು ಕೊನೆಗೆ ಒಳ್ಳೆಯ ರಬ್ಬರಿನ ಅಗಲವಾದ ತೋಟಿ ಇರುವದು. ಈ ತೋಟಿಗೆ ಎರಡು ಸಣ್ಣ ರಬ್ಬರಿನವೇ ಕುಕ್ಕೆಗಳಿರುತ್ತವೆ. ಈ ಕೊಕ್ಕೆಗಳನ್ನು ದವಡಿಹಲ್ಲುಗಳ ಸಮೀಪ ಕಚ್ಚಿಹಿಡಿದು ರಬ್ಬರಿನ ಅಗಲವಾದ ತೋಟಿ
ಯನ್ನು ತುಟಿಗೆ ಹೊಂದುವಂತೆ ಸರಿಪಡಿಸಿಕೊಳ್ಳಬೇಕು. ನಳಿಕೆ ತಲೆಯಮೇಲೆ ಹೋಗುವುದು ಬಾಯಿಯೊಳಗೆ ನೀರು ಹೋಗದಂತೆ ಎಚ್ಚರಿಕೆ ಇಡಬೇಕಾಗುವದು. ಇದರ ಜೊತೆಗೆಯೇ ಕಣ್ಣೊಳಗೆ ನೀರು ಹೋಗದಂತೆ ನೀರಿನೊಳಗೆ ಉಪಯೋಗಿಸುವ ಕನ್ನಡಕ ಹಾಕಿ ಕೊಳ್ಳಬೇಕು. ಇದು ಸ್ವಲ್ಪ ದಪ್ಪನಾದ ಭೂತಗನ್ನಡಿ ಗಾಜಿನಿಂದ ಮಾಡಿದ್ದಾಗಿ- ರುತ್ತದೆ. ಅದು ಮೂಗು ಕೂಡಾ ಪೂರ್ತಿ ಮುಚ್ಚಿಬಿಡುವದು. ಅಂದರೆ ಕಣ್ಣು-ಮೂಗಿಗೆ ನೀರು ತಗಲದಂತೆ ಸುತ್ತೆಲ್ಲ ರಬ್ಬರಿನಿಂದ ಬಿಗಿ ಇರುವದು. ಎರಡೂ ಕಣ್ಣಿಗೆ ಅಗಲವಾದ ಒಲವೇ ಕನ್ನಡಕವಿದ್ದು ಮೂಗಿನವರೆಗೂ ವಿಸ್ತರಿಸಿರುತ್ತದೆ.
ಸರಿಯಾಗಿ ಹೊಂದಿಸಿಕೊಂಡು ನೀರೋಳಗೆ ಸಾವಕಾಶವಾಗಿ ಮುಳುಗಬೇಕು. ಮೇಲಿನಿಂದ ನೀರು ನಳಿಕೆಯೊಳಗೆ ಹೋಗದಂತೆ ಹುಷಾರಾಗಿರಬೇಕು. ಬಾಯಿಯಿಂದ ಉಸಿರಾಡಿಸಲು ಈ ನಳಿಕೆ ಉಪಯೋಗ. ಈ ತರಹ  ಸಿರಾಡುವಿಕೆ ರೂಥಿಯಾಗುವವರೆಗೆ ಸ್ವಲ್ಪ ತೊಂದರೆ ಒಂದೆರಡು ಸಲ ಪ್ರಯತ್ನಿಸಿದರೆ ಅತಿ ಸರಳ.

ಭುಜದೆತ್ತರದ ನೀರಿನಲ್ಲಿ ಮಕ್ಕಳು ಸ್ನೋರ್‌ಕಲ್ ಬಳಿಸಿ ಖುಷಿಪಡುತ್ತಾರೆ. ನೀರೋಳಗೆ ಕಾಣುವ ಬಣ್ಣ ಬಣ್ಣದ ಮೀನುಗಳು-ಸಿಂಪೆ-ಇತರ ಕ್ರಿಮಿಕೀಟಗಳು ಸ್ಪಷ್ಟವಾಗಿ ಕಾಣಿಸಿದಾಗ ಹುಡುಗರ ಆನಂದಕ್ಕೆ ಮಿತಿಯೇ ಇಲ್ಲ ಅಲ್ಲಿ ನೋಡು-ಇಲ್ಲಿ ನೋಡು ಎಂದು ನೀರಿನೊಳಗೆ ಮರೆತು ಬಾಯಿ ತೆಗೆದಾಗಾಗಲೀ ಅಥವಾ ಮೇಲೆ ನಳಿಕೆಯೊಳಗಿಂದ
ನೀರು ನುಗ್ಗಿ ಗಂಟಲಕ್ಕೇರಿದಾಗಾಗಲೀ ಹೆದರಿ ಗಡಬಡಿಸಿ ಮೇಲೆದ್ದರೂ ಮತ್ತೆ ಸುಧಾರಿಸಿಕೊಂಡು ಸಾಹಸ ಮಾಡುತ್ತಾರೆ.

ನಾನು ಈಜು ಕಲೆತದ್ದು ಇಲ್ಲಿಯೇ. ಈ ಕೆಂಪು ಕಡಲಿನೊಡಲಿನಲ್ಲಿ. ಮೊದಲು ಸಮುದ್ರ, ಹೋಗಲಿ ಕೇವಲ ಸಣ್ಣ ಹಳ್ಳ-ನದಿಗಳಲ್ಲಿ ಕಾಲಿಡಲೂ ಭಯವಾಗುತ್ತಿತ್ತು. ಕಾಲಿಟ್ಟರೆ ಎಲ್ಲಿ ಬಿದ್ದೋ ಅಥವಾ ತೇಲಿಯೋ ಹೋಗೇ ಬಿಡುತ್ತೇನೆನಿಸುತ್ತಿತ್ತು. ಹಾಗೆ ಇಲ್ಲಿಯೂ ಸಾಕಷ್ಟು ಹೆದರಿಕೆಯಾಗುತ್ತಿತ್ತು. ಸಮುದ್ರಕ್ಕಿಳಿಯುವದಿಲ್ಲವೆಂದು ನಾನು,
‘ಇಂತಹ ಒಳ್ಳೇ ಅವಕಾಶ ಕಳೆದುಕೊಳ್ಳುತ್ತೀ’ ಎಂದು ಗುತ್ತಿಯವರು. ಹೇಳುವುದು  ದಿನ ನಡೆಯಿತು. ಇವರಿಗೆ ಕೆಲವೊಂದು ವಿಷಯಗಳಲ್ಲಿ ಬಹಳ ತಾಳ್ಮೆ ಇದೆ. ಸಮುದ್ರ ಜೀವಿಗಳ ಪರಿಚಯ (Coral ಹವಳ Reef-ದಿಣ್ಣೆಗಳು) ಸ್ನೋರ್ಕ್‌ಲಿಂಗ್‌ದಿಂದ ನೋಡುವ ಖುಷಿ – ಈಜುವದರಿಂದ ಒಳ್ಳೆಯ ಆರೋಗ್ಯ – ಆಕಸ್ಮಿಕ ಎಲ್ಲೊ ನೀರಿನಲ್ಲಿ
ಮುಳುಗಿದರೆ ಈಜಿನಿಂದಾಗುವ ಪ್ರಯೋಜನ – ಮೇಲಾಗಿ ಹವಳ ದಿಣ್ಣೆ ಇರುವ ಸುಂದರ ಸಮುದ್ರ ನಮ್ಮ ಇಂಡಿಯಾದಲ್ಲಿಲ್ಲ – ಒಟ್ಟಿಗೆ ಇದೆಲ್ಲ ಒಳ್ಳೇ ಅವಕಾಶ ಎಂದು ನಿಧಾನವಾಗಿ ಮನವರಿಕೆಯಾಗುವಂತೆ ಹೇಳಿ ಎಷ್ಟೋ ದಿನಗಳ ನಂತರ ಸಮುದ್ರಕ್ಕೆ ಇಳಿಸಿಯೇಬಿಟ್ಟರು. ನಾನು ಸಾಕಷ್ಟು ಸಲ ಹೆದರಿ ಚೀರಾಡಿದರೂ ಕೊಸರಿಕೊಂಡು
ದಂಡೆಗೆ ಬರುತ್ತಿದ್ದರೂ ಬಿಡಲಿಲ್ಲ. ಪ್ರತಿಯೊಂದನ್ನು ಹೇಳುತ್ತ ಸಹಾಯಮಾಡುತ್ತ ಈಜು ಕಲಿಸಿದರು. ನಾನು ಕಲೆತುಕೊಳ್ಳುವವರೆಗೆ ಹುಡುಗರಿಗೂ ಇವರಿಗೂ ಬಹಳೇ ಮೋಜಾಯ್ತು. ಮಕ್ಕಳು ಕೇವಲ 5-6 ನೆಯ ಪ್ರಯತ್ನಕ್ಕೇ ಈಜು ಕಲೆತು ಕುಶಲ ರಾದರು. ನಾನು ಸುಮಾರು 15-20 ಬಾರಿ ಪ್ರತಿ ವಾರಕ್ಕೊಮ್ಮೆ ಪ್ರಯತ್ನಿಸಿ Emergency
ಗಾದರೂ ಇರಲೆಂದು ಈಜು ಕಲಿತೆ. ನಿಜವಾದ ಸಮುದ್ರ ಸಂಪತ್ತು, ಕೋರಲ್, ಬಣ್ಣ ಬಣ್ಣದ ಮೀನುಗಳು ಜೊತೆಗೆ
ಉಳಿದ ಪ್ರಾಣಿ ಪ್ರಪಂಚ ನೋಡಬೇಕಾದರೆ ಸುಮಾರು ಅರ್ಧ ಕಿ.ಮೀ. ಸಮುದ್ರದಲ್ಲಿ ನಡೆದುಕೊಂಡು ಮುಂದೆ ಹೋಗಬೇಕು. ಇಲ್ಲಿಯೇ ಹವಳದ ದಿಣ್ಣೆ (Reefs) ಇದೆ. ಹವಳ ದಿಣ್ಣೆ (Coral Reefs ) ಎಂದರೆ ಆಗಲೇ ಕಲ್ಪನೆಗೆ ಬಂದಿರಬಹುದು ಸಮುದ್ರದಲ್ಲಿನ ಬಣ್ಣ ಬಣ್ಣಗಳ ಕಲ್ಲು ಬಂಡೆಗಳನ್ನು ಹೊಂದಿದ ಗೋಡೆಯೆಂದು, ಇದು ಈ ಕೆಂಪು ಸಮುದ್ರದೊಳಗೆ ದಂಡಗುಂಟ ಇದೆ. ಕೈಕಾಲು ತರಚುವ ಚೂಪು ಕಲ್ಲುಗಳು, ಒಡಒಡಕು ಬಣ್ಣದ ಕಲ್ಲುಗಳಿಂದ ಕೂಡಿದ ಈ ದಿಣ್ಣೆಯ ಹತ್ತಿರ ಮೊದಲು ಹೋಗಿ ನಿಲ್ಲಬೇಕು. ಅಲ್ಲಿ ನಿಜವಾದ ಸಮುದ್ರದ ತೆರೆಗಳು ಹೊಡೆಯಲಾರಂಭಿಸುವವು.
ಮಕ್ಕಳನ್ನೂ – ಈಜು ಬರದವರನ್ನೂ ಮರೆತೂ ಕರೆದುಕೊಂಡು ಬರಬಾರದಂತಹ ಸ್ಥಳ.

ಹವಳ ದಿಣ್ಣೆಯ ಪರಿಚಯವೇ ಇಲ್ಲದೆ ಹಾಗೇ ಮುಂದೆ ನಡೆಯುತ್ತಾ ಇನ್ನೂ ಹೋದದ್ದೇ ಆದರೆ ಪಾತಾಳ ಕಾಣುತ್ತೇವಷ್ಟೇ. ಅಷ್ಟರವರೆಗೆ ಜಲಚರಗಳು ಬಿಟ್ಟರಲ್ಲವೆ? ಉದಾಹರಣೆಗೆ ಹೇಳಬೇಕೆಂದರೆ ಗುಡ್ಡದ ತುದಿಯ ಮೇಲೆ ನೀತಿದ್ದೀರಿ ಈ ರೀಫ್‌ದ ಮೇಲೆ ನಿಂತಂತೆ. ಆಕಸ್ಮಿಕವಾಗಿ ನೀವು ಹಚ್ಚು ಸಾಹಸ ಮಾಡಲಿಕ್ಕೋ, ಅಥವಾ ಮರೆತೋ
ನೀವು ಮುಂದೆ ಹೆಜ್ಜೆ ಇಟ್ಟರೆ ಆಗುವ ಅನುಭವವೇ ಇಲ್ಲಿಯೂ. ಈಜು ಬಂದವರು ಸುಧಾರಿಸಿಕೊಳ್ಳುವರಷ್ಟೆ.

ಈ ರೀಫ್‌ಗೆ ಹೊಂದಿಕೊಂಡಿರುವ ಕೋರಲ್‌ಗಳನ್ನು ನೋಡುವದೆಂದರೆ ನನಗೆ ಅತಿ ಸಂಭ್ರಮ. ಇವನ್ನು ನೋಡಲು ಹೋಗಬೇಕಾದರೆ ಮೊದಲು ಕೆಲವು ವಿಷಯ ಅವಶ್ಯಕವಾಗಿ ನೆನಪಿಟ್ಟುಕೊಳ್ಳಬೇಕು. ಉದ್ದನೆಯ ಕಾಲುಚೀಲ ಹಾಕಿಕೊಂಡು ಕ್ಯಾನವಾಸ್ ಷೂಗಳನ್ನು ಭದ್ರವಾಗಿ ಬಿಗಿದುಕೊಳ್ಳಬೇಕು. ಕೈಗೆ ಕೈಕವಚ ಮತ್ತು ಮೈಗೆ ತಕ್ಕ ಮಟ್ಟಿಗೆ
ಬಿಗಿಯಾದ ಬಟ್ಟೆ ಬೇಕು. ಕಾರಣ -ಕೋರಲ್‌ಗಳು ಸುಂದರವಾಗಿದ್ದು ಚೂಪಾಗಿ ಮುಳ್ಳಿನಂತೆ ಇರುತ್ತವೆ. ಕೈಕಾಲು- ಗಳಿಗೆ ಕೊರೆಯುತ್ತವೆ. ಸಡಿಲು ಉಡುಗೆಗಳಿದ್ದರೆ ಸಿಕ್ಕು ಹಾಕಿಕೊಂಡು ಈಜುವಾಗ ಮೆಲೆ ಕೈಗೆ ಕೋರಲ್‌ಗಳು ಕೊರೆದರೆ ಉರಿಯುವದು, ಇದರ ಜೊತೆಗೆ ಉಪ್ಪಿನ ನೀರು ಸೇರಿದರಂತೂ ಒದ್ದಾಡುವಂತಾಗುತ್ತದೆ. ಒಂದು ಸಣ್ಣ
ಸುತ್ತಿಗೆ (ಹ್ಯಾಮರ್) ಜೊತೆಗೆ ಗಟ್ಟಿಮುಟ್ಬಾದ ಸಣ್ಣ ಕೈ ಚೀಲ ಒಯ್ದರಂತೂ ಬಹಳ ಸುಂದರವೆನಿಸಿದ ಕೊರಲ್‌ಗಳನ್ನು ಒಡೆದುಕೊಳ್ಳಲಿಕ್ಕೆ ಬರುತ್ತದೆ. ಸ್ನೊರ್ಕಲ್ಸ್  ಮರೆಯದೇ ಇರಬೇಕು. ಡೈವಿಂಗ್ (ನೀರಲ್ಲಿ ಮುಳುಗುವವರು) ಅಕ್ಲಿಜನ್ ಸಿಲೆಂಡರ್ ಬೆನ್ನಿಗೆ ಕಟ್ಟಿಕೊಂಡಿರಬೇಕು.

ಅಳವಾದ ಸಮುದ್ರದಲ್ಲಿ ಸೋರ್ಕಲಿಂಗ್ ಅಥವಾ ಡೈವಿಂಗ್ ಮಾಡುವದು ಒಂದು ಮರೆಯಲಾರದ ಅನುಭವವೇ. ಸಮುದ್ರದೊಳಗ ಮುಳುಗಿದರೆ ಅದ್ಭುತ ಲೋಕಕ್ಕೆ ಹೋದಂತಹ ಅನುಭವ. ಅಳವಾದ ವಿಶಾಲವಾದ ಸುತ್ತೆಲ್ಲ ವ್ಯೋಮ ವಾಗಿರುವ ನೀಲಿ ನೀರು. ಅದರೋಳಗಿನ ಪ್ರಾಣಿ-ಸಸ್ಯ ಪ್ರಪಂಚ ಹೇಳಲಾರದಷ್ಟು ಅಮೋಫ. ರೀಪ್‌ದ ಗೋಡೆಗುಂಟ ಈಜುತ್ತ ಹೊಳೆದರೆ ನೂರಾರು-ಸಾವಿರಾರು ಜಾತಿಯ ಬಣ್ಣದ ಮೀನುಗಳು ಓಡಾಡುತ್ತಿರುತ್ತವೆ. ಇವು ಸಾಧಾ ಬಣ್ಣದವುಗಳಲ್ಲ; ಅಳತೆಯಲ್ಲೂ ಸಮವಲ್ಲ. ಪ್ರತಿಯೊಂದು ಗುಂಪೂ ಬೇರೆ ಬೇರೆಯೇ ಅದನ್ನು ನಾನೊಮ್ಮ ಹೀಗೆ ಕವನಿಸಿದ್ದೆ:

ಎಷ್ಟು ಬಣ್ಣ ಬೆಡಗು
ಕಡಲೆ ನಿನ್ನ ಒಡಲಲಿ
ಹರೆಯ ತರುವ ಕನಸಿನಂಥ
ಸೊಗಸು ನಿನ್ನ ಮಡಿಲಲಿ.

ಹಳದಿ, ಕೆಂಪು, ನೀಲಿ, ಗುಲಾಬಿ, ಹಸಿರು ಬಣ್ಣದ ಮೀನುಗಳುಗಳಷ್ಟೇ ಅಲ್ಲ, ಕಪ್ಪು, ಹಳದಿ ಬಣ್ಣದ ಸ್ವಲ್ಪ ಉದ್ದ ಬಾಯಿಯ ಮೀನುಗಳು; ಪಾತರಗಿತ್ತಿಯಂತೆ ಮೈಮೇಲೆ ಚಿಕ್ಕೆಗಳಿರುವ ಮೀನುಗಳು, ಗಣಪತಿ ಕಿವಿಯಂತೆ ಕಿವಿರುಗಳಿರುವ ಮೀನುಗಳು, ಕಣ್ಣಿನ ಸುತ್ತೆಲ್ಲ ದಪ್ಪೆ ಕಾಡಿಗೆ ಇದ್ದು ಗೂಳಿಗಣ್ಣು ಮಾಡುತ್ತ ಅಲು ಗಾಡದೆ ಒಂದೇ ಸಮನೆ ಕೆಕ್ಕರಿಸಿ ನೋಡುವ ದಪ್ಪ ಮೀನುಗಳು, ಪೂರ್ತಿ ಬುರ್ಕ ಹಾಕಿಕೊಂಡಂತೆ ಕೋರಲ್ ಒಳಗಡೆ ಓಡುವ ಕರಿಯ ಮೀನುಗಳು.

ಕೆಲವೊಂದು ಮೀನುಗಳಂತೂ ಪ್ಯಾರಿಸ್ಸಿನ ಮಾಡೆಲ್‌ಗಳ ತರಹ ತೆಳುವಾದ ಅಕರ್ಷಕ ಬಟ್ಟೆ ಹಾಕಿಕೊಂಡು ದಪ್ಲಾಗಿ ಲಿಪ್ಸ್ಟಿಕ್ ಇಟ್ಟುಕೊಂಡು ಅತ್ತಿತ್ತ ನೋಡುತ್ತ ಕಣ್ಣು ಹೊಡಯುತ್ತೆ ಬಳುಕಾಡುತ್ತ ಹೋಗುತ್ತಿರುತ್ತವೆ. ಈ ಮೀನುಗಳು ಒಳ್ಳೆಯ ಆಕರ್ಷಕ ಬಣ್ಣ ಹೊಂದಿ ಚಂಗ ಚಂಗನೆ ಚಲಿಸುವವು. ಜೆಲ್ಲಿಫಿಷ್‌ಗಳಂತೂ ಒಂದೊಂದು ಸಮಯದಲ್ಲಿ ಬಹಳ ಹರಡಿಕೊಂಡಿರುತ್ತವೆ. ಸರಳವಾಗಿ ಅವನ್ನು ಕೈಯಿಂದ ಹಿಡಿಯಬಹುದು. ಆದರೆ ಇದು ಲೋಳೆಯಂತೆ ಕೈಗೆ ಅಂಟಿಕೊಳ್ಳುವದಲ್ಡದೆ ಮುಟ್ಟಿದರೆ ಮುನಿಯಂತೆ ಮುದುಡಿಕೊಂಡು ಬಿಡುವದು. ನಕ್ಷತ್ರ ಮೀನುಗಳೂ ಸಾಕಷ್ಟು ಎಲ್ಲ
ಮಾದರಿಗಳನ್ನು ಮನೆಗೊಯ್ದು ಅಕ್ವೇರಿಯರಿದಲ್ಲಿಡುವಾಸೆ. ಆದರೆ ಅದರ ಕೆಲಸ ಸಾಕಷ್ಟು. ಕಣ್ಣಿನಲ್ಲಿಯೇ ಕ್ಯಾಮರೀಕರಿಸಿಕೊಂಡು ಆಗಾಗ ನೆನೆಸುತ್ತ ಖುಷಿಪಡುವ ದೊಂದು ಸುಂದರ ಚಿತ್ರ. ತಲೆಯ ಮೇಲೆ, ನೀರು ಜಮಖಾನೆ ಜಾಡಿಸಿದರೆ ಆಗುವ ತೆರೆಗಳಂತಾದರೆ ಕಾಲ ಕೆಳಗೆ ಮೋಹಕ ಬಣ್ಣದ ಲೋಕದಲ್ಲಿ  ಇಳಿಯುತ್ತಿರುತ್ತೇವೆ.

ಬಣ್ಣದ ಮೀನುಗಳಷ್ಟೇ ಆಕರ್ಷಕವಾದವು ಹವಳಗಳು. ಸಮುದ್ರದ ಗೋಡೆ ಗುಂಟ ತೆಗ್ಗು ದಿನ್ನೆಗಳಿಗೆಲ್ಲ  ಬಳ್ಳಿಯಂತೆಯೋ ಕಂಟೆಯಂತೆಯೋ, ಸುಂದರ ಹೂ ಗೊಂಚಲುಗಳಂತೆಯೋ ನೂರಾರು ಬಗೆಯ ಹವಳಗಳು ಹೊಳೆಯುತ್ತವೆ. ಕೆಂಪು, ಗುಲಾಬಿ ಪಚ್ಚೆ ವರ್ಣದ ಕೊರರ್‌ಗಳು ಅಕರ್ಷಕವಾಗಿದ್ದು ಮುಳ್ಳಿನಂತಿರುತ್ತವೆ. ಗಡಬಿಡಿಸಿ
ಹಿಡಿಯಹೋದರೆ ಕೈ ಕೊರೆಯುವುದು. ಹವಳದ ಬಣ್ಣದಂತಿರುವ ಈ ಕೋರಲ್ ಗಳನ್ನು ಮೊದಲು ಬಹಳ  ಪ್ರಮಾಣದಲ್ಲಿ ಜನ ಕೊರೆದೊಯುತ್ತಿದ್ದರಂತೆ. ಹೀಗಾಗಿ ಎಷ್ಟೋ ಕಡೆಗೆ ಜನ ಒಡೆದೊಡೆದು ಮೂಲ ಸೌಂದರ್ಯಕ್ಕೆ ಧಕ್ಕೆ ಮಾಡಿದ್ದಾರೆಂದು ಈಗ ಸೌದಿ ಸರ್ಕಾರದವರು ಕೊರಲ್ ಕೊರೆಯಲಿಕ್ಕೆ ನಿಷೇಧಿಸಿದ್ದಾರೆ. ಆದರೂ ಯಾರು ಎಷ್ಟು ಕಾವಲು ಮಾಡಲು ಸಾಧ್ಯ. ಈ ಕೋರಲ್ ನೋಡಲು ಹೋಗುವದು ಕಾಡಿನೊಳಗೆ ಹೊಕ್ಕಂತೆಯೇ. ಕಮಲದ ಎಲೆಗಳಂತೆ, ಬಟ್ಟಲಾಕೃತಿಯಂತೆ – ತಲೆಬುರುಡೆ ಗಳಂತೆ, ಎಲುಬಿನ ಹಂದರಗಳಂತೆ, ಒಣಗಿದ ಕಂಟೆಗಳಂತೆ ನೂರಾರು ಬಗೆಯ ವಿಚಿತ್ರ  ವಿಚಿತ್ರಾಕೃತಿಯ ಕೋರಲ್‌ಗಳು ಕಾಣಿಸುವವು. ಸಮುದ್ರ ಜೀವಿಗಳ ಉತ್ಪನ್ನಗಳೇ ಅವು.
ಅವಕ್ಕೆ ಜೀವ ಇದ್ದಾಗಲೇ- ಗಾಳಿಯಲ್ಲಿ ಅಲುಗಾಡಿದ ಗಿಡಬಳ್ಳಿಗಳಂತೆ ಇವು ನೀರಿನ ಅಲೆಗೆ ಹೊಯ್ಡಾಡುತ್ತಿರುತ್ತವೆ. ಅವುಗಳ ಆಯುಷ್ಯ ಮುಗಿದನಂತರ ಅಲ್ಲಿಯೇ ಗಟ್ಟಿಯಾಗಲು ಶುರುವಾಗುವವು.

ದಂಡೆಗುಂಟ ಸಮುದ್ರದಲ್ಲಿ ಬಣ್ಣ ಬಣ್ಣದ ಮೀನುಗಳು ಕೋರಲ್‌ಗಳು ನೀಡುವ ಖುಷಿ ಒಂದು ಬಗೆಗಯದಾದರೆ ಅಳ ಸಮುದ್ರದಲ್ಲಿ ಕಾಣುವ ನೋಟ ಎದೆ ನಡಗಿಸುವಂತಹುದು. ದೊಡ್ಡ ದೊಡ್ಡ ಮೀನುಗಳೇನಾದರೂ ಸುತ್ತು ಮುತ್ತು
ಕಾಣಿಸಿದರೆ ಜೀವ ನೆತ್ತಿಗೆ ಬಂದಂತಹ ಅನುಭವ. ದಂಡೆಗುಂಟ ಇರುವ ಈ ರೀಫ್ ದಲ್ಲಿಯೇ ಎಷ್ಟೋ ಆಳವಾದ ಮಡುಗಳಿವೆ. ಸುಮಾರು 30-40 ಫೂಟುಗಳಷ್ಟಾಠಾದರೂ ಇರಬಹುದು. ಶಾಂತವಾಗಿ ನಿಂತ ನೀಲಿ ನೀರು, ಬಣ್ಣದ ಕಲ್ಲು ಬಂಡೆಗಳು, ಅವುಗಳೊಳಗೆ ಮನೆ ಮಾಡಿಕೊಂಡು ಅಲ್ಲಿ ತಮ್ಮ ಸಾಮ್ರಾಜ್ಯ ಬೆಳೆಸಿ ಮೆರೆಯುತ್ತಿರುವ ತಲೆದಿಂಬು
ಗಾತ್ರದ ಮೀನುಗಳು ಭಯಾನಕವಾದವು.

ಒಮ್ಶೆ ನಾವಿಬ್ಬರೂ ಅ ಪ್ರಶಾಂತವಾದ ತಿಳಿನೀಲಿ ನೀರು ನೋಡಿ ಇಳಿದು ಈಚಾಡತೊಡಗಿದೆವು. ಮೊದಲು ಅಲ್ಲಿ ಅಂತಹ ಮೀನುಗಳೇನಿರಲಿಕ್ಕಿಲ್ಲ ಎಂದು Snorkle ಗ್ಲಾಸ್‌ನಿಂದ ನೋಡಿ ಗೊತ್ತು ಮಾಡಿಕೊಂಡಾಗಿತ್ತು. ಆದರೆ ನಾವು ಇಳಿದು ಈಜಾಡು ತೊಡಗಿದಂತೆ ಅವುಗಳ ಮೌನ ಲೋಕಕ್ಕೆ ಭಂಗವಾಗಿರಬೇಕು. ಕಲ್ಲು ಬಂಡೆಗಳೊಳಗಿನ ದಪ್ಪ ದಪ್ಪ ಹಳದಿ, ಕೆಂಪು , ಕರಿಯ ಮೀನುಗಳು ಹೊರಬಿದ್ದು ಜೋರಾಗಿ ಸುತ್ತುಹೊಡೆಯಲಾರಲಭಿಸಿದವು. ಗಡಬಡಿಸಿ ಕಾಲು ಊರುವಂತಿಲ್ಲ. ಆಳವಾದ ಮಡು, ಅರ್ಧಹೋಗಿದ್ದಾಗಿತ್ತು. ಕನ್ನಡಕದೊಳಗಿಂದ ನೋಡಿದರೆ ಹೆದರಿಕೆ ಬರುವ ವಾತಾವರಣ. ಎಲ್ಲಾ ಕಡೆಯಿಂದಲೂ ಈಗೆಲ್ಲಿ ಆಕ್ರಮಣ ಮಾಡುವವೋ ಅನ್ನುವಂತಿವೆ. ಗುತ್ತಿ ಯವರಿಗೆ ಇವುಗಳ ಚಲನವಲನ ಗೊತ್ತಾಯ್ತು. ನೀರೋಳಗೆ ಕೈ ಮಾಡುತ್ತ ಮರಳಿ ವೇಗವಾಗಿ ನನ್ನ ಹಿಡಿದೆಳೆಯುತ್ತೆ ದಂಡೆಗೆ ಹೋದರು.
ಹೆದರಿಕೊಂಡು ರೀಫ್‌ದ ಮೇಲೆ ಬಂದು ನಿಲ್ಲಬೇಕಾದಷ್ಟರಲ್ಲಿಯೇ ನಾನೆರಡು ಸಲ ಜರೆದು ಬಿದ್ದು ನನ್ನ ಮೊಳಕಾಲು ಕೆತ್ತಿಹೋಗಿದ್ದವು. ಅದಾದ ನಂತರ ಅದರೋಳಗಿಳಿಯುವ ಸಾಹಸ ನಾನು ಎಂದೂ ಮಾಡಲಿಲ್ಲ. ಆದರೆ ಗುತ್ತಿಯವರು ಅವರ ಸ್ನೇಹಿತರು ಸಾಕಷ್ಟು ಸಲ ಇನ್ನೂ ಅಳ ಇರುವ ಮಡಗಳಲ್ಲಿಯೂ ಅಲ್ಲದೆ ಆಚೆಗೆ 20-25 ಮೀಟರುಗಳಷ್ಟು ದೂರ ಹೋಗಿ ಬರುತ್ತಿದ್ದರು. ಹೋಗಬೇಡಿರಿ ಎಂದು ನಾನು ಹೇಳಿದರೆ, ‘ನಾನೊಬ್ಬನೇ ಅಲ್ಲ, ಎಲ್ಲರ ಜೊತೆ ಹೋಗುತ್ತೇನೆ’ ಎಂದು ಇವರು. ಹೀಗಾಗಿ ಎಷ್ಟೋಸಲ ವಾದ, ಸೋಲು ನನಗೆ ಖಚಿತ. ಅಲ್ಲಿ ಹೋಗಿ ಬಂದು ರಸವತ್ತಾಗಿ ವರ್ಣಿಸುವಾಗ ನನಗೆ ಮತ್ತೆ ಹುರುಪು. ಆದರ ಜೊತೆ ಜೊತೆಯೇ ಹಿಂದಿನ ನೆನಪುಗಳ ಹೆದರಿಕೆ.

ಈಗ ಮಕ್ಕಳಿಗೆ ಅದನ್ನೆಲ್ಲ ಅನುಭವಿಸುವ ಆಸೆ. ಅವರನ್ನೆಲ್ಲಾ ಮೊದಲು ಮೊಳಕಾಲ ನೀರಿನಲ್ಲಿಯೆ. ಈಜು ಬರದ ಯಾರಾದರೂ ಸ್ನೇಹಿತರ ಶ್ರೀಮತಿಯವ ರೊಂದಿಗೆ ಬಿಟ್ಟು ನಾವು ಹೋಗುತ್ತಿದ್ದವು. ಮಕ್ಕಳಿಗೆ ಇವರು ನಾನು ದೂರ ಹೋಗುವ ಶಾರ್ಕ್ ನೋಡಿದೆ ಎಂದು ಹೇಳುತ್ತಾರೆ. ಅಂದ ಮೇಲೆ ಹುಡುಗರಿಗೂ ನೋಡುವ ಅಸೆ ಅಲ್ಲವೆ? ಈ ನಡುವೆ ನಾನು ಆ ಸಮುದ್ರ ರಾಕ್ಷಸನ ಕಥೆ ಯಾಕೆ ಹೇಳುತ್ತೀರಿ ಅನ್ನುತ್ತೇನೆ. ಹುಡುಗರಿಗೆ ಆ ರಾಕ್ಷಸನನ್ನು ನೋಡಿಯೇ ಬಿಡಬೇಕೆಂದಾಗುತ್ತದೆ.

ಆಕರ್ಷಕ ಕೋರಲ್‌ಗಳನ್ನು ನೋಡಿ ನಾವೂ ಸಾಕಷ್ಟು ತರುತ್ತಿದ್ದೆವು. ಅವುಗಳನ್ನು ಒಡೆದುಕೊಂಡು ಬರುವದು ಬಹಳ ಸರಳವಾದರೆ ಅವನ್ನು ಶುಚಿಗೊಳಿಸುವ ಕೆಲಸ ಅತಿಯಾದುದು. ಸಮುದ್ರದಿಂದ ಮೇಲೆತ್ತಿದಾಗ ಕೆಲವೊಂದು ಇನ್ನೂ ಹಸಿಹಸಿಯಾಗಿ ಇದ್ದು ಅವುಗಳನ್ನು ಮನೆಗೆ ತಂದು ನೇರವಾಗಿ ಶೋಕೇಸಿನಲ್ಲಿ ಇಡುವಂತಿಲ್ಲ. ಒಂದು ವಾರ ಹದಿನೈದು ದಿನ ಹಿತ್ತಲಲ್ಲಿ ಅಗಲವಾದ ಬಕೀಟ್‌ನಲ್ಲಿ ಕ್ಲೋರಿನ್ ಹಾಕಿ ನೀರು ತುಂಬಿ ಅದರಲ್ಲಿ ಕೋರಲ್‌ಗಳನ್ನು ಮುಳಿಗಿಸಿಡುತ್ತಿದ್ದೆ. ಬಿಳಿಯದಾಗಿದ್ದರೆ ಕ್ಲೋರಿನ್ನಲ್ಲಿ ಎದ್ದಿ ತೆಗೆಯುವದರಿಂದ ಶುಭ್ರವಾಗುತ್ತವೆ. ಆದರೆ ನೀರಿನಲ್ಲಿ ಪಚ್ಚೆ ಬಂಗಾರ – ನೀಲಿ ಯಂತೆ ಹೊಳೆಯುತ್ತಿದ್ದರೆ ಅವುಗಳಿಗೆ ಕ್ಲೋರಿನ್ ಹಾಕದೇ ಹಾಗೇ ಸಾಕಷ್ಟು ಸಲ ಬ್ರಷ್‌ನಿಂದ ತೊಳೆಯಬೇಕು. ಅದರೂ ಸಮುದ್ರದಲ್ಲಿದ್ದಷ್ಟು ಬಣ್ಣ, ಹೊರಗೆ ತೆಗೆದ ಮೇಲೆ ಆ ಎಣ್ಣೆಣ್ಣಿತನದ ಮಿರುಗು  ಉಳಿಯುವುದಿಲ್ಲ. ನಾವು ಪ್ರತಿಸಲ ಹೋದಾಗ ಇಂತಹ ಚೆಂದ ಚೆಂದಾದ ಕೋರಲ್‌ಗಳನ್ನು ಕೂಡಿಸಿ ಕೂಡಿಸಿ ನಮ್ಮ ಮನೆಯ ಕೈತೋಟದಲ್ಲಿಟ್ಟು ಸಿಂಗರಿಸಿದ್ದೆವು.

ಗುಲಾಬಿ ವರ್ಣದ ಹವಳಗಳಿಗೆ ಹೊರದೇಶದಲ್ಲಿ ಬಹಳ ಬೇಡಿಕೆ ಇದೆ. ಅಂಥವನ್ನೆಲ್ಲಾ ಸಂಗ್ರಿಸಿ ಮಶೀನರಿಗೆ ಹಾಕಿ ನುಣುಪಾಗಿ ಕೊರೆದು ಸುಂದರ ಸುಂದರ ಬಳೆ-ಸರ ಹಾಗೂ ಪ್ರದರ್ಶನ ವಸ್ತುಗಳನ್ನು ಮಾಡುತ್ತಾರೆ. ಅವಕ್ಕೆಲ್ಲ ಮತ್ತೆ ಎಣ್ಣೆ ಹಚ್ಚಿ ಮಿಂಚುವಂತೆ ಮಾಡಿರುವದರಿಂದ ಬೆಲೆಗಳು ಸಾಕಷ್ಟು ಪಟ್ಟು ಇರುತ್ತವೆ. ಇದೆಲ್ಲ ಕೆಲಸ ಬಹಳ ಸೂಕ್ಷ್ಮ ಕಳ್ಳಸಾಗಾಣಿಕೆಯೂ ಅಗುತ್ತದೆ.

ಸಮುದ್ರ ದಂಡೆಗುಂಟ ಕರಾವಳಿ ರಕ್ಷಣಾ ಪಡೆಯ ಬೋಟ್‌ಗಳು ರಾತ್ರಿ  ಹಗಲೂ ಕಾವಲು ಮಾಡುತ್ತಲೇ ಇರುತ್ತಾರೆ. ಕೇವಲ ಕೋರಲ್‌ಗಳಿಗಂತಲ್ಲ. ರಾತ್ರಿ ಬೋಟ್‌ಗಳ ಮುಖಾಂತರ ಜನ ನಿಷೇಧಿಸಿರುವ ಸಾಮಾನುಗಳೇನಾದರೂ
ಕಳ್ಳಸಾಗಾಣಿಕೆ ಮಾಡುತ್ತಾರೋ ಹೇಗೆ ಎಂದಾಗಲೀ, ರಾತ್ರಿ ಇಡೀ ಬಿಡಾರ ಹಾಕಿದ ಜನ ಇಂತಹ  ಕೆಲಸದಲ್ಲೇ- ನಾದರೂ ತೊಡಗಿರುವರೋ ಎಂದು ಪರೀಕ್ಷಿಸಲು. ಇಲ್ಲಿಂದ ಹದ್ರಾದ್ವೀಪ ಫರಸಾನ್ ತೀರಗಳು ಹತ್ತಿರಲ್ಲಿಯೇ ಇವೆ. ಜನ ಸ್ವತಃ ತಮ್ಮ ಬೋಟುಗಳ ಮೂಲಕ ಆ ದ್ವೀಪಗಳಿಗೆ ಹೋಗಿ ಇದಕ್ಕಿಂತಲೂ ಸುಂದರ ಇರುವ ಕೋರಲ್ ನೋಡುತ್ತಾರೆ.

ಜೆಡ್ಡಾಕ್ಕೆ ಸೋರ್ಕ್‌ಲಿಂಗ್, ಡೈನಿಂಗ್ ಮಾಡಲಿಕ್ಕೆ ಸುತ್ತ ಮುತ್ತಲಿನ ಊರು ಗಳಿಂದ ಜನ ವಾರಾಂತ್ಯಕ್ಕೆ ಬರುವದು. ರಿಯಾದ್‌ದಲ್ಲಿಯ ಡೈವಿಂಗ್ ಪ್ರೇಮಿಗಳು ವಿಮಾನ ಮೂಲಕ ಬರುವರು. ಅಷ್ಟೇ ಅಲ್ಲದೆ ದೂರದ ‘ಅಭಾ’ ‘ಬಹಾ’ ಗಳಿಂದಲೂ ಕೂಡಾ ಬಸ್ಸು ಮಾಡಿಕೊಂಡು ನೋಡಲು ಈಜಾಡಲು ಬರುವರು.

ನಿಜವಾಗಿಯೂ ಈ ಕೆಂಪು ಸಮುದ್ರ (ರೆಡ್ ಸೀ) ಸ್ಥೂಲವಾದ ಜಲ ಸಂಗ್ರಹಾಲಯವೇ ಎಂದು ಹೇಳಬಹುದು. ಸಮುದ್ರದಾಳದಲ್ಲಿ ಈಜಾಡುವವರಿಗೆ ಇದೊಂದು ಸ್ವರ್ಗವೆಂದರೂ ಮಾಯಾನಗರಿ ಎಂದರೂ ಅತಿಶಯೋಕ್ತಿ- ಯಾಗಲಿಕ್ಕಿಲ್ಲ. ಜಲಚರಗಳ ಬಣ್ಣಹೊಂದಾಣಿಕೆ ನಮ್ಮ ಊಹೆಗೊ ನಿಲುಕದಷ್ಟು ವಿಚಿತ್ರ.

ಅತೀ ಸಾಹಸಿ ಡೈವರ್ಸ್‌ಗಳು ರಾತ್ರಿ ಪ್ರಶಾಂತ ವಾತಾವರಣದಲ್ಲಿ ಅಕ್ಸಿಜನ್ ಸಿಲಿಂಡರ್‌ದೊಂದಿಗೆ ಸಮುದ್ರದಾಳಕ್ಕೆ ಇಳಿದು ಪ್ರತಿಯೊಂದನ್ನೂ ಅಭ್ಯಸಿಸುತ್ತಾರೆ. ಪ್ರತಿಯೊಂದಕ್ಕೂ ಹೆಸರು ಸೂಚಿಸುತ್ತ, ಚಿತ್ರೀಕರಿಸುತ್ತ ಆನಂದಿಸುತ್ತಾರೆ. ಇವರು ಎಷ್ಟೋ ಸಲ ಅಡೆತಡಗಳು ಬಂದರೂ ಬಿಟ್ಟುಕೊಡದೆ ತಮ್ಮ ಗುರಿ ತಲುಪಿಯೇ ತೀರುತ್ತಾರೆ. ಎಂದೆನಿಸುತ್ತದೆ ಇಲ್ಲಿ.

ಇದೆಲ್ಲ ಅನುಭವಿಸಿದವರಿಗೆ ಮಾತ್ರ ಗೊತ್ತು ಅದರ ಆನಂದ. ಕೇವಲ ಓದಿದರೆ-ಕೇಳಿದರೆ-ಊಹಿಸಿದರೆ ಊಹೂಂ, ಸಾಧ್ಯವೇ ಇಲ್ಲ. ಇದರ ಗಮ್ಮತ್ತೇ ಬೇರೆ.

ಜೆಡ್ಡಾದಲ್ಲಿಯ 70-80 ವರ್ಷಗಳ ಹಳೆ ಮನೆಗಳನ್ನು ನೋಡಿದರೆ ಅವರು ಕಟ್ಟಡಕ್ಕೆ ಈ ಕೋರಲ್ ಕಲ್ಲುಗಳನ್ನೇ ಉಪಯೋಗಿಸಿರುವದು ಸ್ಪಷ್ಟವಾಗಿ ಕಾಣುತ್ತದೆ. ಎಲ್ಲ ಕಡೆಗೆ ಮಾಮೂಲಿನಂತೆ ಸಿಮೆಂಟ್ ಮಾಧ್ಯಮ ಹೇಗೋ ಹಾಗೆ ಇವರು, ಕೋರಲ್ ತುಣುಕು ಪುಡಿ ಉಪಯೋಗಿಸುತ್ತಿದ್ದರೆಂದು ತಿಳಿಯುತ್ತದೆ.

***

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸೀಮೋಲ್ಲಂಘನದ ಸಿದ್ಧತೆಯಲ್ಲಿ
Next post ಕಾಲ ಬಂದಿದೆ

ಸಣ್ಣ ಕತೆ

  • ಮಿಂಚು

    "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…

  • ಅವನ ಹೆಸರಲ್ಲಿ

    ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…

  • ಅಹಮ್ ಬ್ರಹ್ಮಾಸ್ಮಿ

    ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…

cheap jordans|wholesale air max|wholesale jordans|wholesale jewelry|wholesale jerseys