Home / ಕಥೆ / ಕಿರು ಕಥೆ / ಶಾಂತಿ- ಆನಂದ

ಶಾಂತಿ- ಆನಂದ

ಒಮ್ಮೆ ‘ಆನಂದ’, ‘ಶಾಂತಿ’, ಎರಡರಲ್ಲಿ ವಿವಾದ ಬಂದಿತು.
ಶಾಂತಿ ಹೇಳಿತು- “ನನ್ನಿಂದ ಆನಂದ” ಎಂದು.
ಆನಂದ ಹೇಳಿತು “ನನ್ನಿಂದ ಶಾಂತಿ” ಎಂದು.
ಆನಂದ, ಶಾಂತಿ ಎರಡೂ ಕೊನೆಯಿಲ್ಲದ ವಿವಾದದಲ್ಲಿ ತೊಡಗಿದವು.

“ನಿನ್ನ ವಾದ ಅತಿಯಾಯಿತು” ಎಂದು ಶಾಂತಿ ಕಾಡಿಗೆ ಹೊರಟು ಹೋಯಿತು. ಆನಂದದ ಮುಖ ಪ್ರಸನ್ನವಾಗಿರಲು ಪ್ರಯತ್ನಿಸಿತು. ಶಾಂತಿ ಇಲ್ಲದೆ ತಳಮಳಗೊಂಡಿತು. ಏನೋ ಕಳೆದುಕೊಂಡಂತೆ ತಾಕಲಾಡಿತು. ನಾನು ಆನಂದ, ನನಗೇನು ಕಮ್ಮಿ ಇಲ್ಲ” ಎಂದು ಸಂತೈಸಿ ಕೊಂಡಿತು. ಶಾಂತಿ ಇಲ್ಲದಿದ್ದರೇನು? ನಾನು ಸಂತಸದಿಂದ ಇರುವೆ ಎಂದುಕೊಂಡು ಒಂದು ಸಂಸಾರದಲ್ಲಿ ನುಗ್ಗಿತು. ಅಲ್ಲಿ ಗಂಡಹೆಂಡಿರ ನಡುವೆ ಆನಂದತಂದಿತು. ಮಕ್ಕಳು ಆನಂದದಿಂದ ಆಡುತ್ತಿದ್ದರು. ಗಂಡಹೆಂಡಿರ ಜಗಳದಲ್ಲಿ ಶಾಂತಿ ಭಂಗವಾಗಿ ಆನಂದ ಮಾಯವಾಗುತಿತ್ತು.

ಮಕ್ಕಳು ಆನಂದವಾಗಿ ಆಟವಾಡುತ್ತಾ ವಾಡುತ್ತಾ ಅಶಾಂತವಾಗುತ್ತಿದ್ದರು. ತನ್ನಿಂದ ಒಂದು ಸಂಸಾರವು ಕೂಡ ಆನಂದದಿಂದ ಇರಲು ಸಾಧ್ಯವಾಗುತ್ತಿಲ್ಲವಲ್ಲ ಎಂದು ಕೊಂಡಿತು.

ಅತ್ತ ಕಾಡಿಗೆ ಹೋದ ಶಾಂತಿ ದಾರಿ ತಪ್ಪಿ ದಿಕ್ಕಾಪಾಲಾಯಿತು. ಇದೇನು ಬರಿ ಕಾಡು ಮೌನ. ಭೀಕರ ಪ್ರಾಣಿಗಳ ಭಯ ಕಾಡುಗಿಚ್ಚಿನ ಹಾಹಾಕಾರ. ಶಾಂತಿ ಎಂಬ ನಾನು ಪೂರ್‍ಣವಲ್ಲವೇ? ಆನಂದವನ್ನು ಕಳೆದುಕೊಂಡಂತೆ ಏಕೆ ಭಾಸವಾಗುತ್ತದೆ? ನನ್ನ ಅಂಗದಲ್ಲಿ ಭಂಗವಾಗಿದೆಯೇ? ಏಕೆ ಈ ಸೋತಂತ ಭಾವ? ಎಲ್ಲಿ ಹೋಯಿತು ಸಂತಸದ ಚಿಲುಮೆ? ಎಲ್ಲೂ ಕೇಳದಾಗಿದೆ ಪ್ರಸನ್ನತೆಯ ಪಲುಕು. ಯಾವುದು ಶಾಂತಿಯ ಜೀವಾಳ? ಆನಂದವೇ ಶಾಂತಿಯ ಕಾಂತಿಯೇ? ಎಂದು ಯೋಚಿಸುತ್ತಾ ಸಂಧಾನ ಮಾಡುಕೊಳ್ಳುವುದಕ್ಕಾಗಿ ಆನಂದವನ್ನು ಹುಡುಕಿಕೊಂಡು ಬರುತ್ತಿತ್ತು.

ಆನಂದವು ಸಹ ಒಂದು ರೀತಿ ಮನಸ್ಸು ಮಾಡಿಬಿಟ್ಟಿತು. ಶಾಂತಿಯ ಸಿಹಿಸ್ನೇಹ, ಸಾನಿಧ್ಯ ಮತ್ತೆ ಬಯಸಿತು. ವಿಭಜಿತ ವೃತ್ತದಂತೆ. ಅರ್‍ಧ ಚಂದ್ರಮನಂತೆ ಅಪೂರ್‍ಣತೆಯ ಅನುಭವಿಸಿದವು. ಶಾಂತಿ, ಆನಂದ ಒಂದನ್ನೊಂದು ಹುಡುಕಿಕೊಂಡು ಬಂದವು. ಶಾಂತಿಯಿಲ್ಲದ ಆನಂದ, ಆನಂದವಿಲ್ಲದ ಶಾಂತಿ ಪುನರ್‍ಮಿಲನವಾದಾಗ ಪೂರ್ಣಚಂದ್ರನಂತಾದರು. ಶಾಂತಿ ಆಗಸದ ನೀಲಿಯಾಯಿತು. ಆನಂದ ಹಾರದಲ್ಲಿ ಶಾಂತಿಪದಕವಾಯಿತು. ಶಾಂತಿ, ಆನಂದಲ್ಲಿ ತನ್ನ ನೆಲೆ ಊರಿ ಗುಡಿಕಟ್ಟಿತು. ಆನಂದ ಗೋಪುರವಾಗಿ ಆಗಸವ ಮುಟ್ಟಿತು.
*****

Tagged:

Leave a Reply

Your email address will not be published. Required fields are marked *

ಮೂಲ: ವಿ ಎಸ್ ಖಾಂಡೇಕರ ಎದುರದಡದಿ ನಿಂದು ಬಿದಿರಕೊಳಲ ತನ್ನ| ಅಧರದಿ ನುಡಿಸುವ ಚದುರ ರಂಗನ ಕಂಡೆ|| ಅದೇ ಶಾಲೆಬಿಟ್ಟು ಬಂದು ಕುಸುಮೆಯು ರಾಗದ ಪೆಟ್ಟಿಗೆಯನ್ನು ಬಾರಿಸುತ್ತ ಹಾಡುತ್ತಿದ್ದಳು. ಸಂಗೀತದಿಂದ ದಣುವು ಪರಿಹಾರವಾಗುವದೆನ್ನುವರು. ಆದರೆ ನಡುಮನೆಯಲ್ಲಿ ಬಿಳಿಯ ಪತ್ತಲವನ್ನೊಂದು ...

ನಿರಂಜನ ಬಹಳ ಜನ ಹೆಂಗಸರನ್ನು ನೋಡಿದ್ದ. ಆದರೆ, ಅವನ ದುರದೃಷ್ಟ-ಅವನು ನೋಡಿದವರೆಲ್ಲ ಸರಿಸಿದ ಸೆರಗಿನವರು, ಸಡಿಲಿಸಿದ ನಿರಿಯವರು. ಮೇಲಾಗಿ ಅವನು ಸುಂದರನೇನೋ ಹೌದು. ಆದರೆ ಗಂಡಸಿನ ಸೌಂದರ್ಯವಲ್ಲದು, ಹೆಂಗಸಿನ ಸೌಂದರ್ಯ, ಸಾಲದುದಕ್ಕೆ “ಎಲ್ಲ ಹೆಂಗಸರೂ ಹೀಗೆಯೆ ಬಾ ಎನ್ನುವುದು ...

ಭೋಜನ ಭೀಮಾಚಾರರ ಮಕ್ಕಳೇತಾನೆ ಆ ವೇದಾಂತ ಡಿಂಡಿಮ ರಾಜಾಚಾರ್‍ಯರು. ಭೀಮಾಚಾರ್‍ಯರು ತಮ್ಮ ಬಿರುದನ್ನು ಸ್ವಪ್ರಯಾಸದಿಂದಲೇ ಸಂಪಾದಿಸಿದರು. ತಮ್ಮ ಮಕ್ಕಳಲೊಬ್ಬನಾದರೂ ಸರಸ್ವತಿಯ ಕೈಹಿಡಿಯಲೆಂದು ಆಶೆಬಿಟ್ಟು ರಾಜಾಚಾರ್‍ಯರನ್ನು ಬಿರುದೊಣ್ಣೆಯ ವಶಕ್ಕೆ ಕೊಟ್ಟರು. ಇತ್ತಲಾಗಿ ರಾಜಾಚಾರ್‍ಯರಿ...

ಶಠಗೋಪ ಹದಿನಾರಾಣೆ ಶ್ರೀವೈಷ್ಣವ. ಒಂದುದಿನ ಅವನ ಅತ್ತಿಗೆ ಅಡುಗೆಯ ಕೆಲಸದಲ್ಲಿದ್ದು ವೀಳೆಯದೆಲೆಯ ವರ್ತನೆಯವಳು ಬಂದಾಗ ಎಲೆ ತೆಗೆಯಲು ಶಠಗೋಪನಿಗೆ ಹೇಳಿದಳು. ಶಠಗೋಪನು ಹೊರಗೆ ಬಂದು, ಎದುರಿಗಿದ್ದ ವೀಳೆದೆಲೆಯವಳನ್ನು ನೋಡಿದ. ಅವಳು ಸಾಧಾರಣದ ಹೆಣ್ಣು. ರತಿಯಲ್ಲ, ಚಪ್ಪನ್ನಾರು ದೇಶದಲ್ಲ...

ಕೋರ್‍ಟಿನಿಂದ ಬಂದ ಮೀರಾ ಬಳಲಿದವಳಂತೆ ಕುಸಿದು ಕುಳಿತಳು. ದೇಹ ಬಳಲಿದ್ದರೂ ಸಂತಾಪದಿಂದ ಎದೆ ಕುದಿಯುತ್ತಿತ್ತು. ಎದೆಯಲ್ಲಿ ಕುದಿತ, ಮುಖ ಕಣ್ಣುಗಳನ್ನು ಕೆಂಪು ಮಾಡಿ, ಇಡೀ ದೇಹ ಕೋಪದಿಂದ ಕಂಪಿಸುವಂತೆ ಮಾಡಿತ್ತು. ಕಾಲಲ್ಲಿದ್ದ ಚಪ್ಪಲಿಗಳನ್ನು ಕೂಡಾ ಕಳಚದೇ, ಕೈಯಲ್ಲಿದ್ದ ಪರ್ಸ್, ಪುಸ...

ಮಳೆ ಎಂದರೆ ಅಂತಹ ಇಂತಹ ಮಳೆಯಲ್ಲ. ಕೈ ಹೊರುವುದನ್ನು ಮೈ ಹೊರಲಿ ಎಂದು ಎಲ್ಲಾ ಬಟ್ಟೆ ಬರೆಗಳನ್ನೂ ಮೈಯ ಮೇಲೆಯೇ ಹಾಕಿಕೊಂಡಿದ್ದೆ. ಹಿಡಿದುಕೊಂಡಿದ್ದ ಛತ್ರಿ, ಹೊದ್ದಿದ್ದ ಜಮಖಾನೆ, ಉಟ್ಟಿದ್ದ ಎರಡು ಗಾಂಧಿಪಂಚೆ, ತೊಟ್ಟಿದ್ದ ಕಾಕಿಚೆಡ್ಡಿ, ಇಷ್ಟೆಲ್ಲಾ ನೆನೆದುದಲ್ಲದೆ, ಕಟ್ಟಿದ್ದ ಕಾಚ ...