(ನೀರು) “ಬಿಸಿಲಿಗೆ ಬೇಸತ್ತು
ಹೋದೆನು ಭೂಮಿಯನ್ನು ಬಿಟ್ಟು
ಮೋಡವಾಗಿ ಮೇಲೆ
ಚರಿಸುವೆ ನಭದೊಳಗಾಮೇಲೆ
ಚಂದ್ರ ಸೂರ್ಯರನ್ನು
ಮುಸಕುವೆ ನಿಮಿಷದೊಳಗೆ ನಾನು
ಚಿಕ್ಕ ಚಿಕ್ಕೆಗಳನು
ಉದರಲು ಉದರದಿ ಹಿಡಿಯುವೆನು
ಶಾಂತಿ ಮಾಡುವವರು
ಭೂಮಿಗೆ ನಾನಲ್ಲದೆ ಯಾರು?”
* * * *
(ನಿದ್ರೆ) ರಣ ರಣ ರಣ ಬಿಸಿಲು;
ಸುತ್ತಲು ಬರಿ ಬಿಸಿಲೇ ಬಿಸಿಲು
ಏಽತ್ತ ನೋಡಿದರೂ
ಬಿಸಿಲೇ ಬಿಸಿಲು ಕೆಳಗೆ ಮೇಲೂ;
ಕೆರೆ ಹೊಳೆ ಹಳ್ಳಗಳು
ಜಗದೊಳಗೆಲ್ಲಾ ಬತ್ತಿರಲು
ಪಾಂಥನು ಬಂದಿರಲು
ಕೊಡುವದು ಆಶ್ರಯವನು ನೆಳಲು
ಮಲಗಿರಲವನಲ್ಲಿ,
ಕನಸನು ಕಂಡನಷ್ಟರಲ್ಲಿ;
ಹೂವಿನ ತೋಟಗಳು
ಹೆಣ್ಣಿನ ಕಣ್ಣಿನ ನೋಟಗಳು
ಹರಿಯುವ ಹಳ್ಳಗಳು
ತಾವರೆ ತುಂಬಿದ ಕೊಳ್ಳಗಳು
ನವರತ್ನದ ಮಹಲು
ಕಳಸವೆ ಮುಟ್ಟಿತದರ ಮುಗಿಲು
ಸಾವಿರಾರು ಕನಸು
ಕಂಡನು. ಮರುಳಾಯಿತು ಮನಸು
ಇ೦ತಹ ಮೋಹಕರು
ಇಳೆಯೊಳು ಅವಳಲ್ಲದೆ ಯಾರು?
****
ಕವಿಕಲ್ಪನೆಯಲ್ಲೇ?
ಇದನ್ನೂ ಅವಳೇ ಕಟ್ಟಿಲ್ಲೇ?
ಶಾಂತಳು ಮೋಹಕಳು
ಜಗದಲಿ ಅವಳೊಬ್ಬಳೆ ಇಹಳು
*****








