ಮಿಂಚಿನ ಗೊಂಚಲು ಸುತ್ತಲು ಎತ್ತಲಿ,
ಸುಳಿಸುಳಿಗಾಳಿಯ ನಡುಎಡೆಪಥದಲಿ
ಕಪ್ಪನೆಮೋಡದ ಮುಬ್ಬಿನದೆಸೆಯಲಿ
ಮಿನಿಗಿತು, ಮೆರೆಗಿತು, ಕಿರುತಾರೆ!
ಪಡುವಲನಾಡಿನ ಮಲೆಯಸ್ತೋಮದಿ,
ಮೂಡಲತಗ್ಗಿನ ಹಚ್ಚನೆಹಳುವಲಿ
ನಾಡಿನ ತೀರದ ಸುಳಿವಿನ ಗೆಲುವಲಿ
ದೋರಿತು, ಮೆರೆಯಿತು, ಮುಗಿಲೇರಿ
ಹಾಡುವ ಹಕ್ಕಿಯ ನೇರದಬಯಲಲಿ
ಗೆಲುವಿನ ಮೆಲುವಿನ ಸಂಪಿಗೆಕಂಪಲಿ
ಬೆರೆಸಿತು, ಮೂಡಿತು, ಕಿರುತಾರೆ!
ವಿರಹೀಹೃದಯದ ತಳಮಳತೌರಲಿ
ಭುವಿಯಾಭಾವನೆ ಬಯಲಿನ ನೆಲೆಯಲಿ
ನೆಟ್ಟಿತು, ನೆಟ್ಟಿತು, ನೆರೆಶಾಂತಿ.
*****


















