ಅವ್ವಾ, ಮಳೆಗಾಲದ ಈ ಗಾಳಿ
ಕಣ್ಣಿಗೆ ಕಾಣದ ಸೊಕ್ಕಿನ ಗೂಳಿ
ಮನೆಗಳ ಇರಿಯುವದು
ಗಿಡಮರ ಮುರಿಯುವದು
ನಾನೇ ದೇವರ ಕಿವಿಯಲಿ ಹೇಳಿ
ಸೂರ್‍ಯನ ತೇರಿಗೆ ಕಟ್ಟಿಸುವೆ
ಗಾಳಿಯ ಸೊಕ್ಕನು ಮೆಟ್ಟಿಸುವೆ
*****

ಕನ್ನಡ ನಲ್ಬರಹ ತಾಣ
ಅವ್ವಾ, ಮಳೆಗಾಲದ ಈ ಗಾಳಿ
ಕಣ್ಣಿಗೆ ಕಾಣದ ಸೊಕ್ಕಿನ ಗೂಳಿ
ಮನೆಗಳ ಇರಿಯುವದು
ಗಿಡಮರ ಮುರಿಯುವದು
ನಾನೇ ದೇವರ ಕಿವಿಯಲಿ ಹೇಳಿ
ಸೂರ್‍ಯನ ತೇರಿಗೆ ಕಟ್ಟಿಸುವೆ
ಗಾಳಿಯ ಸೊಕ್ಕನು ಮೆಟ್ಟಿಸುವೆ
*****