`ಪತ್ರಂ ಪುಷ್ಪಂ
ಫಲಂ (ಚ) ತೋಯಂ’
ಇತ್ತರೆ ಬರುವೆನು
ಹತ್ತಿರವೇ ಎಂ-
ದತ್ತೂ ಕರೆದೂ
ಭಿಡೆಗಿಡೆಯಿಲ್ಲದೆ
ನಯಭಯವಿಲ್ಲದೆ
ಭಿಕ್ಷೆಯ ಬೇಡುವ
ಭಿಕಾರಿ ಭೋ ಪ್ರಭು
ಜಯತು ಜಗದ್ಗುರು!
ಭಗವದ್ಗೀತಾ-
ಕರ್ತೃವೆ! ನೇತೃವೆ!
ಎಲ್ಲೆಯು ಇಲ್ಲದ
ಎಲೆ ಎಲೆ ದೇವಾ
ಎಲೆಯೂ ಇಲ್ಲದೆ
ತೊಳಲುತ ಬಳಲುತ
ಅಲೆಯುವ ಈ ಗಾ-
ವಿಲನಾಗಿಹ ದೇ-
ವಿಲಿಯಾದೆನ್ನಯ
ಬಳಿಯಲಿ ನೀನೇ
ಬಳಿಸಾರುವದಿಲ್ಲೇನಯ್ಯಾ
ಕುಲುಕುಲು ನಗುತಲಿ ಕನ್ನಯ್ಯಾ?
*****








