Home / ಲೇಖನ / ಇತರೆ / ಬಂಗಾರದ ಮಾತು

ಬಂಗಾರದ ಮಾತು

ಶ್ರಮವಿಲ್ಲದೆ ದುಡ್ಡುಗಳಿಸಬೇಕೆಂಬ ಇಚ್ಛೆಯು ಅನೇಕರಲ್ಲಿದೆ. ಎಲ್ಲ ದೇಶಗಳಲ್ಲಿದೆ. ಕೆಲವರು ತಾಮ್ರ-ಹಿತ್ತಾಳಿಗಳನ್ನು ಬಂಗಾರವನ್ನಾಗಿ ಮಾಡುವ ಸಾಧನೆ (ಕೀಮಿಯಾ) ಯಲ್ಲಿ ತೊಡಗುತ್ತಾರೆ. ಕೆಲವರು ಭೂಮಿಯ ಹೊಟ್ಟೆಯಲ್ಲಿ ಅಡಗಿಸಿಟ್ಟ ದ್ರವ್ಯವನ್ನು ಹುಡುಕಲು ಪ್ರಯತ್ನಿಸುತ್ತಾರೆ. ಕೆಲವರು ಲಾಟರಿ ಅಥವಾ ಶರ್ತಗಳ ಮಾರ್ಗವನ್ನು ಹಿಡಿಯುತ್ತಾರೆ. ಮಾರ್ಗಗಳು ಬೇರೆ ಬೇರೆ. ಆದರೆ ಧ್ಯೇಯವು ಒಂದೇ – ಧನಸಂಪಾದನೆ, ದ್ರವ್ಯ ಸಂಪಾದನೆ. ಈ ಮಾರ್ಗದಿಂದ ದ್ರವ್ಯ ಸಂಪಾದನೆ ಮಾಡಿದವರು ಕ್ವಚಿತ್. ಆದರೆ ಇಂಥ ಪ್ರಯತ್ನಗಳಲ್ಲಿ ಕೈಯಲ್ಲಿದ್ದ ದುಡ್ಡನ್ನು ಕಳಕೊಂಡವರು ಅನೇಕರಿದ್ದಾರೆ.

ಬಡವನು ಧನ ಬಯಸುತ್ತಾನೆ; ಸಿರಿವಂತನೂ ಬಯಸುತ್ತಾನೆ; ಉದಾರನೂ ಧನ ಬಯಸುತ್ತಾನೆ; ಮಿತವ್ಯಯಿಯೂ ಧನ ಬಯಸುತ್ತಾನೆ; ದುಂದುಗಾರನೂ ಧನ ಬಯಸುತ್ತಾನೆ. ಈ ಧನ ಬಯಸುವ ರೋಗಕ್ಕೆ ಧನ್ವಂತರಿಗೆ ಸಹ ಉಪಾಯ ಗೊತ್ತಿದ್ದಿರಲಿಕ್ಕಿಲ್ಲ.
* * * *

ತಾಮ್ರದ ದುಡ್ಡು ತಾಯಿ ಮಕ್ಕಳನ್ನು ಕೆಡಿಸುತ್ತದಂತೆ. ಅದರಂತೆ ತಾಯಿಮಕ್ಕಳು ಸಹ ತಾಮ್ರದ ದುಡ್ಡನ್ನು ಕೆಡಿಸುತ್ತಾರೆ. ಇದರಲ್ಲಿ ಪಾಪಿ ಅಂದರೆ ಆ ಬಡ ತಂದೆಯು.

ಕೂತು ಉಂಡರೆ ಕೊಡ ಹೊನ್ನು ಸಾಲದು ಎಂದು ಹಿರಿಯರು ಹೇಳುತ್ತಾರೆ. ಆದರೆ ನಿಂತು ಉಂಡರೆ ಸಹ ಹೊನ್ನು ತೀವ್ರ ಖರ್ಚಾಗುವದೆಂದೂ ಅವನು ತೀವ್ರ ಮಲಗುವನೆಂದೂ ನಮ್ಮ ಅಭಿಪ್ರಾಯ. ಅದಕ್ಕಾಗಿಯೇ ಎಲ್ಲ ದೇಶಗಳಲ್ಲಿ, ಎಲ್ಲ ಜನಾಂಗಗಳಲ್ಲಿ, ಕೂತು ಊಟ ಮಾಡುವ ಪರಿಪಾಠವನ್ನು ಹಾಕಿದ್ದಾರೆ. ಕೊಡ ಹೊನ್ನು ಸಾಲಲಿ, ಸಾಲದಿರಲಿ, ಕೂತು ಉಣ್ಣುವದೇ ಹಿತಕರವೆಂದು ನಮಗೆ ಎನಿಸುತ್ತದೆ.
* * * *

ಇಷ್ಟೇ ಅಲ್ಲ; ನಿಂತು ಉಣ್ಣುವ ಚಾಳಿಯು ದನಕರುಗಳದು; ಪಕ್ಷಿ ಮೃಗಗಳದು. ಅವು ನಿಂತು ಉಣ್ಣುವದರಿಂದ ಅವುಗಳ ಹತ್ತಿರ ಒಂದು ಕಾಸು ಸಹ ಇರುವದಿಲ್ಲ. ಆದ್ದರಿಂದ ಕೂತು ಊಟ ಮಾಡುವದು ಹಿತಕರವೆಂದು ಪುನಃ ಹೇಳುತ್ತೇನೆ, ಊಟದ ಹೊತ್ತಾಯಿತು. ಊಟಕ್ಕೆ ಕೂಡ್ರುವೆ!
* * * *

ಅಮೇರಿಕೆಯ ಒಬ್ಬ ಡಾಕ್ಟರನು ಸಣ್ಣ ಕೂಸುಗಳನ್ನು ತೊಟ್ಟಿಲಿನಲ್ಲಿ ಹಾಕಿ ತೂಗಬಾರದೆಂದು ಅಭಿಪ್ರಾಯಪಟ್ಟಿದ್ದಾನೆ. ಸಣ್ಣ ಕೂಸುಗಳನ್ನು ತೊಟ್ಟಲಿನಲ್ಲಿ ತೂಗಬಾರದೆಂದರೇನು? ಮುದುಕರನ್ನು ತೊಟ್ಟಲಿನಲ್ಲಿ ಮಲಗಿಸಿ ತೂಗಬೇಕೇ ? ಅದಿರಲಿ, ವೈದ್ಯಕೀಯ ದೃಷ್ಟಿಯಿಂದ ಈ ಡಾಕ್ಟರನ ಅಭಿಪ್ರಾಯವು ಹೇಗೇ ಇರಲಿ; ಸಾಂಸ್ಕೃತಿಕ ದೃಷ್ಟಿಯಿಂದ ನಮ್ಮ ದೇಶಕ್ಕೆ ಎಷ್ಟು ಅಪಘಾತವಾಗುವದೆಂಬದರ ಕಲ್ಪನೆಯೇ ಇಲ್ಲ. ತೊಟ್ಟಿಲದಲ್ಲಿ ಹಾಕುವ ಸಮಾರಂಭವು ಮುಗ್ಗಿ ಹೋಗುವದು. ಕೂಸು ಅಳಹತ್ತಿದರೆ, ಅದನ್ನು ತೊಟ್ಟಿಲಲ್ಲಿ ಹಾಕಿ ತಾಯಿಯು ತರತರದ ಧ್ವನಿ ತೆಗೆದು ತರತರದ ರಾಗಗಳಲ್ಲಿ ಹಾಡುವ ಪದಗಳು ಔಷಧಕ್ಕೂ ಸಿಗದಂತೆ ಆಗುವವು. ಈಗಾಗಲೆ ಹಿಟ್ಟಿನ ಗಿರಣಿಗಳು ಬಂದಂದಿನಿಂದ ಬೆಳಗುಮುಂಜಾನೆಯ ಬೀಸುಕಲ್ಲಿನ ಪದಗಳು ಕೋಳಿ ಕೂಗುವ ಹಳ್ಳಿಗಳಿಂದಲೂ ಕೇಳಿಸಿ ಬರುವದಿಲ್ಲ. ಬೀಸುವಾಗಿನ ಕಟ್ಟುವಾಗಿನ ಹಂತಿ ಹೊಡೆಯುವಾಗಿನ ಪದಗಳು ವಿರಳವಾಗಹತ್ತಿವೆ. ತೊಟ್ಟಿಲಿನ ಜೋಗುಳ ಪದಗಳೂ ಲಯವಾದರೆ ಎಷ್ಟು ಅನಾಹುತವಾಗುವದು! ಜನಪದ ಸಾಹಿತ್ಯ ಸಂಶೋಧಕರು ಈ ತೊಟ್ಟಿಲಿನ ಪದಗಳ ಸಂಗ್ರಹ ಮಾಡುವದನ್ನು ಕೈಕೊಳ್ಳುವರೇ ? ಶಕ್ಯವಿದ್ದರೆ ರಿಕಾರ್ಡ ಸಹ ಮಾಡಿಸುವದು ನೆಟ್ಟಗೆ !

ತೊಟ್ಟಿಲಿನ ಪದಗಳಿಂದ ಅಳುವ ಕೂಸು ಮಲಗುವದೋ ಮಲಗಿದ ಜನರು ಎಚ್ಚರಾಗುವರೋ ಎಂಬದು ವಾದಗ್ರಸ್ತ ವಿಷಯ. ಜನರ ಭಿನ್ನ ಭಿನ್ನ ಅನುಭವದಂತೆ ಅವರ ಅಭಿಪ್ರಾಯ. ತೊಟ್ಟಿಲ ತೂಗುವಾಗ ಹಾಡುವವರಿಗೆ ನಿದ್ರೆ ಬರುವದಿಲ್ಲೆಂದು ನಮ್ಮ ಅಭಿಪ್ರಾಯ!

ಮೇಲೊಂದು ಪ್ಯಾರಾದಲ್ಲಿ “ಕೋಳಿ ಕೂಗುವ ಹಳ್ಳಿ ” ಎಂಬ ಸಾಮಾನ್ಯವಾಗಿ ಉಪಯೋಗಿಸಲ್ಪಡುವ ವಾಕ್ಯವನ್ನು ಬರೆಯಲಾಗಿದೆ. ಆದರೆ ಕೂಗುವದು ಕೋಳಿಯೋ ಅಥವಾ ಹುಂಜವೋ ? ಕೂಗುವದು ಹುಂಜವಾದರೆ ಹಾಗೇಕೆ ಅನ್ನುವದಿಲ್ಲ ?
*****

Tagged:

Leave a Reply

Your email address will not be published. Required fields are marked *

ಮೂಲ: ವಿ ಎಸ್ ಖಾಂಡೇಕರ ಎದುರದಡದಿ ನಿಂದು ಬಿದಿರಕೊಳಲ ತನ್ನ| ಅಧರದಿ ನುಡಿಸುವ ಚದುರ ರಂಗನ ಕಂಡೆ|| ಅದೇ ಶಾಲೆಬಿಟ್ಟು ಬಂದು ಕುಸುಮೆಯು ರಾಗದ ಪೆಟ್ಟಿಗೆಯನ್ನು ಬಾರಿಸುತ್ತ ಹಾಡುತ್ತಿದ್ದಳು. ಸಂಗೀತದಿಂದ ದಣುವು ಪರಿಹಾರವಾಗುವದೆನ್ನುವರು. ಆದರೆ ನಡುಮನೆಯಲ್ಲಿ ಬಿಳಿಯ ಪತ್ತಲವನ್ನೊಂದು ...

ನಿರಂಜನ ಬಹಳ ಜನ ಹೆಂಗಸರನ್ನು ನೋಡಿದ್ದ. ಆದರೆ, ಅವನ ದುರದೃಷ್ಟ-ಅವನು ನೋಡಿದವರೆಲ್ಲ ಸರಿಸಿದ ಸೆರಗಿನವರು, ಸಡಿಲಿಸಿದ ನಿರಿಯವರು. ಮೇಲಾಗಿ ಅವನು ಸುಂದರನೇನೋ ಹೌದು. ಆದರೆ ಗಂಡಸಿನ ಸೌಂದರ್ಯವಲ್ಲದು, ಹೆಂಗಸಿನ ಸೌಂದರ್ಯ, ಸಾಲದುದಕ್ಕೆ “ಎಲ್ಲ ಹೆಂಗಸರೂ ಹೀಗೆಯೆ ಬಾ ಎನ್ನುವುದು ...

ಭೋಜನ ಭೀಮಾಚಾರರ ಮಕ್ಕಳೇತಾನೆ ಆ ವೇದಾಂತ ಡಿಂಡಿಮ ರಾಜಾಚಾರ್‍ಯರು. ಭೀಮಾಚಾರ್‍ಯರು ತಮ್ಮ ಬಿರುದನ್ನು ಸ್ವಪ್ರಯಾಸದಿಂದಲೇ ಸಂಪಾದಿಸಿದರು. ತಮ್ಮ ಮಕ್ಕಳಲೊಬ್ಬನಾದರೂ ಸರಸ್ವತಿಯ ಕೈಹಿಡಿಯಲೆಂದು ಆಶೆಬಿಟ್ಟು ರಾಜಾಚಾರ್‍ಯರನ್ನು ಬಿರುದೊಣ್ಣೆಯ ವಶಕ್ಕೆ ಕೊಟ್ಟರು. ಇತ್ತಲಾಗಿ ರಾಜಾಚಾರ್‍ಯರಿ...

ಶಠಗೋಪ ಹದಿನಾರಾಣೆ ಶ್ರೀವೈಷ್ಣವ. ಒಂದುದಿನ ಅವನ ಅತ್ತಿಗೆ ಅಡುಗೆಯ ಕೆಲಸದಲ್ಲಿದ್ದು ವೀಳೆಯದೆಲೆಯ ವರ್ತನೆಯವಳು ಬಂದಾಗ ಎಲೆ ತೆಗೆಯಲು ಶಠಗೋಪನಿಗೆ ಹೇಳಿದಳು. ಶಠಗೋಪನು ಹೊರಗೆ ಬಂದು, ಎದುರಿಗಿದ್ದ ವೀಳೆದೆಲೆಯವಳನ್ನು ನೋಡಿದ. ಅವಳು ಸಾಧಾರಣದ ಹೆಣ್ಣು. ರತಿಯಲ್ಲ, ಚಪ್ಪನ್ನಾರು ದೇಶದಲ್ಲ...

ಕೋರ್‍ಟಿನಿಂದ ಬಂದ ಮೀರಾ ಬಳಲಿದವಳಂತೆ ಕುಸಿದು ಕುಳಿತಳು. ದೇಹ ಬಳಲಿದ್ದರೂ ಸಂತಾಪದಿಂದ ಎದೆ ಕುದಿಯುತ್ತಿತ್ತು. ಎದೆಯಲ್ಲಿ ಕುದಿತ, ಮುಖ ಕಣ್ಣುಗಳನ್ನು ಕೆಂಪು ಮಾಡಿ, ಇಡೀ ದೇಹ ಕೋಪದಿಂದ ಕಂಪಿಸುವಂತೆ ಮಾಡಿತ್ತು. ಕಾಲಲ್ಲಿದ್ದ ಚಪ್ಪಲಿಗಳನ್ನು ಕೂಡಾ ಕಳಚದೇ, ಕೈಯಲ್ಲಿದ್ದ ಪರ್ಸ್, ಪುಸ...

ಮಳೆ ಎಂದರೆ ಅಂತಹ ಇಂತಹ ಮಳೆಯಲ್ಲ. ಕೈ ಹೊರುವುದನ್ನು ಮೈ ಹೊರಲಿ ಎಂದು ಎಲ್ಲಾ ಬಟ್ಟೆ ಬರೆಗಳನ್ನೂ ಮೈಯ ಮೇಲೆಯೇ ಹಾಕಿಕೊಂಡಿದ್ದೆ. ಹಿಡಿದುಕೊಂಡಿದ್ದ ಛತ್ರಿ, ಹೊದ್ದಿದ್ದ ಜಮಖಾನೆ, ಉಟ್ಟಿದ್ದ ಎರಡು ಗಾಂಧಿಪಂಚೆ, ತೊಟ್ಟಿದ್ದ ಕಾಕಿಚೆಡ್ಡಿ, ಇಷ್ಟೆಲ್ಲಾ ನೆನೆದುದಲ್ಲದೆ, ಕಟ್ಟಿದ್ದ ಕಾಚ ...