ಹೂಗ ತರವೋ ಮಾಲಿಂಗರಣ್ಣಾ
ಹೂಗೀ ನ ಬೆಲಿ ಮೇಲ್ ಕೇಳ ಬಚ್ಚಣ್ಣಾ || ೧ ||

ತಟ್ಟಾನ ಕ್ಯಾದುಗೀ ಬಟ್ಟಾನ ಮಲ್ಲುಗೀ
ಪಟ್ಟಣಕೇ ಬಾ ನಮ್ಮ ತುರಾಯಕ || ೨ ||

ಹೂಗಿನ ಕೋಲು ಕೋಲಣ್ಣಾ
ರಣ್ಣದಾ ಕೋಲು ಕೋಲಣ್ಣಾ || ೩ ||

ಪಾರಂಬ ಪಾರಂಬ ಪಾರಂಬ ದಿನದಲಿ
ತಾಲಿಟ್ಟು ಮದಲೀ ಕುಣಿದಾಡು ಕೋಲೇ || ೪ ||

ಯೇ ತಟ್ಟನ ಕ್ಯಾ ದುಗಿ ಬಟ್ಟಾಣ ಮಲ್ಲುಗಿ
ಪಟ್ಟಣಕೆ ಬಾ ನಮ್ಮ ತುರಾಯಕೇ || ೫ ||

ಹೂಗಿನ ಕೋಲು ಕೋಲಣ್ಣಾ
ರಣ್ಣದಾ ಕೋಲು ಕೋಲಣಾ || ೬ ||

ಸುಗ್ಗಿಮಕ್ಕಳ ಬಂದೀ ನುಗ್ಗಿಕಾಯ್ ಕೊಯ್ದೇ
ನುಗ್ಗಿರಜ್ಜಿಮೂಗೂ ಮೊಳನೀಟಾ || ೭ ||

ಓಹೋ ಹೋಹೋ ಹೌದೇ
ತಂದನಾ ತಾನಾ ತಾನನಂದ್ರನಾನಾ || ೮ ||

ಅಳ್ಳಡೋಗಿ ಬೆಳ್ಳಗಾದ್ರ ಮಲ್ಲಿಗೇನೆ ಮಾಡ್ವದೋ?
ಚೆಲ್ವಿಗಂಡಾ ಚೆಲ್ವಿನಾದ್ರ ಜನ ಕೇನ ಸಲ್ವದೋ? || ೯ ||
*****
ಹೇಳಿದವರು: ದಿ. ಸಣಕೂಸ ಅಗೇರ

ಈ ಬರಹವು ಕ್ರಿಯೇಟಿವ್ ಕಾಮನ್ಸ್ ಹಕ್ಕುಪದ್ಧತಿಯ ೪.೦ ಅಂತಾರಾಷ್ಟ್ರೀಯ ಪರವಾನಗಿಯನ್ನು ಹೊಂದಿದ್ದು ವಾಣಿಜ್ಯೇತರ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗಿದೆ.