ನಾವು ಆ ನಗರದ ವಾಸಿಗಳು
ಆನಂದ ಸ್ವರೂಪಿಗಳು
ಬಾಳಿನಲಿ ಚೈತನ್ಯ ತುಂಬಿದವರು
ಆತ್ಮರೂಪಿಗಳು

ಅಶೋಕನಗರ ನಮ್ಮ ತಾಣ
ಅಲ್ಲಿ ದುಕ್ಕವಿಲ್ಲ
ಲ್ಲೆಲ್ಲವೂ ಶಾಂತಿಯೇ ಶಾಂತಿ
ಅಲ್ಲಿ ರೊಕ್ಕವಿಲ್ಲ

ಬದುಕಿನಲಿ ಕನಸುಗಳಿಲ್ಲ
ಭೂತಕಾಲವಿಲ್ಲ
ಭವಿಷತ್ತು ನಮ್ಮದಲ್ಲ
ಭಕ್ತಿ ನಮ್ಮದೆಲ್ಲ

ಅಂತಃಕರಣ ಕರಗಿದೆ
ಮನ ನನ್ನದಾಗಿದೆ
ಸ್ವಾರ್‍ಥ ಅಮಿಷೆ‌ಇಲ್ಲ
ಮಾಣಿಕ್ಯ ವಿಠಲನಾದೆ
*****