ಕಳಂಕರಹಿತ

ಓ ನನ್ನ ಕೃಪಾಸಿಂಧು ದೇವ
ನಿನ್ನ ಸ್ಮರಣೆಯೇ ಸದಾ ಇರಿಸು
ನಾ ನಿನ್ನ ನಾಮವೊಂದೇ ಸದಾ
ನನಗೆ ನಿತ್ಯ ಅನವರತ ನುಡಿಸು

ಈ ಕ್ಷಣ ಕ್ಷಣದ ತುಸುಭಾಗ
ನಿನ್ನ ನೆನೆಯದೆ ವ್ಯರ್‍ಥ ಹೋಗದಿರಲಿ
ನನ್ನ ಬದುಕಿನ ಮೂಲೆ ಮೂಲೆಗೂ
ಪಾಪದ ಕರ್‍ಮವು ಇಣಕದಿರಲಿ

ನಾನು ಎಲ್ಲೂನಿಂತಿರಲಿ, ವಾಸಿರಲಿ
ನಿನ್ನ ನಾಮವೊಂದ ನುಡಿಯುತ್ತಿರಲಿ
ನನ್ನ ಜಿವ್ಹೆಯ ಮೇಲೆ ಸದಾವೂ
ನಿನ್ನ ಮಹಿಮೆಯೆ ವರ್‍ಣಿಸುತ್ತಿರಲಿ

ನನ್ನ ಕರ್‍ಮ ಕರ್‍ಮಗಳಲ್ಲೂ
ನಿನ್ನ ರೂಪವೇ ನಾ ಕಂಡಿರಲಿ
ನೀ ನೀಡಿದ ಅವಸ್ಥೆಗಳೆಲ್ಲವೂ
ನಾ ಎಲ್ಲವೂ ಎದೆಗವಚಿ ಕೊಂಡಿರಲಿ

ಇನ್ನೂ ನನ್ನ ಬಾಳು ಪವಿತ್ರವಾಗಲಿ
ಪಾಪ ಪ್ರಜ್ಞೆ ಸುಳಿವು ಸುಳಿಯದಿರಲಿ
ನಿನ್ನ ಕಾಣುವ ಭಾಗ್ಯ ಕೂಡಿ ಬರಲಿ
ಮಾಣಿಕ್ಯ ವಿಠಲನಂತೆ ಧನ್ಯನಾಗಿರಲಿ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಉಮರನ ಒಸಗೆ – ೪೪
Next post ಮಲ್ಲಿ – ೨೨

ಸಣ್ಣ ಕತೆ

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

  • ಅಜ್ಜಿ-ಮೊಮ್ಮಗ

    ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…