ಅರಿಯಲಿ ಸತ್ಯ

ಭವದ ಭೂಮಿಯಲಿ ಆಚಾರ ವಿಚಾರ
ಧರ್‍ಮದ ನಾಮದಿ ನಿಷ್ಠಾಚಾರ
ಭೌತಿಕ ತೋರ್‍ಪಗಡಿಕೆಗೆ ಅಂತರದಲಿ
ಬರಿ ಖಾಲಿ ಅಲ್ಲಿಲ್ಲ ಸುವಿಚಾರ

ಆಯುಷ್ಯದ ಕೊನೆಗಳಿಗೆಗೂ ಚಿಂತೆ
ಭವದ ಮತ್ತೆ ಸುಖದ ಕಂತೆ
ಯಾರಿಗಾಗ್ಯೂ ಸುರಿಸುವರು ಕಣ್ಣೀರು
ಯಾರಿಗಾಗೂ ವಿತರಿಸುವರು ಪನ್ನಿರು

ಲೋಕಗಳಾಚೆ ಲೋಕಗಳಿವೆಯೆಂದು
ಭ್ರಮೆ ಹೊತ್ತು ಸುತ್ತಿಹರು
ಲೋಕದ ಜನರಿಗೆ ನಿತ್ಯ ಕಾಡಿಸುತ್ತ
ದೊರೆಯದ ಸೌಖ್ಯಕ್ಕೆ ಬಾಯಾರಿವರು

ಶರೀರ ಹಣ್ಣಾದರೂ ಬಯಕೆ ತೀರಿತೆ!
ಮನಸ್ಸು ಪಕ್ವವಾದರೂ ಹಸಿ ನೋವೆ!!
ಹರಿಬೇಕು ಚಿತ್ತ ದೇವನಲ್ಲಿ ನಿತ್ಯ
ಮಾಣಿಕ್ಯ ವಿಠಲನೇ ಸತ್ಯ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಉಮರನ ಒಸಗೆ – ೧೯
Next post ಪಾಪಿಯ ಪಾಡು – ೨೨

ಸಣ್ಣ ಕತೆ

  • ರಣಹದ್ದುಗಳು

    ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…

  • ಮೋಟರ ಮಹಮ್ಮದ

    ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…

  • ಜೋತಿಷ್ಯ

    ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…