ಎಲೆ ಕಳ್ಳಿ, ವಾಣಿ, ಮೊದಲಿಲ್ಲಿ ಇಡು ಪರಿಹಾರ
ಸತ್ಯ ಸೌಂದರ್ಯಗಳ ಉಪೇಕ್ಷೆ ಮಾಡಿದ್ದಕ್ಕೆ;
ಸೌಂದರ್ಯ ಸತ್ಯಕ್ಕೆ ನನ್ನೊಲವೆ ಆಧಾರ,
ನಿನಗು ಸಹ, ಅಷ್ಟೊಂದು ಘನತೆ ನಿನಗೆ ಅದಕ್ಕೇ.
ಉತ್ತರಿಸು ದೇವಿ, ಈ ಮಾತು ಒಪ್ಪುವೆ ತಾನೆ?
ಸತ್ಯಕ್ಕೆ ಬಣ್ಣವೇತಕ್ಕೆ? ಇದೆ ತನ್ನದೇ,
ಸೌಂದರ್ಯಕೇಕೆ ಕುಂಚದ ಸ್ಪಷ್ಟ ಘೋಷಣೆ?
ಕಲೆಸದಿದ್ದಾಗ ಅವು ತಮ ತಮಗೆ ಶ್ರೇಷ್ಠವೇ.
ಅವನಿಗೇನೂ ಸ್ತುತಿ ಅಗತ್ಯವಿಲ್ಲದ್ದಕ್ಕೆ
ಮೌನವಿರುವುದೆ ನೀನು? ಬೇಡ, ನಿನಗಿದು ಸಾಧ್ಯ:
ಹೊನ್ನ ಸ್ಮಾರಕ ಮೀರಿ ಯುಗ ಯುಗಾಂತಕ್ಕೆ
ಸ್ತುತಿಗೂಳ್ಳುವಂತೆ ಅವನನ್ನು ಉಳಿಸುವ ಕಾರ್ಯ
ನೀ ಮಾಡು ನಿನ್ನ ಕರ್ತವ್ಯ, ಕಲಿಸುವೆ ನಿನಗೆ
ಈಗಿನಂತೇ ಅವನು ಮುಂದೆಯೂ ಉಳಿವ ಬಗೆ.
*****
ಮೂಲ: ವಿಲಿಯಂ ಷೇಕ್ಸ್‌ಪಿಯರ್
Sonnet 101
O truant Muse, What shall be thy amends