ಆಡೋನು ಬಾ ಅಲಾವಿ
ನೋಡೋನು ಗಡ ನಡೆ                    ||ಪ||

ಪಂಜ ತಾಬೂತು
ಕಂಜರಹೀ ಮಾತು
ಅಂಜಲಾಗದೆ ಗಡನಡೆ                     ||೧||

ಕರ್ಬಲ ಹೋಳಿ
ಮಾರ್ಬಲ ಮಾಯಾ ತುಳಿ
ತರಬಿ ತರಬಿ ತೋಲುತಾ ಗಡ ನಡೆ        ||೨||

ವಾಸನೆಂಬುವ ಸುಖ
ಐಸುರ ಮೊಹರಮ್
ಶಿಶುನಾಳಧೀಶನು ಅಸಮ ತಾನಾಗಿಹ       ||೩||
*****