ಮುನಿಯ ಬೇಡ ಪ್ರಕೃತಿ ಮಾತೆ ಗೊತ್ತು ನಾವು ಕಟುಕರು ಇರಲಿ ಕರುಣೆ ಇನ್ನು ಕೊಂಚ ನಾವು ನಿನ್ನ ಕುವರರು ನೀನು ತಾಯಿ ಪೊರೆದೆ ನಮ್ಮ ಇನಿತು ನೋವು ಆಗದಂತೆ ಇದನು ಅರಿಯದೆ ನಾವು ಬೆಳೆದೆವು ಎಲ್ಲ ಕ್ರೌರ್‍ಯ ನಾಚುವಂತೆ ಇಂಥ ತಪ್ಪಿಗೆ ಒಂದು ಏಟು ನೀನು ಕೊಟ...

ಕವಿತೆ ಓದಿ ಎಂದರು ಅವರು ಹಾಡಿ ಹಾಡಿ ಎಂದರು ಇವರು ಓದುವುದೋ ಇದು ಹಾಡುವುದೋ ಒಟ್ಟನಲ್ಲಿ ಹೃದಯ ತಟ್ಟಿದರೆ ಸರಿ ಅದೊಂದು ಸೇತುವೆ ಸೇತುವೆಗಳಿರುವುದೇ ದಾಟುವುದಕ್ಕೆ ಅದನ್ನೇಕೆ ಕೆಡಹುವಿರಿ ಬಿಡಿ ಪ್ರವಾಹ ಬಂದರೆ ಅದೇ ಬೀಳುತ್ತದೆ ಮತ್ತೆ ಕಟ್ಟಿದರಾಯಿ...

ದರ್ಗಾದಲ್ಲಿ ಅತ್ತರು ಘಮಘಮಿಸುತ್ತಿದೆ ದೇಗುಲದಲ್ಲಿ ಗಂಧ ಪರಿಮಳಿಸುತ್ತಿದೆ ಅವರು ಸರ್ವಶಕ್ತನಲ್ಲಿ ನಿವೇದಿಸಿಕೊಳ್ಳುತ್ತಿದ್ದಾರೆ ಇವರು ಸರ್ವಾಂತರ್ಯಾಮಿಯಲ್ಲಿ ಪ್ರಾರ್ಥಿಸುತ್ತಿದ್ದಾರೆ. ದೇವರೇ… ಹಗೆತನದ ಹುಟ್ಟಡಗಲಿ ಗೆಳೆತನವು ನಿತ್ಯ ಒದಗ...

“ಚಿರಂಜೀವಿ” ಕ್ಲಿನಿಕ್ ಮಲೆನಾಡು ಭಾಗದಲ್ಲಿ ಹೆಸರು ಮಾಡಿದ ಡಾಕ್ಟ್ರು ಶಾಪ್. ಚಿರಂಜೀವಿ ಕ್ಲಿನಿಕ್ ಇರುವುದು ಮಳೆ ಕಾಡಿಗಳಿಂದಲೇ ತುಂಬಿದ ಆಗುಂಬೆಯ ಪರಿಸರದಲ್ಲಿ. ವರ್‍ಷದ ಸುಮಾರು ಆರು ತಿಂಗಳುಗಳ ಕಾಲ ಭೋರ್‌ಗರೆವ ಮಳೆಗಾಲ. ಆಕಾಶವೇ...

ಮೊದಲು ಬಂದ ಕಿವಿಗಿಂತ ಕೊಂಬಿನದ್ದೇ ಕಾರುಬಾರು ನಾಲ್ವತ್ತು ಸಂವತ್ಸರಗಳ ಗೆಳೆತನವಿದ್ದರೂ ಕುತಂತ್ರದಲಿ ಸುಳ್ಳು ಚಾಡಿಯ ಹೊಸೆಯುತ ಹಾಕುವರು, ಹಾಕಿಸುವರು ಚೂರಿ ಬೆನ್ನಿಗೆ ಬೆಲೆಯೇ ಇಲ್ಲ ಗೆಳೆತನಕೆ, ಹಿರಿತನಕೆ ರಕ್ತ ಸಂಬಂಧಕ್ಕೂ ಮಿಗಿಲಾದುದು ಸ್ನೇಹ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...