ಸ್ಥಾವರ
ಕಲ್ಲುಗಳೇ ಹಾಗೆ ಕಿಡಿಗಳನ್ನು ಮಾತ್ರ ಹಾರಿಸುತ್ತವೆ ತಾವೆಂದೂ ಉರಿಯದೆ ಹಾಗೇ ಉಳಿಯುತ್ತವೆ *****
ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು. ಹತ್ತಿ ಬಿಡಿಸಿ ಮನೆಯಕೋಣೆ ತುಂಬಿದೆ. ಇನ್ನೊಂದು ವಾರದಲ್ಲಿ ಬಟಾರಗಳಲ್ಲಿ ತುಳಿದು, ಚಕ್ಕುಗಳನ್ನು ಗಂಜಿಗೆ ಸಾಗಿಸಬೇಕು. ಹೊಲದಲ್ಲಿ ಜೋಳದ ರಾಶಿ, ಅಳೆಯಲು ಸಿದ್ಧವಾಗಿದೆ. ಮೇಟಿ ಮುಳುಗಿ ಹೋಗುವಂತಹ ದೊಡ್ಡ […]