ಆಶಯ
ಬೇಲಿ ಭ್ರಮಿಸುತ್ತೆ ಬೇರ್‍ಪಡಿಸಿದಂತೆ ಮನುಜರನ್ನು ಮನ ಮನೆಗಳನ್ನು ಅವರ ನಾಡನ್ನು ಬಳ್ಳಿ ಹಬ್ಬಿಕೊಳ್ಳುತ್ತೆ ಆಶ್ರಯಿಸಿ ಬೇಲಿಯನ್ನು ಸ್ನೇಹದ ಸೇತುವೆಯಾಗಿ ಹೊಮ್ಮಿಸುತ್ತೆ ಹೂಗಳನ್ನು *****
“ಬಯಲು ಬಯಲನೆ ಉಂಡು, ಬಯಲು ಬಯಲಾಗಿತ್ತು……” ಸಂಜೆ ಏಳಕ್ಕೆ ಬೀಚ್ ಹತ್ತಿರ ಬರುತ್ತೇನೆ….. ಕಾಯುತ್ತಿರು. ಯುದ್ಧನೌಕೆ ಮ್ಯೂಜಿಯಂ ಒಳಗಿಂದ ಪುಟಾಣಿ ರೈಲು ಹಳಿ ದಾಟಲು ಇರುವ ಕಾಲುದಾರಿಯ ಮೂಲಕ ಬೀಚ್ ತಲುಪುತ್ತೇನೆ. ಸಣ್ಣಗೆ ಮರ್ಕ್ಯೂರಿ ಬೆಳಕಿದೆ. ಹೆದರಿಕೆಯಿಲ್ಲ… ಆ ಕಡೆಯಿಂದ ಬಂದ ದೂರವಾಣಿಯಲ್ಲಿ ಆಕೆ ಆಗ್ರಹಪೊರ್ವಕವಾಗಿ ಹೇಳಿದಳು. ’ಆಯ್ತು’ ಎಂದು ಉತ್ತರಿಸಿ ಮೊಬೈಲ್ ಕಟ್ ಮಾಡಿದ […]