ವಿಪರ್ಯಾಸ
ಮುಳ್ಳುಗಳ ನಡುವೆಯೂ ನಗುವ ಹೂ ಸುಪ್ಪತ್ತಿಗೆಯಲ್ಲಿ ನಲುಗುತ್ತದೆ *****
ಬೆಳಗಿನ ಜಾವದಲ್ಲಿ ಸುಖಕರವಾದೊಂದು ಕನಸು. ನಾನು ಸತ್ತದ್ದು. ನನ್ನ ಕಳೇಬರ ನಾನು ಮಲಗುವ ಹಾಸಿಗೆಯಲ್ಲಿ, ನಾನು ಯಾವಾಗಲೂ ಮಲಗುವ ರೀತಿಯಲ್ಲಿ, ಅಂಗಾತ, ಮೇಲ್ಮುಖವಾಗಿ, ಮುಖದಲ್ಲಿ ಅಪೂರ್ವಶಾಂತಿ, ಬಲಗೈ ಬಲಯಕೃದಲ್ಲಿ ಹಾಸಿಗೆಯ ಮೇಲೆ, ಎಡಗೈ ಎದೆಯ ಮೇಲೆ ನಿರಾಳವಾಗಿ ಅಡಿಯಿಂದ ಮುಡಿಯವರೆಗೆ ಹೂವುಗಳಿರುವ ಶ್ವೇತ ಬಣ್ಣದ ಚಾದರನ್ನು ಹೊದ್ದು, ಅಲುಗಾಡದೆ, ಹಾಸಿಗೆಯ ಆರಡಿಯನ್ನು ಮೀರದ ರೀತಿಯಲ್ಲಿ ಮಲಗಿದಲ್ಲೆ […]