
ಸ್ವರ
ಮಾರ್ಚೆಸಾ ಬೊರ್ಗಿ, ಸಾಯುವ ಕೆಲವೇ ದಿವಗಳ ಮುಂಚೆ, ತನ್ನ ಮಗ ಸಿಲ್ವಿಯೋನನ್ನು ಡಾ. ಗಿಯೂನಿಯೋ ಫಾಲ್ಸಿಗೆ ತೋರಿಸಬೇಕೆಂದು ನಿರ್ಧರಿಸಿದ್ದಳು. ಅವಳ ಮಗನ ಕಣ್ಣು ಕುರುಡಾಗಿ ಆಗಲೇ ಒಂದು ವರ್ಷವಾಗಿತ್ತು. ಇಟಲಿ ಮತ್ತು ವಿದೇಶದ ಖ್ಯಾತ ನೇತ್ರ ಚಿಕಿತ್ಸಾ ತಙ್ಞರಲ್ಲಿ ಮಗನನ್ನು ಪರೀಕ್ಷಿಸಿದ್ದಳು ಕೂಡ. ಅವರೆಲ್ಲರೂ ಆತ ಗುಣಪಡಿಸಲಾಗದ ಗ್ಲೌಕೋಮಾ (ಕಣ್ಣುಗುಡ್ಡೆಗಳಲ್ಲಿ ಬಿಗಿತ ಕಾಣಿಸಿಕೊಳ್ಳುವ ರೋಗ – […]