Home / ಕವನ / ಕವಿತೆ

ಕವಿತೆ

ಬರಲಿದ್ದಾನೆ ರಾಮ ಲಂಕೆಗೆ ತಾಯೀ ಬುಡವಿಲ್ಲ ನಿನ್ನ ಶಂಕೆಗೆ ಹಾಗಾದರೆ ಹೇಳು ಸಖಿಯೇ ? ನನ್ನ ಶ್ರೀರಾಮ ಅತ್ತ ಸುಖಿಯೇ ? ವಾನರರು ಕಟ್ಟಿದ್ದಾರೆ ಸೇತುವೆ ಇತ್ತ – ರಾಕ್ಷಸನ ಕಣ್ಣುಗಳು ಬಾತಿವೆ ಹೆಜ್ಜೆ ಹೆಜ್ಜೆಗೂ ಗೂಢಚಾರ ತರುತ್ತಿದ್ದಾನೆ ಸಮಾ...

ನೆಲದೊಡಲಾಳದ ಭಾವಬೇರುಗಳ ಹೊಯ್ದಾಟ ಚಡಪಡಿಕೆ ನೋವು ಹತಾಶೆ ಕಿಡಿಬಿದ್ದರೆ ಕೊನೆ, ಭಯ ಆತಂಕ ಕಾದು ಕಾದು ಬೆಂಡಾದ ಕಣ್ಣುಗಳಿಗೆ ಬೆಂದ ಎದೆಗೂಡು ಹಸಿದೊಡಲುಗಳಿಗೆ ತುಂಬಿನಿಂತ ಕಪ್ಪನೆಯ ಮೋಡಗಳ ಕಂಡು ಸಂಭ್ರಮ ಒಳಗೊಳಗೆ ಹನಿಹನಿಗೆ ಹಪಿಹಪಿಸಿ ಉಸುರಿಗೆ ಕ...

ಯಾವುದೀ ಹೊಸ ಸಂಚು ಎದೆಯಂಚಿನಲಿ ಮಿಂಚಿ ಮನಸು ಕನಸುಗಳನ್ನು ಕಲೆಸಿರುವುದು? ಗಿರಿಕಮರಿಯಾಳದಲಿ ತೆವಳಿದ್ದ ಭಾವಗಳ ಮುಗಿಲ ಮಂಚದೊಳಿಟ್ಟು ತೂಗುತಿಹುದು? ಸತ್ತ ಬಾಳಿಗೆ ಮತ್ತೆ ಅಮೃತವೆರೆದು ಕತ್ತಲಾಳಗಳಲ್ಲಿ ದೀಪವುರಿದು, ಬಾಳು ಕೊನೆಯೇರುತಿದೆ ಬೆಳಕಿನ...

ನೀವೀಗ ಕಲಿಸುತ್ತಿರಬಹುದು ಭೂಮಿತಿಯ ಪ್ರಮೇಯವೊಂದನ್ನು ಎಸ್. ಎಸ್, ಎಲ್. ಸಿ. ಯಲ್ಲಿ ಗಣಿತಕ್ಕೆ ನೂರಕ್ಕೆ ನೂರು ಪಡೆದ ವಿದ್ಯಾರ್ಥಿ ನೀವು ಈಗ ವಿದ್ಯಾರ್ಥಿಗಳ ಎದುರು ನಿಂತಿದ್ದೀರಿ ಹೇಳುತ್ತಿದ್ದೀರಿ : ಲುಕ್ ಹಿಯರ್ ಆ ಅದೇ ಬೆಂಚಿನ ಮೇಲೆ ನಾನು ಕೂ...

ಮಲಗೋ ಮಲಗೆನ್ನ ಮರಿಯೆ ಬಣ್ಣದ ನವಿಲಿನ ಗರಿಯೆ, ಎಲ್ಲಿಂದ ಬಂದೆ ಈ ಮನೆಗೆ ನಂದನ ಇಳಿದಂತೆ ಬುವಿಗೆ? ತಾವರೆದಳ ನಿನ್ನ ಕಣ್ಣು ಕೆನ್ನೆ ಮಾವಿನ ಹಣ್ಣು, ಸಣ್ಣ ತುಟಿಯ ಅಂದ ಬಣ್ಣದ ಚಿಗುರಿಗು ಚಂದ, ನಿದ್ದೆಯ ಮರುಳಲ್ಲಿ ನಗಲು ಮಂಕಾಯ್ತು ಉರಿಯುವ ಹಗಲು! ...

ಕರ್ನಾಟಕಾಂಬೆಯ ಕನ್ನಡ ಮಾತೆಯೆ ಎಬ್ಬಿಸಮ್ಮ ತಾಯೆ ಎಬ್ಬೀಸೆ ನಿನ್ನಯ ಮಕ್ಕಳನೆಬ್ಬೀಸೆ ಕನ್ನಡ ಕಂದರನೆಬ್ಬೀಸೆ ಹಿಂದಿನ ಕವಿಗಳ ಹಿಂದಿನ ಸಿರಿಗಳ ಬಾಯ್ತುಂಬ ಹೊಗಳುತ್ತ ಮಲಗಿಹರ ಇಂದಿನ ಪರಿಗಳ ಮುಂದಿನ ಗುರಿಗಳ ಕೈಯಿಂದ ಮಾಡದೆ ಕುಳಿತಿಹರ ಪಂಪ ರನ್ನ ಕು...

ಇತಿಹಾಸ ನಮ್ಮನ್ನು ಒಗೆಯುತ್ತದೆ ಅದರ ಕಸದ ತೊಟ್ಟಿಗೆ ಕೊಳೆತ ಹಣ್ಣು ಹರಿದ ಚಪ್ಪಲಿಗಳ ಕಸದ ತೊಟ್ಟಿಗೆ ಬೀದಿ ನಾಯಿಗಳು ಬಾಯಿಡುವ ಕಸದ ತೊಟ್ಟಿಗೆ ಆ ಕಸದ ತೊಟ್ಟಿಯನ್ನು ಸಿಮೆಂಟಿನಿ೦ದ ಮಾಡಲಾಗಿದೆ ಕಸದ ತೊಟ್ಟಿ ಎ೦ದು ಕೆಂಪಕ್ಷರಗಳಲ್ಲಿ ಬರೆಯಲಾಗಿದೆ ‘...

ಬಾರೆ ನನ್ನ ದೀಪಿಕಾ ಮಧುರ ಕಾವ್ಯ ರೂಪಕ, ಕಣ್ಣ ಮುಂದೆ ಸುಳಿಯೆ ನೀನು, ಕಾಲದಾ ತೆರೆ ಸರಿದು ತಾನು, ಜನುಮ ಜನುಮ ಜ್ಞಾಪಕ. ನಿನ್ನ ಬೊಗಸೆಗಣ್ಣಿಗೆ, ಕೆನ್ನೆ ಜೇನು ದೊನ್ನೆಗೆ, ಸಮ ಯಾವುದೇ ಚೆನ್ನೆ ನಿನ್ನ ಜಡೆ ಹರಡಿದ ಬೆನ್ನಿಗೆ? ನಿನ್ನ ಕನಸು ಬಾಳಿಗ...

ನೀವು ಯಾವಾಗಲಾದರೂ ಈ ಕಡೆ ಬಂದರೆ ಬ್ರಿಕ್ಸ್ & ಟೈಲ್ಸ್ ಕಂಪೆನಿಯ ಕಾರ್ಮಿಕರನ್ನು ಒಮ್ಮೆ ಗಮನಿಸಿ. ಸುಟ್ಟ ಇಟ್ಟಿಗೆಗಳಂತೆ, ಬಿರುಕು ಬಿಟ್ಟ ಹಂಚಿನಂತೆ, ಉಗಿಬಂಡಿಯ ಬೆಂಕಿ ಹೊಗೆಯಿಂದ ಸೀದು ಕರಕಲಾದ ಆನೆ ತರಡಿನ ಮರದ ಕೊಂಬೆಗಳಂತೆ ಅಲ್ಲಲ್ಲಿ ಕಾ...

ಬನ್ನಿ ಭಾವಗಳೇ ಬನ್ನಿ ನನ್ನೆದೆಗೆ ಕರೆಯುವೆ ಕೈ ಬೀಸಿ ಬತ್ತಿದೆದೆಯಲ್ಲಿ ಬೆಳೆಯಿರಿ ಹಸಿರನು ಪ್ರೀತಿಯ ಮಳೆ ಸುರಿಸಿ || ಬನ್ನಿ ಸಂಜೆ ಹೊಂಬಿಸಿಲಿನ ಹೊಳೆಯೊಳು ಮೀಯುವ ಮುಗಿಲಿನಲಿ ತವರಿನೆದೆಗೆ ತಂಪೆರೆಯುವ ಮೇಘದ ಪ್ರೀತಿಯ ಧಾರೆಯಲಿ || ಲೋಕಕೆ ಹೊದಿ...

“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...

ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...