Home / ಕವನ / ಕವಿತೆ

ಕವಿತೆ

ಇವನು ಆಕಾಶದಾಗೆ ಇರೋ ಅಷ್ಟು ಹೊತ್ತು ಜನರೆಲ್ಲ ಇವನ ತೊತ್ತು ಬೆವರ್‍ ಸುರಿಸುತ್ತಲೇ ಇರ್‍ಬೇಕು ಎಷ್ಟು ಸುರಿಸಿದರೂ ಇನ್ನಷ್ಟು ಮತ್ತಷ್ಟು ಹಿಂಡಿ ಹೀರುವ ಇವನೊಬ್ಬ ಬೆಂಕಿ ನವಾಬ ಯಾವುದೋ ಗುಲಾಮಗಿರಿ ಕಾಲದ ಕೆಂಪು ಮೂತಿ ಸಾಹೇಬ *****...

ಒಂದು ಹೂವು ಇನ್ನೊಂದು ಮುಳ್ಳು ಒಂದು ಬಾನು ಇನ್ನೊಂದು ಭೂಮಿ ಒಂದು ಹಾಲು ಇನ್ನೊಂದು ಹಾಲಾಹಲ ಒಂದು ಹುಲ್ಲು ಇನ್ನೊಂದು ಕಲ್ಲು ಒಂದು ಅಮರಗಾನ ಇನ್ನೊಂದು ಘೋಷಣ ಒಂದು ರಸಜೇನು ಇನ್ನೊಂದು ಒಣಕಾನು ಒಂದು ತಿಳಿನೀರು ಇನ್ನೊಂದು ಗೊಡಗು ಕೆಸರು ಒಂದು ಕೂಸ...

ತೋಡುಗಳಿಂದ ಹೊಳೆಗೆ ಹೊಳೆಯಿಂದ ನದಿಗೆ ಹೋಗುವೆನು.  ಹಲವು ಭೂಖಂಡಗಳ ನದಿಗಳಲ್ಲಿ ಈಜಾಡುವೆನು.  ಹಲವು ನದಿಗಳ ನೀರು ಕುಡಿಯುವೆನು.  ಏಳು ಸಮುದ್ರಗಳನ್ನು ಹೊಗುವೆನು.  ತಿಮಿಂಗಿಲಗಳನ್ನು ನುಂಗುವೆನು. ನನ್ನ ಮೈಕಾಂತಿಗೆ ನಕ್ಷತ್ರಗಳು ಅಸೂಯೆಗೊಳ್ಳುವು...

ಈಗ ತಾನೆ ನೆತ್ತಿಯ ಮೇಲಿದ್ದ ಸೂರ್ಯ ಸಾಹೇಬರು ಬುತ್ತಿ ಬಿಚ್ಚುವಷ್ಟರಲ್ಲಿ ಎಲ್ಲಿ ಮಾಯವಾದರು? ಮರದ ನೆರಳಲ್ಲಿ ಕುಳಿತ ರೈತ ಯೋಚಿಸಿದ. ಸಾಹೇಬರು ಮೋಡದ ಮರೆಯ ಆಂಟಿ ರೂಂನಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ ಈಗವರು ಸಿಗುವುದಿಲ್ಲ, ಅವರಿಗೀಗ ಲಂಚ್ ಬ...

ಗಾಳಿಪಟದ ಹಾರಾಟವ ನಿಯಂತ್ರಿಸುವ ಹುಡುಗನ ಕೈ ಕರುವಿನ ಮೇಯುವಿಕೆಯನ್ನು ನಿಯಮಿಸುವ ಗೂಟ ತಾಯಿಯ ತಿರುಗಾಟವನ್ನು ತಡೆಯುವ ಕರು ಹಡಗಿನ ವೇಗವನ್ನು ಕುಂಠಿಸುವ ಸಾಗರದಲೆ ಹಕ್ಕಿಯ ಹಾರಾಟವನ್ನು ಸೋಲಿಸುವ ಬಾಹುಮೂಲಪ್ರಾಣ ಚಿಗುರು ಛತ್ರಿಯ ಗಟ್ಟಿ ಹಿಡಿಕೆ ತ...

ಕರೆದರೆ ಬರುವುದಿಲ್ಲ ಏಡಿಗಳು-ಪ್ರವಾಹದ ವಿರುದ್ಧ ಕೂಡ ಒಂದೇ ಓಟ ಓಡಬಲ್ಲವು.  ಓಡಿ ಕೆಸರಿನ ಕೆಳಗೊ, ಮಾಟೆಗಳ ಒಳಗೊ ಅಡಗಿ ಕುಳಿತು ಕೊಳ್ಳುತ್ತವೆ.  ಹೋದರೆ ಇವರು ಎಂದು ಇಣಿಕಿ ನೋಡುತ್ತವೆ. ಹುಳ ಹುಪ್ಪಟೆಗಳ ಆಸೆ ತೋರಿಸಿ ಕರೆಯಬೇಕು ಇವನ್ನು. ಕಚ್ಚಿ...

ಪಡುವಣದ ಸಾಗರದಲ್ಲಿ ಮುಳುಗಿ, ಮೂಡಣದ ಪರ್ವತ ಕಣಿವೆಯಿಂದ ಉದಯಿಸುವವನು, ಇವನೇ ಸೂರ್ಯ, ಸೂರ್ಯ ಇವನೊಬ್ಬನೆ ಅಬ್ಬಾ ಏನು ಸೊಕ್ಕು, ಬರೀ ಬಂಡಲ್ ಗಿಮಿಕ್ಕು ಪಿ.ಸಿ. ಸರ್ಕಾರ್‌ರವರ ಇಂದ್ರ ಜಾಲದ ಟ್ರಿಕ್ಕು *****...

ಅಗೊ ಹೋಗುತ್ತಿವೆ ನೋಡಿ ನೋಟುಗಳ ಸಾರೋಟುಗಳು ಹಣದ ಹೆಣಗಳ ಮೆರವಣಿಗೆಗಳು ರಣಹದ್ದುಗಳ ಕಾಲುಗುರು ಕೊಕ್ಕುಗಳು ಗಂಟೆ ಜಾಗಟೆಗಳ ಶಂಖವಾದ್ಯಗಳು ಜುಟ್ಟು ಜನಿವಾರ ಸಿವುಡುಗಂಟುಗಳು ನಾಮ ಪೇಟಗಳ ಪೇಟೆ ಮಾಮೂಲು ಮಾಲುಗಳು ಬರೀ ಮೈಯಲ್ಲಿ ಹುಟ್ಟುಬಟ್ಟೆಯಲ್ಲೇ ...

ಒಂದು ಕಲ್ಲಂಗಡಿ ಹಣ್ಣನ್ನು ಕತ್ತರಿಸಿದರೆ ಅದನ್ನು ಮತ್ತೆ ಒಟ್ಟಿಗೆ ಸೇರಿಸಲಿಕ್ಕಾಗುವುದಿಲ್ಲ ಎಂದೆಲ್ಲ ನೇನೇಕೆ ಹೇಳಲಿ?  ಎಲ್ಲರಿಗೂ ಗೊತ್ತಿರುವ ತೀರ ಸಾಮಾನ್ಯವಾದ ಸಂಗತಿಗಳನ್ನು ಬಿಟ್ಟುಬಿಡೋಣ.  ಬರೇ ಒಂದು ಕಲ್ಲಂಗಡಿ ಹಣ್ಣನ್ನು ಕತ್ತರಿಸುವುದು ...

ಸೂರ್ಯ ಅಂಥವನು ಇಂಥವನು ಅಂತ ಅಟ್ಟಕ್ಕೇರಿಸಿ ಹೊಗಳಿ ಹೊತ್ಕೊಂಡು ಕುಣೀಲಿಕ್ಕೆ ಅವನೇನು ಮನುಷ್ಯನೇ.  ಏನು ಹೆಣ್ಣೇ ಅಥವಾ ಗಂಡೇ? ತಿಳಿಕೊಳ್ಳಿ ಅದೊಂದು ಸದಾ ಹೊತ್ತಿಕೊಂಡು ಉರೀತಿರೋ ಗುಂಡಾದ ಬರೀ ಬೆಂಕಿಯ ಉಂಡೆ *****...

“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...

ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...