Home / ಬಾಲ ಚಿಲುಮೆ

ಬಾಲ ಚಿಲುಮೆ

ಭಾಳ ಒಳ್ಳೇವ್ರ್‍ ನಮ್ ಮಿಸ್ಸು ಏನ್ ಹೇಳಿದ್ರೂ ಎಸ್ಸೆಸ್ಸು, ನಗ್ತಾ ನಗ್ತಾ ಮಾತಾಡ್ತಾರೆ ಸ್ಕೂಲಿಗೆಲ್ಲ ಫೇಮಸ್ಸು. ಜಾಣಮರಿ ಅಂತಾರೆ ಚಾಕ್ಲೇಟಿದ್ರೆ ಕೊಡ್ತಾರೆ, ಬೆನ್ನು ತಟ್ಟಿ ಕೆನ್ನೆ ಸವರಿ ಬೆಣ್ಣೆ ಕಂದ ಅಂತಾರೆ! ಆಟಕ್ ಬಾ ಅಂತಾರೆ ಆಟದ್ ಸಾಮಾನ...

“ಶಿವನಿಗ್ಯಾಕೆ ಮೂರ್‍ ಕಣ್ಣು?” “ಅವನು ದೇವ್ರಲ್ವ?” “ಲಕ್ಷ್ಮೀಗ್ಯಾಕೆ ಅಷ್ಟೊಂದು ಕಯ್?” “ಅವಳೂ ದೇವ್ರಲ್ವ?” “ಬ್ರಹ್ಮಂಗ್ ನಾಕ್‌ತಲೆ ಯಾಕಮ್ಮ?” “ವಿಷ್ಣೂ ಮಗನಲ್ವ...

ಅಪ್ಪ ಅಮ್ಮ ಎಲ್ಲಾರ್‍ಗಿಂತ ಅಜ್ಜಿ ನಂಗೆ ಇಷ್ಟ ಅಜ್ಜಿಗೂನು ಅಷ್ಟೆ ನಾನು ಇಲ್ದೆ ಹೋದ್ರೆ ಕಷ್ಟ. ಗಲ್ಲ ಹಿಂಡಿ ಮುದ್ದು ಮಾಡಿ ಚುಕ್ಕು ಬಡಿದು ತೊಡೇಲಿ, ನಿದ್ದೆ ಬರ್‍ಲೇ ಬಿಡ್ತಾಳಜ್ಜಿ ಕಥೆ ಹೇಳ್ತಾ ಕಡೇಲಿ! ನನ್ ಗೊಂಬೇಗೂ ಸ್ನಾನ ಮಾಡ್ಸಿ ಬಟ್ಟ ತೊಡ...

“ಮರಗಳೆಲ್ಲಾ ಯಾಕೆ ಅಷ್ಟೊಂದ್ ದೊಡ್ಡಕ್ ಇರ್‍ತಾವೆ?” “ಒಳ್ಳೇವ್ರೆಲ್ಲಾ ಹಾಗೇ ಮರಿ, ಎತ್ತರ ಇರ್‍ತಾರೆ.” “ಒಳ್ಳೇವ್ರಾದ್ರೆ ಯಾಕೆ ಮತ್ತೆ ಮಾತೇ ಆಡೊಲ್ಲ?” “ಮಾತಾಡಿದ್ರೆ ಬಂತೇ ಚಿನ್ನ ನಡತೆಗೆ ತಪ...

ಅಮ್ಮಾ ಅಮ್ಮಾ ಒಂದೇ ಒಂದು ಉಂಡೆ ಕೊಡ್ತೀಯಾ? ನೆಂಚ್ಕೊಳ್ಳೋಕೆ ಜೊತೆಗ್ ಒಂದೇ ಚಕ್ಲಿ ಇಡ್ತೀಯಾ? ಅಮ್ಮಾ ನಂಗೆ ಹಸಿವೆ ಇಲ್ಲ ಊಟ ಬೇಡಮ್ಮ ಅದಕ್ಕೆ ಬದಲು ಎರಡೇ ಎರಡು ದೋಸೆ ಮಾಡಮ್ಮ. ಕ್ಲಾಸಿಗೆಲ್ಲ ನಾನೇ ಫಸ್ಟು ಎಲ್ಲ ಆಟ್ದಲ್ಲಿ! ಇನ್ನೊಂದ್ ಸ್ವಲ್ಪ ಬ...

ಇಲೀ ಮರೀ ಇಲೀ ಮರೀ ಗಿಡ್ಡು ಪುಟಾಣಿ ಇಲೀ ಮರೀ ಆಟಕ್ ಬಂದ್ರೆ ಕೊಡ್ತೀನಿ ಬಿಸಿ ಬಿಸಿ ಕಡ್ಲೆ ಮಸಾಲ್ ಪುರಿ. ಪುರ್ ಪುರ್ ಓಡ್ತೀ ಯಾಕಪ್ಪ? ನಾನೇನ್ ಪೋಲೀಸ್ ಅಲ್ಲಪ್ಪ ಹತ್ತಿರ ಬಂದು ಆಡಿದರೆ ತಿಂಡೀ ತೋರಿಸ್ತೀನಪ್ಪ. ಚಕ್ಕುಲಿ ತುಂಬಿ ಡಬ್ಬಕ್ಕೆ ಅಮ್ಮ ...

ಅಮ್ಮ ನಂಗೆ ಮರೀದೆ ಕೊಡೆ ಕಾಯಿ ಬೆಲ್ಲ ಇಲ್ದೆ ಹೋದ್ರೆ ಬೆಳಿಗ್ಗೆ ಬೇಗ ಎಚ್ಚರ ಆಗಲ್ಲ. ಬೇಕು ನಂಗೆ ಪ್ಯಾಂಟು ಕೋಟು ಬೂಟು ಎಲ್ಲ ಸ್ಮಾರ್ಟ್ ಬಾಯ್ ಅಂದ್ರೆ ಅದೆಲ್ಲ ಇರಲೇಬೇಕಲ್ಲ! ಚಾಕ್ಲೇಟ್ ಬರ್ಫಿ ಕೊಬ್ರಿಬಿಸ್ಕತ್ ಎಲ್ಲಾ ಬೇಕಲ್ಲೇ ಬರೀ ಬಾಯಲ್ ಓದಿ...

ಮಕ್ಕಳು :  ರಾತ್ರಿ ಬೇಗ ಮಲಗಿ ಬೆಳಗ್ಗೆ ಆರಕ್ಕೇಳ್ತೀವಿ ಸಖತ್ತು ತಿಂಡಿ ಬಾರಿಸಿ ತಪ್ಪದೆ ಪಾಠ ಓದ್ತೀವಿ. ಗುಂಡ :    ತಿಂಡಿ ತಿಂಡಿ ತಿಂಡಿ ತಿನ್ತೀನೊಂದು ಬಂಡಿ! ಮಕ್ಕಳು :  ಹಟವೇ ಮಾಡದೆ ನಗ್ತಾ ದಿನಾ ಸ್ಕೂಲಿಗೆ ಹೋಗ್ತೀವಿ, ಎಲ್ಲರ ಜೊತೇಲು ಕೂತ...

ಅಡಿಗೆ ಮನೇಲಿ ನೂರಾರ್ ಡಬ್ಬ ಸಾಲಾಗ್ ಕೂತಿದ್ದಾವೆ ನಾನು ಅಮ್ಮ ಹಂಚ್ಕೋತೀವಿ ಎಲ್ಲಾ ಡಬ್ಬನೂವೆ. ನಾಕೇ ಡಬ್ಬ ಸಾಕು ನಂಗೆ ಉಳಿದದ್ ಅಮ್ಮಂಗೇನೆ, ಪಾಪ ಅಡಿಗೆ ಮಾಡ್ಬೇಕಲ್ಲ ಟೈಮಿಗ್ ಎಲ್ಲಾರ್ಗೂನೆ! ಅಲ್ದೆ ಅಮ್ಮ ದೊಡ್ಡೋಳಲ್ವ? ದೊಡ್ಡೋರ್‍ಗೇನೆ ಜಾಸ್ತ...

ಪುಟಾಣಿ ಇರುವೆಗೆ ನಾನು ಹ್ಯಾಗೆ ಕಾಣ್ತಾ ಇರಬೋದು? ನಮ್ ಕಾಲ್ಬೆರಳೇ ಅದಕ್ಕೆ ಭಾರೀ ಬಂಡೆ ಇರಬೋದು! ಆದ್ರೂ ಅದು ಹೇಗೋ ಮಾಡಿ ಹತ್ತೇ ಬಿಡುತ್ತೆ! ಅಟ್ಲು ಮೇಲಿನ್ ಡಬ್ಬದೊಳಕ್ಕೂ ಇಳಿದೇ ಬಿಡುತ್ತೆ! ನೋಡೋಕ್ ಇರುವೆ ಪುಟ್ಟಕ್ಕಿದ್ರೂ ಕಷ್ಟಕ್ಕ್ ಹೆದರಲ್...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...