ಸವಿತಾ ನಾಗಭೂಷಣ

ಕವಿಯ ಕಳವಳ

ನಸುಕಿನಲ್ಲಿ ಹಲ್ಲು ಮೂಡದ ಹಸುಳೆಯನ್ನು ಅವರು ಹೊಸಕಿ ಹಾಕಿದರು ಹಾಡು ಹಗಲೇ ಹರೆಯದ ಹುಡುಗಿಯನ್ನು ಎಳೆದಾಡಿದರು ಮುಸ್ಸಂಜೆಯಲ್ಲಿ ಮನೆಗೆ ಮರಳುತ್ತಿದ್ದ ಮುದುಕನನ್ನು ಮುಗಿಸಿದರು. ಬಲಿಯಾದವರು-ಬಲಿಗೈದವರು ಇಬ್ಬರೂ ನನ್ನ […]

ಕರೆ

ಚೆಲುವ ಬಣ್ಣಿಸಬಹುದು ಒಲವ ಬಣ್ಣಿಸಬಹುದೆ? ಹೇಗೆ ಬಣ್ಣಿಸಲದನು ನಲುಗದಂತೆ… ಬಣ್ಣನೆಗೆ ಮೀರಿದುದು ಹೀಗೆಂದು ತೋರುವುದು ಚಂದಿರನ-ನೈದಿಲೆಯ ಸ್ನೇಹದಂತೆ ನದಿಯ ಬಣ್ಣಿಸಬಹುದು ಒಳಗುದಿಯ ಬಣ್ಣಿಸಬಹುದೆ ಹೇಗೆ ಬಣ್ಣಿಸಲಿ ಕುದಿಯ […]

ಹೇಗೆ ದಂಡಿಸಿದ್ದಾರೆ ನೋಡಿ…

ನುಜ್ಜುಗುಜ್ಜಾಗಿದೆ ಪ್ರೀತಿ ಸಿಲುಕಿ ಈ ಚಕ್ರದಡಿ ಬೂದಿಯಾಗಿದೆ ಸುಟ್ಟು ಬೆಟ್ಟದ ಆ ತಪ್ಪಲಲಿ ಅಗೋ ಅಲ್ಲಿ ತೂಗುತಿದೆ ಮರದಲಿ ಇಗೋ ಇಲ್ಲಿ ತೇಲುತ್ತಿದೆ ಹುಚ್ಚು ಹೊಳೆಯಲಿ. ಕೊಚ್ಚಿ […]

ಏನದು ಪ್ರೇಮ?

ಏನದು ಪ್ರೇಮ… ಅಪೂರ್ವವಾದ ವಸ್ತುವೆ ಅಪರಿಮಿತವಾದ ಚೈತನ್ಯವೆ ಅಸದೃಶ ಅನುಭೂತಿಯೆ? ಏನದು ಪ್ರೇಮ… ಜಾಜ್ವಲ್ಯಮಾನ ಬೆಳಕೆ ಪರಮ ಪರಿಮಳದ ಹೂವೆ? ಪ್ರೇಮಕ್ಕೆ ಸಪ್ತವರ್ಣವಂತೆ ಮಕರಂದಕಿಂತಲೂ ಸಿಹಿಯಂತೆ ನಿಜವೇನು? […]

ಏನಾಗುವೆ?

ಇಷ್ಟ ದೇವತೆಯೆಂದು ಅಷ್ಟ ಸ್ತೋತ್ರವ ಹಾಡಿ ಧನ-ಕನಕ ಅರ್ಪಿಸಿ ಪೂಜಿಸಿದವರೆ… ಎಲ್ಲಿ ನಾರಿಯರು ಪೂಜಿಸಲ್ಪಡುತ್ತಾರೋ ಅಲ್ಲಿ ದೇವತೆಗಳ ಹಾಜರಿ ಪ್ರಮಾಣಿಸಿದವರೇ… ‘ತಾಯಿಗಿಂತ ದೇವರಿಲ್ಲ… ಜನನಿ ತಾನೆ ಮೊದಲ […]

ನೀನು ದೇವಾ ಒಳಗಣವನು…

ಬುಡವಿಲ್ಲದಿರೆ ಮರ ಫಲ ನೀಡುವುದೇನು? ತಳವಿಲ್ಲದಿರೆ ಶಿರ ಬಲ ಪಡೆವುದೇನು ? ಕೆಸರ ಬಸಿರಲ್ಲಿ ಕಮಲ ಉಸಿರಾಡಿದರೆ ಕುಂದೇನು? ಕಟ್ಟಕಡೆಯವ ದೀಪವಾಗಿ ದಾರಿ ತೋರಿದೊಡೆ ತಪ್ಪೇನು? ಅಡಿ […]

ಸೂತ್ರ

ಯಾರಿಗೆ ಏನೆಲ್ಲ ಕೊಟ್ಟೆ ಯಾರಿಂದ ಏನೆಲ್ಲ ಪಡೆದೆ? ಪ್ರೀತಿ, ಸ್ನೇಹ, ಕರುಣೆ ಕೂಡಿದೆ. ಸೇಡನ್ನು ಕೇಡಿನಿಂದಲೂ ಸಂಚನ್ನು ವಂಚನೆಯಿಂದಲೂ ಗುಣಿಸಿದೆ ಪ್ರೇಮವನ್ನು ಕಾಮನೆಯಿಂದ ಭಾಗಿಸಿದೆ. ಆನಂದ-ಅನುಭೂತಿಯ ಮೂಲ? […]

ಲೋಕದಲಿ ಪುಟ್ಟಿದ ಬಳಿಕ…..

ಸೀರೆ ಸುತ್ತಿಕೊಳ್ಳುವಾಗ ದ್ರೌಪದಿ ಉಂಗುರ ಎತ್ತಿಕೊಳ್ಳುವಾಗ ಶಕುಂತಲೆ ಒಲೆ ಹೊತ್ತಿಕೊಳ್ಳುವಾಗ ಸೀತೆ ಯಾಕೆ, ಯಾಕೆ ನೆನಪಾಗಬೇಕು? ಕೆರೆಯ ಏರಿಯ ಮೇಲೆ ಭಾಗೀರಥಿ ಎಡವಿದ ಕಲ್ಲುಗಳಲ್ಲಿ ಒಬ್ಬಬ್ಬಳೂ ಮಹಾಸತಿ […]

ಹೆಚ್ಚಾಗಲಿ ಆಯಸ್ಸು

ನೀವು ಶಿವಮೊಗ್ಗೆಯಲ್ಲಿದ್ದ ಹೊತ್ತು- ನಾವು ಆಗ ತಾನೆ ಕಣ್ಣು ಬಿಟ್ಟಿದ್ದೆವು-ಪುಟ್ಟ ಸಸಿಗಳು ಸಹ್ಯಾದ್ರಿಯ ಸಂಜೆ ಐದರ ಮಳೆಯಲ್ಲಿ ತೇಲಿಬಿಟ್ಟ ಕಾಗದದ ದೋಣಿ ಕೆಸರುಗಾಲಲ್ಲೆ ಲಾಗಾ ಹಾಕಿದ್ದೆವು! ನೀವು […]

ಕೋವಿ ಹಿಡಿಯದ ಕೈಗಳೇ ಕಂಬನಿ ಒರೆಸಬೇಕು…

ಒಬ್ಬ ಮನುಷ್ಯ ಹಸಿವೆಯಂದ ಎಷ್ಟು ನರಳಬಹುದೋ ಅಷ್ಟು ದಾರುಣವಾಗಿ ಅವನು ನರಳಿದ್ದ. ಒಂದು ತುಂಡು ರೊಟ್ಟಿಗಾಗಿ ಎಷ್ಟು ಹೋರಾಡಬಹುದೋ ಅಷ್ಟು ತೀವ್ರವಾಗಿ ಅವನು ಹೋರಾಡಿದ್ದ. ಅವನ ಒಡಲಾಗ್ನಿ […]