ವಂದಿಸು ನೀನು ಮೊದಲು ವಂದಿಸು ನೀನು ಸೃಷ್ಟಿ ಚೆಲುವ ಪ್ರಕೃತಿ ದಿವ್ಯನಿಧಿಗೆ || ಹಿಂಗಾರಿನ ಮುಂಗಾರಿನ ಸ್ವಾತಿ ತನುವ ಹಾಸಿದೊಡಲ ಹಾಲ್‍ಗೆನ್ನೆ ಮಕ್ಕಳ ನಗುವ ದಿಂಚರ ದೃಷ್ಟಿ ತಾಕಿತು ಜೋಕೆ || ಏಳು ಬಣ್ಣಗಳ ಕಾಮನಬಿಲ್ಲ ಸಂಭ್ರಮದೊಲುಮೆಯತ್ತ ಸೋಲಿಲ್...

ಒಂದು ಮುಂಜಾವಿನಲಿ ಹಸಿರುಟ್ಟ ಭಾವಲತೆಯ ಸೆರಗಿನಲ್ಲಿ ಮುತ್ತನಿತ್ತ ಹೂ ನಗೆಯ ಕಂಡೆ || ಸೂರ್ಯಕಿರಣ ಅನಂತದಲ್ಲಿ ಸೃಷ್ಟಿ ಸೊಬಗ ಹಾಸಿಗೆಯಲ್ಲಿ ಮುತ್ತನಿತ್ತ ಹೂ ನಗೆಯ ಕಂಡೆ || ಹೃದಯ ವೀಣಾತರಂಗದಲ್ಲಿ ಮಿಡಿವ ಒಲವಿನಾ ಸ್ಪರ್ಶದಲ್ಲಿ ಮುತ್ತನಿತ್ತ ಹೂ ...

ಹರಿವ ತೊರೆಯ ಅಲೆಅಲೆಗಳಲಿ ನಿನ್ನ ಭಾವ ನರ್ತನ || ತುಡಿವ ಮನಗಳ ಜಾಲದಲಿ ತಣಿವು ಎರೆಯುವ ಚೇತನ || ಸೃಷ್ಟಿ ಸೊಬಗಿನ ಇಳೆಯರಂಗದಲಿ ಪ್ರಕೃತಿ ದೇವಿಯ ನರ್ತನ || ಅರಳು ಮಿಡಿಯುವ ವೀಣೆ ಕೊರಳಲಿ ಉಲಿವ ಗಾಯನ ನೂತನ || ಉದಯ ಕಾಲದ ಬಾನಿನೊಡಲಲಿ ನೂರು ರೂಪ ...

ಅರುಣೋದಯವಾಯ್ತು ಮುದದಿಂದ ಹೊಸವರುಷದ ಹೊಸ ಹಗಲಲ್ಲಿ ನಸುನಾಚುವ ಮೊಗದಲ್ಲಿ || ಇಬ್ಬನಿಯ ತಂಪು ನೀಡಿ ಕಾಲಸೆರೆಯಲ್ಲಿ ನಮ್ಮನು ಮೀಟಿ ಹಗಲು ಇರುಳು ಕಣ್ಣಾಮುಚ್ಚಾಲೆ ಆಡಿಸಿ ಹರುಷವನು ನೀಡಿತು ವರುಷದಲ್ಲಿ || ವರುಷ ಕಳೆದು ವರುಷ ಬರಲು ದಿನಗಳುರುಳೀ ನೋ...

ಇರುಳ ಸಂಜೆಯಲಿ ಚಿಲಿಪಿಲಿನಾದವು ಕೇಳಲು ಸಂಗೀತ || ಮೌನವು ತುಂಬಿದ ಇಳೆಯಲಿ ಹರಿಸಿತು ಮೋದದ ಸಂಗೀತ || ಬಿದಿಗೆ ಚಂದಮನ ಬೆಳದಿಂಗಳ ಸಿಂಚನ ಹೃದಯ ಮಿಡಿಯಲು ಸಂಕೇತ || ಸ್ನೇಹ ಭಾವದಲಿ ಬೀಸುವ ತಂಗಾಳಿ ನಗುಮೊಗದ ಸಂದೇಶ || ಹಕ್ಕಿ ಗೂಡಲ್ಲಿ ಹೊಸತು ಗಾನ...

ದೀಪದಿಂದ ದೀಪ ಹಚ್ಚು ಬೆಳಗಲಿ ಬಾಳದೀವಿಗೆ ಕಳೆದು ತಿಮಿರ ಬೆಳಕು ಬರಲಿ ನಿತ್ಯ ನಮ್ಮ ಬಾಳಿಗೆ || ದೈವನಿತ್ತ ಪ್ರಕೃತಿ ನಮಗೆ ಅದುವೆ ನಮಗೆ ತಾಯಿಯು ಜೀವವುಳಿಸಿ ಬಾಳು ಕೊಡುವ ಅದಕೆ ನಮಿಸು ನಿತ್ಯವು || ಸೂರ್ಯ ಚಂದ್ರ ತಾರಾಗಣವು ನೋಡಲೆಷ್ಟು ಸುಂದರ ಬ...

ಬೇವು ಬೆಲ್ಲದ ಮಾವು ಚಿಗುರಿನ ಹೊಸ ವರುಷ ಹೊನಲು || ಹೊಸ ಹೊಸ ತನುವು ದಿಕ್ಕು ದಿಕ್ಕಿನ ನೆಲೆಯಲಿ ಋತು ಮಿಲನದ ಹಾಡು || ಚೈತ್ರದ ಚಿಗುರಿನ ಜೊನ್ನ ಜೇನಿನ ದುಂಬಿ ಉಲಿದ ಹಾಡು || ದಣಿದಿಹ ಮನಕೆ ಚೈತನ್ಯ ತುಂಬಿದ ಅಗಣಿತ ಮಧುರ ಹಾಡು || ಯುಗ ಯುಗಾದಿಯ...

ಚಿಟ್ಟಿ ನೀ ಸತ್ತು ಬಿದ್ದಿ ಏಕೆ ನಿನ್ನ ಮಾನ ಪ್ರಾಣ ಈಗ ಹಾರಿ ಹೋಯ್ತು ಎಲ್ಲಿಗೆ || ಫಳಫಳನೆ ಹೊಳೆವ ನಿನ್ನ ಮೈಯ ಮುಟ್ಟಿ ನೋಡಿದೆ ನನ್ನ ಮನವು ಕರಗಿತಮ್ಮ || ನಲಿಯುತ್ತ ಹಾರುತ್ತಾ ಬಂದೆ ಹೂವ ತಣಿಸಿ ನಿಂದೆ ಮುಂದೆ ಹೊರಟೆ ನೀ ಎಲ್ಲಿಗೆ || ಯಾವ ಘಳಿ...

ತೆರೆ ಹಾಸು ಪಾಸು ಇಬ್ಬನಿಯ ಹಾಸು ಕಣ್ ಮನವು ತುಂಬಿ ಬಂತು || ನೇಸರನ ಬಿರುಸು ಹೊಸ ಗಾಳಿ ತಂಪು ಬಿರಿದಿರುವ ಸುಮದ ಕಂಪು || ಮುದವಾಗಿ ಬಂತು ಹನಿಯಾಗಿ ಬಂತು ಆ ಸ್ವಾತಿ ಮುತ್ತು ತಂತು || ಅಪ್ಪನ ಆ ಒರಗು ಅವ್ವನ ಆ ಸೆರಗು ಹಿತವಾಯ್ತು ಒಳಗು ಹೊರಗು |...

ಓ ಗೆಳತಿ ನೀನು ಹರೆಯದ ಒಡತಿ || ಎತ್ತ ನೋಡಿದರತ್ತ ರೆಕ್ಕೆಪುಕ್ಕ ಹಚ್ಚಿ ಹಾರಾಡುವ ಹಕ್ಕಿ ||ನೀ|| ಭಾವನೆಗಳ ಹಿಡಿ ಬಿಟ್ಟಿಯಲ್ಲೇ ಭಾಗ್ಯವಂತರ ಜೀವ ರಹದಾರಿಯಲ್ಲಿ ಸುತ್ತಮುತ್ತ ತೂರಿ ಬಿಟ್ಟ ಕನಸುಗಳ ನನಸಾಗುವ ಸಾಗುವಾ ಭ್ರಮಣೆಯಲ್ಲಿ || ಮನಸ ತಿಳಿಯ...

1...1718192021...30